ಮೈಸೂರು ಮಸಾಲ ದೋಸೆ

ಬೇಕಾಗುವ ಸಾಮಗ್ರಿಗಳು

 • ದೋಸೆ ಹಿಟ್ಟು
  *ಆಲೂ ಗಡ್ಡೆ ( ಬೇಯಿಸಿದ್ದು ) – ೨
  *ಈರುಳ್ಳಿ – ೨
  *ಬೆಳ್ಳುಳ್ಳಿ – ೧
  *ಶುಂಠಿ – ೧
  *ಕರಿಬೇವು – ೨೦ ಎಲೆ
  *ಕೊತ್ತಂಬರಿ ಸೊಪ್ಪು –
  *ಎಣ್ಣೆ- ೩ ಚಮಚ
  *ಬೆಣ್ಣೆ – ೧ ಚಮಚ
  *ಹಸಿರು ಮೆಣಸಿನಕಾಯಿ – ೪
  *ಅರಿಶಿಣ – ೧/೨ ಚಮಚ
  *ಕಡಲೆಬೇಳೆ – ೧೦೦ ಗ್ರಾಂ
  *ಹುರಿಗಡಲೆ – ೧೦೦ಗ್ರಾಂ
  *ಬ್ಯಾಡಗಿ ಮೆನಸಿನಕಾಯಿ – ೧೦
  *ತೆಂಗಿನ ಕಾಯಿ ತುರಿ – ೪ ಚಮಚ
  *ತುಪ್ಪ – ೧ ಚಮಚ
  *ಉಪ್ಪು -೧ ಚಮಚ
  *ಸಾಸಿವೆ – ಸ್ವಲ್ಪ

ಮಾಡುವ ವಿಧಾನ :

ಬೌಲಿಗೆ ಬೇಯಿಸಿ ಕಟ್ ಮಾಡಿದ ಆಲೂಗಡ್ಡೆ ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ. ಅರಿಶಿಣ ಪುಡಿ, ಉಪ್ಪು, ಹಾಖಿ ಕಲಸಿ. ಬಾಣಲಿಗೆ ಎಣ್ಣೆ ಹಾಕಿ. ಕಾದ ನಂತರ ಸಾಸಿವೆ, ಕಡಲೆಬೇಳೆ, ಉದ್ದಕ್ಕೆ ಹೆಚ್ಚಿದ ಈರುಳ್ಳಿ, ಶುಂಠಿ, ಚಿಕ್ಕದಾಗಿ ಹೆಚ್ಚಿದ ಹಸಿರು ಮೆಣಸಿನಕಾಯಿ, ಕರಿಬೇವು ಹಾಕಿ ಕೆಂಪಗೆ ಹುರಿಯಿರಿ. ಇದಕ್ಕೆ ಮ್ಯಾಶ್ ಮಾಡಿಟ್ಟ ಆಲೂ ಗಡ್ಡೆ, ಉಪ್ಪು ಹಾಕಿ ಬೆರೆಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ ಪಲ್ಯ ರೆಡಿ ಮಾಡಿಕೊಳ್ಳಿ.
ಹುರಿಗಡಲೆ, ನೆನೆಸಿದ ಬ್ಯಾಡಗಿ ಮೆಣಸಿನಕಾಯಿ, ಬೆಳ್ಳುಳ್ಳಿ, ಈರುಳ್ಳಿ, ಉಪ್ಪು, ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು, ಕೆಂಪು ಚಟ್ನಿ ತಯಾರಿಸಿಕೊಳ್ಳಿ.
ತೆಂಗಿನಕಾಯಿ ತುರಿ, ಹಸಿರು ಮೆಣಸಿನಕಾಯಿ, ಉಪ್ಪು, ಸ್ವಲ್ಪ ನೀರು ಹಾಕಿ ರುಬ್ಬಿಕೊಂಡು ತೆಂಗಿನಕಾಯಿ ಚಟ್ನಿ ರೆಡಿ ಮಾಡಿಕೊಳ್ಳಿ.
ಹೆಂಚಿಗೆ ದೋಸೆಹಿಟ್ಟನ್ನು ಹುಯ್ದು ಕಾಯಿಸಿ. ತಯಾರಾದ ದೋಸೆಯ ಮೇಲೆ ಎಣ್ಣೆ ಮತ್ತು ಕೆಂಪು ಚಟ್ನಿ ಸವರಿ. ಮಧ್ಯಭಾಗಕ್ಕೆ ರೆಡಿಮಾಡಿಕೊಂಡ ಪಲ್ಯ ಇಡಿ. ದೋಸೆಯನ್ನು ಸರಿಯಾಗಿ ಅರ್ಧ ಭಾಗಕ್ಕೆ ಮಡಚಿ. ಮೇಲೆ ಬೆಣ್ಣೆ ಇಟ್ಟರೆ, ಚಟ್ನಿಯೊಂದಿಗೆ ಮಸಾಲ ದೋಸೆ ತಿನ್ನಲು ರೆಡಿ.