
ಬೇಕಾಗು ಸಾಮಗ್ರಿಗಳು
*ಬ್ಯಾಡಗಿ ಮೆಣಸಿನಕಾಯಿ – ೧೫೦ ಗ್ರಾಂ
*ಧನಿಯಾ – ೪ ಚಮಚ
*ಕಾಳು ಮೆಣಸು – ೨ ಚಮಚ
*ಮೆಂತ್ಯೆ – ೧ ಚಮಚ
*ಜೀರಿಗೆ – ೪ ಚಮಚ
*ಕರಿಬೇವು – ೧೦ ಎಲೆ
*ಇಂಗು – ೧/೩ ಚಮಚ
*ಉಪ್ಪು – ೧ ಚಮಚ
*ಎಣ್ಣೆ – ೩ ಚಮಚ
ಮಾಡುವ ವಿಧಾನ :
ಬಾಣಲಿಗೆ ಎಣ್ಣೆ ಹಾಕಿ ಬಿಸಿಯಾದ ನಂತರ ಮೆಂತ್ಯ, ಕಾಳು ಮೆಣಸು ಹಾಕಿ ಹುರಿಯಿರಿ. ಇದಕ್ಕೆ ಕರಿಬೇವು, ಧನಿಯಾ, ಬ್ಯಾಡಗಿ ಮೆಣಸಿನಕಾಯಿ, ಇಂಗು, ಜೀರಿಗೆ ಹಾಕಿ ಚೆನ್ನಾಗಿ ಫ್ರೈ ಮಾಡಿ. ತಣ್ಣಗಾದ ನಂತರ ನುಣ್ಣಗೆ ಪುಡಿ ಮಾಡಿ ಕೊಂಡರೆ, ಘಮಘಮಿಸುವ ಮೈಸೂರು ತಿಳಿಸಾರಿನ ಪುಡಿ ರೆಡಿ.