ಮೈಸೂರು ದಸರಾ ಗಜಪಡೆಗೆ ಅಭಿಮನ್ಯು ನೇತೃತ್ವ

ಮೈಸೂರು, ಆ ೬- ಮೈಸೂರು ದಸರಾಗೆ ಸಕಲ ಸಿದ್ಧತೆಗಳು ನಡೆದಿವೆ.ಇನ್ನು ಈ ಬಾರಿ ಜಂಬೂಸವಾರಿಯಲ್ಲಿ ಭಾಗವಹಿಸಲಿರುವ ಆನೆಗಳ ಪಟ್ಟಿಯನ್ನೂ ಸಹ ಅಂತಿಮಗೊಳಿಸಲಾಗಿದೆ.
ಇನ್ನು ಈ ಬಾರಿ ಒಟ್ಟು ೧೪ ಆನೆಗಳ ಜಂಬುಸವಾರಿಯಲ್ಲಿ ಭಾಗಿಯಾಗಲಿವೆ. ಈ ೧೪ ಆನೆಗಳ ಪೈಕಿ ಹೆಣ್ಣಾನೆಗಳಿಗೆ ಸ್ಥಾನ ನೀಡಲಾಗಿದ್ದು, ಅಭಿಮನ್ಯು ನೇತೃತ್ವದಲ್ಲಿ ಗಜಪಡೆ ಮೈಸೂರು ದಸರಾಗೆ ಮೆರುಗು ತರಲಿದೆ.
ಮೊದಲ ತಂಡದಲ್ಲಿ ೯ ಆನೆಗಳು ಆಗಸ್ಟ್ ೭ ರಂದು ಹುಣಸೂರು ತಾಲೂಕಿನ ವೀರಣನ ಹೊಸಹಳ್ಳಿ ಪ್ರದೇಶದಿಂದ ಗಜಪಡೆಯ ಮೊದಲತಂಡ ಆಗಮಿಸಲಿದೆ., ಮತ್ತಿಗೋಡು ಆನೆ ಶಿಬಿರದಿಂದ ೫೭ ವರ್ಷದ ಅಭಿಮನ್ಯು, ೨೨ ವರ್ಷದ ಭೀಮ, ೩೮ ವರ್ಷದ ಮಹೇಂದ್ರ ಹಾಗೂ ೩೯ ವರ್ಷದ ಗೋಪಲಸ್ವಾಮಿ ಆಯ್ಕೆಯಾಗಿವೆ.
ಬಳ್ಳೆ ಆನೆ ಶಿಬಿರದಿಂದ ೬೩ ವರ್ಷದ ಅರ್ಜುನ. ದುಬಾರೆ ಆನೆ ಶಿಬಿರದಿಂದ೫೯ ವರ್ಷದ ವಿಕ್ರಮ, ೪೪ ವರ್ಷದ ಧನಂಜಯ, ೪೫ ವರ್ಷದ ಕಾವೇರಿ, ೪೧ ವರ್ಷದ ಗೋಪಿ, ೪೦ ವರ್ಷದ ಶ್ರೀರಾಮ ಹಾಗೂ ೬೩ ವರ್ಷದ ವಿಜಯ ಆನೆ ಮೈಸೂರಿಗೆ ಬರಲಿವೆ.ರಾಮಾಪುರ ಆನೆಶಿಬಿರದಿಂದ ೪೯ ವರ್ಷದ ಚೈತ್ರಾ, ೨೧ ವರ್ಷದ ಲಕ್ಷ್ಮಿ ಹಾಗೂ೧೮ ವರ್ಷದ ಪಾರ್ಥಸಾರಥಿ ಆನೆಗಳು ಆಗಮಿಸಲಿವೆ.
ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ಕಳೆಗಟ್ಟಲು ಆರಂಭವಾಗಿದೆ. ಆಗಸ್ಟ್ ೭ ರಂದು ದಸರಾ ಗಜಪಡೆಗೆ ಸ್ವಾಗತ ಸಿಗಲಿದ್ದು, ಅರಮನೆಗೆ ಬರುವ ಮಾವುತ ಕಾವಾಡಿ ಕುಟುಂಬಗಳಿಗಾಗಿ ತಾತ್ಕಾಲಿಕ ಶೆಡ್‌ಗಳು ನಿರ್ಮಾಣಗೊಳ್ಳುತ್ತಿವೆ. ಕಳೆಗಟ್ಟಿದ ಅರಮನೆ ಅಂಗಳದಲ್ಲಿ ೪೦ ಕುಟುಂಬಗಳ ವಾಸ್ತವ್ಯಕ್ಕೆ ಶೆಡ್ ನಿರ್ಮಾಣ ಮಾಡಲಾಗುತ್ತಿದೆ. ಗಜಪಡೆ ಆಗಮನಕ್ಕೂ ಒಂದು ವಾರ ಮುನ್ನವೇ ಶೆಡ್ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ.