ಮೈಸೂರು ಶೈಲಿಯ ಮಟನ್ ಚಾಪ್ಸ್

ಬೇಕಾಗುವ ಸಾಮಗ್ರಿಗಳು
*ಮಟನ್ – ೧/೨ ಕೆ.ಜಿ
*ಬ್ಯಾಡಗಿ ಮೆಣಸಿನಕಾಯಿ – ೪
*ಅರಿಶಿಣ – ೧/೪ ಚಮಚ
*ಒಣಮೆಣಸಿನ ಕಾಯಿ – ೮
*ಬೆಳ್ಳುಳ್ಳಿ – ೩-೪ ಎಸಳು
*ಚಕ್ಕೆ -೩
*ಲವಂಗ -೪
*ಮೆಣಸು – ೧ ಚಮಚ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ಉಪ್ಪು – ರುಚಿಗೆ ತಕ್ಕಷ್ಟು
*ತುಪ್ಪ – ೧ ಚಮಚ
*ಎಣ್ಣೆ – ಬಾಡಿಸಲು
*ತೆಂಗಿನತುರಿ – ೧/೨ ಕಪ್

ಮಾಡುವ ವಿಧಾನ :

ಚಕ್ಕೆ, ಬೆಳ್ಳುಳ್ಳಿ, ಲವಂಗ, ಮೆಣಸು, ಕೊತ್ತಂಬರಿ ಸೊಪ್ಪು, ಬ್ಯಾಡಗಿ ಮೆಣಸಿನಕಾಯಿ, ಒಣಮೆಣಸಿನಕಾಯಿ, ತೆಂಗಿನತುರಿ, ಮತ್ತು ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ಕುಕ್ಕರ್‌ಗೆ ಎಣ್ಣೆ ಹಾಕಿ. ಬಿಸಿಯಾದ ನಂತರ ಮಟನ್ ಪೀಸ್, ಅರಿಶಿಣ ಪುಡಿ ಹಾಕಿ ಸ್ವಲ್ಪ ಕೈಯಾಡಿಸಿ. ನಂತರ ರುಬ್ಬಿದ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ೪ ವಿಷಲ್ ಕೂಗಿಸಿದರೆ ಮೈಸೂರು ಶೈಲಿಂii ಮಟನ್ ಚಾಪ್ಸ್ ಸವಿಯಲು ಸಿದ್ಧ.