ಮೈಸೂರು ಟ್ರಾಫಿಕ್ ಎ.ಎಸ್.ಐ ಆತ್ಮಹತ್ಯೆ

ಮೈಸೂರು: ನ.14:- ಡೆತ್ ನೋಟ್ ಬರೆದು ಟ್ರಾಫಿಕ್ ಎ.ಎಸ್.ಐ ಆತ್ಮಹತ್ಯೆ ಶರಣಾಗಿರುವ ಘಟನೆ ನೆಡೆದಿದ್ದೆ.
ಮೃತ ಎ.ಎಸ್.ಐ ಶಿವಕುಮಾರಸ್ವಾಮಿ (54) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ.
ಅವರು ಮೈಸೂರಿನ ಗೌರಿ ಶಂಕರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೈಸೂರು ವಿವಿ ಪುರಂ ಟ್ರಾಫಿಕ್ ಪೆÇಲೀಸ್ ಠಾಣೆಯ ಎ.ಎಸ್.ಐ ಆಗಿ ಕಾರ್ಯ ನಿರ್ವಹಿಸಿತ್ತಿದ್ದರು. ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದು ಬಂದಿದೆ. ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದೆ.
ಈ ಪ್ರಕರಣ ಕೆ.ಆರ್.ಠಾಣಾ ಪೆÇಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.