ಮೈಸೂರು ಉಪ್ಪಾರ ನೌಕರರ ಸಂಘದಿಂದ ಡಾ.ಎಂ.ಚನ್ನಶೆಟ್ಟಿರಿಗೆ ಸನ್ಮಾನ

ಚಾಮರಾಜನಗರ, ಜ.3- ಮೈಸೂರು ಜಿಲ್ಲಾ ಉಪ್ಪಾರ ನೌಕರರ ಸಂಘ ಹಾಗೂ ವೃತ್ತಿಪರರ ಸಂಘದ sವತಿಯಿಂದ ಜ.10 ರಂದು ಮೈಸೂರಿನ ಕಲಾಮಂದಿರದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಪಟ್ಟಣದ ನಿಸರ್ಗ ಶಿಕ್ಷಣ ಮಹಾವಿದ್ಯಾಲಯದ(ಬಿ.ಇಡಿ) ಪ್ರಾಂಶುಪಾಲರಾದ ತಾಲ್ಲೂಕಿನ ಮಧುವಿನಹಳ್ಳಿ ಗ್ರಾಮದ ಡಾ.ಎಂ.ಚನ್ನಶೆಟ್ಟಿ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಗುರುತಿಸಿ ಗೌರವ ಡಾಕ್ಟರೇಟ್ ಬಂದಿರುವ ಹಿನ್ನಲೆಯಲ್ಲಿ ಅವರಿಗೆ ಅಂದು ನಡೆಯುವ ಕಾರ್ಯಕ್ರಮದಲ್ಲಿ ಸನ್ಮಾನದ ಗೌರವಕ್ಕೆ ಪಾತ್ರರಾಗಿದ್ದಾರೆ.ಈ ಹಿನ್ನಲೆಯಲ್ಲಿ ಡಾ.ಎಂ.ಚನ್ನಶೆಟ್ಟಿ ಅವರನ್ನು ವಿದ್ಯಾರ್ಥಿಗಳು, ಕಾಲೇಜಿನ ಸಹಾಯಕ ಪ್ರಾಧ್ಯಾಪಕರುಗಳು ಅಭಿನಂದಿಸಿದ್ದಾರೆ.