ಮೈಸೂರು ತಿಳಿಸಾರು

ಬೇಕಾಗುವ ಸಾಮಗ್ರಿಗಳು

*ಬ್ಯಾಡಗಿ ಮೆಣಸಿನಕಾಯಿ – ೧೫೦ ಗ್ರಾಂ
*ಮೈಸೂರು ತಿಳಿಸಾರಿನ ಪುಡಿ – ೨೫೦ ಗ್ರಾಂ
*ಅರಿಶಿಣ – ೧/೨ ಚಮಚ
*ಸಾಸಿವೆ
*ಜೀರಿಗೆ
*ಎಣ್ಣೆ
*ಕರಿಬೇವು
*ಟೊಮೆಟೊ
*ಉಪ್ಪು
*ಹುಣಸೇ ರಸ
*ಬೆಲ್ಲ
*ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ :

ಕುಕ್ಕರ್‌ಗೆ ನೀರು, ತೊಗರಿಬೇಳೆ, ಅರಿಶಿಣ, ಕರಿಬೇವು, ಎಣ್ಣೆ ಹಾಕಿ ೨ ವಿಷಲ್ ಕೂಗಿಸಿ. ಬಾಣಲಿಗೆ ಎಣ್ಣೆ ಹಾಕಿ ಕಾಯಿಸಿ. ಇದಕ್ಕೆ ಸಾಸಿವೆ, ಜೀರಿಗೆ, ಬ್ಯಾಡಗಿ ಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಚಿಕ್ಕದಾಗಿ ಹೆಚ್ಚಿದ ಟೊಮೆಟೊ, ಹುಣಸೇರಸ, ಬೆಲ್ಲ, ಇಂಗು, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕೈಯಾಡಿಸಿ. ರೆಡಿ ಮಾಡಿದ ಮೈಸೂರು ಸಾಂಬಾರ್ ಪುಡಿ, ಅಗತ್ಯಕ್ಕೆ ತಕ್ಕಷ್ಟು ನೀರಿನೊಂದಿಗೆ, ಬೇಯಿಸಿದ ತೊಗರಿಬೇಳೆಯ ನೀರನ್ನು ಇದಕ್ಕೆ ಹಾಕಿ ಬೇಯಿಸಿದರೆ ಮೈಸೂರು ತಿಳಿಸಾರು ಸವಿಯಲು ರೆಡಿ.