
ಮೈಸೂರು: ಮಾ.18:- ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇನಲ್ಲಿ ಹೆಚ್ಚು ಟೋಲ್ ಸಂಗ್ರಹಿಸುತ್ತಿರುವುದನ್ನು ಖಂಡಿಸಿ ಮೈಸೂರಿನ ಮಣಿಪಾಲ ವೃತ್ತದಲ್ಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ನೇತೃತ್ವದಲ್ಲಿ ಬೃಹತ್ ಶಾಂತಿಯುತ ಪ್ರತಿಭಟನೆ ನಡೆಯಿತು.
ದುಬಾರಿ ಟೋಲ್ ಸಂಗ್ರಹಿಸುತ್ತಿರುವುದರ ವಿರುದ್ಧ ಮಣಿಪಾಲ ವೃತ್ತದಲ್ಲಿ ಸಮಾವೇಶಗೊಂಡ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಕನ್ನಡ ಚಳವಳಿ ಸಂಘ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ದೇವರಾಜ ಅರಸು ಪ್ರತಿಮೆ ನಿರ್ಮಾಣ ಸಮಿತಿ, ಕನ್ನಡ ವೇದಿಕೆ ಪ್ರಮುಖರು ಸೇರಿ ವಿವಿಧ ಸಂಘಟನೆಗಳು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಿ.ಮೀ.ಗೆ 1ರೂ ಸಾಕು, ಟೋಲ್ ದರ 1ಕ್ಕೆ ನಿಗದಿಯಾಗಬೇಕು, ದುಬಾರಿ ಬೆಲೆಗೆ ಜನ ಕುಸಿದಿದ್ದಾರೆ, ಟೋಲ್ ಶುಲ್ಕದ ಭಾರಕ್ಕೆ ನರಳುತ್ತಿದ್ದಾರೆ ಎಂಬಿತ್ಯಾದಿ ಘೋಷಣೆಗಳ ಫಲಕ ಪ್ರದರ್ಶಿಸಿ ಟೋಲ್ ಸಂಗ್ರಹ ವಿರೋಧಿಸಿದರು.
ಈ ವೇಳೆ ಮಾತನಾಡಿದ ಎಂಎಲ್‍ಸಿ ಎಚ್.ವಿಶ್ವನಾಥ್, ?ಏ ಮೋದಿ, ಏನಪ ನಿಂದು ಅಂದಾ ದರ್ಬಾರ್?. ಚರ್ಚೆಯಿಲ್ಲದೆ ಕಾಯ್ದೆಗಳು ಪಾಸ್ ಆಗುತ್ತವೆ. ಸೇವೆಯೇ ಇಲ್ಲದೆ ಟೋಲ್ ಸಂಗ್ರಹ ಮಾಡ್ತೀರಾ. ನಿಮ್ಮ ಸರ್ಕಾರದಿಂದ ಪ್ರಜಾಪ್ರಭುತ್ವ ಹಾಳಾಗುತ್ತಿದೆ. ಈ ಹೆದ್ದಾರಿಗಾಗಿ 2,600 ಎಕರೆ ರೈತರ ಜಮೀನು ಹೋಗಿದೆ. ಮಂಡ್ಯ ಭಾಗದ ನೂರಾರು ಕುಟುಂಬಗಳು ಬೀದಿಗೆ ಬಂದಿವೆ. ಜನ ವಿರೋಧಿ ಯೋಜನೆ ಮಾಡಿ ಟೋಲ್ ಸಂಗ್ರಹ ನೆಪದಲ್ಲಿ ಹಗಲು ದರೋಡೆಗೆ ಇಳಿದಿದ್ದೀರಿ. ರಸ್ತೆ ಬೇಕು ಎಂದು ಯಾರು ಕೇಳಿದ್ದರು. 4 ಪಥ ರಸ್ತೆಯೇ ಸಾಕಾಗಿತ್ತು. 10 ಪಥದ ರಸ್ತೆ ಮಾಡಿದ್ದೀರಾ. ಆದರೆ, ಬಡವರು ಓಡಾಡುವ ಸರ್ವಿಸ್ ರಸ್ತೆ ಎಲ್ಲಿದೆ. ಅಪಘಾತವಾದರೆ ಚಿಕಿತ್ಸೆ ನೀಡಲು ಟ್ರಾಮಾ ಆಸ್ಪತ್ರೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಸಂಸದ ಪ್ರತಾಪ ಸಿಂಹ ಮಿನಿ ಕಂಟ್ರಾಕ್ಟರ್. ನಿನ್ನ ಕೆಲಸ ಏನು, ಹೆದ್ದಾರಿ ವಿಚಾರದಲ್ಲಿ ನೀನು ಮಾಡಿದ್ದೇನು. ರಸ್ತೆಗೆ ಕಚ್ಚಾವಸ್ತು ಪೂರೈಕೆ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ದಿನ ಬೆಳಗಾದರೆ ಹೆದ್ದಾರಿಯ ಫೇಸ್‍ಬುಕ್ ಲೈವ್‍ಗೆ ಬರುತ್ತೀಯಾ. ಆದರೆ, ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಬಾಣಂತಿ ಮಕ್ಕಳು ಸಾಯುತ್ತಿದ್ದಾರೆ. ಅವರನ್ನೂ ನೋಡಪ್ಪ, ಅಲ್ಲಿ ಹೋಗಿ ಪ್ರೆಸ್ ಮೀಟ್ ಮಾಡಪ್ಪ. ಎಲ್ಲವೂ ಸರಿಯಾಗಿದೆ. ಸುಮ್ಮನೆ ಜನ ಗಲಾಟೆ ಮಾಡ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಜತೆಗೆ ಪಂಥಾಹ್ವಾನ ಸಹ ಕೊಟ್ಟಿದ್ದಾರೆ. ಬರಲಿ ಬೇಕಾದರೆ ಯಾವಾಗ ಎಂದು ಒಂದು ದಿನಾಂಕ ನಿಗದಿ ಮಾಡಿ ನಾವು ಬರಲು ಸಿದ್ಧ ಎಂದು ಸವಾಲು ಹಾಕಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೆÇಲೀಸ್ ಬಂದೋ ಬಸ್ತ್ ಮಾಡಲಾಗಿತ್ತು. ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ಇತಿಹಾಸತಜ್ಞ ಪೆÇ್ರ.ನಂಜರಾಜ ಅರಸ್, ಎಎಪಿ ನರಸಿಂಹರಾಜ ಕ್ಷೇತ್ರದ ಆಕಾಂಕ್ಷಿ ಧರ್ಮಶ್ರೀ, ಕಾಂಗ್ರೆಸ್ ಮುಖಂಡ ನವೀನ್‍ಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಪಿ.ಪ್ರಶಾಂತ್ ಗೌಡ, ಕನ್ನಡ ಪರ ಹೋರಾಟಗಾರ ಶಿವಶಂಕರ್, ಅರವಿಂದ ಶರ್ಮ, ಬೋಗಾದಿ ಸಿದ್ದೇಗೌಡ, ಎಎಪಿಯ ಮಾಳವಿಕಾ ಗುಬ್ಬಿವಾಣಿ, ಎಂ.ಎಫ್.ಕಲೀಂ ಸೇರಿ ಹಲವರು ಭಾಗವಹಿಸಿದ್ದರು.