ಮೈಸೂರಿನಿಂದ ಆಗಮಿಸಿದ ನೀರು ಕುದುರೆ!

ಶಿವಮೊಗ್ಗ, ನ. 7: ಶಿವಮೊಗ್ಗ ನಗರ ಹೊರವಲಯ ತ್ಯಾವರೆಕೊಪ್ಪ ಹುಲಿ-ಸಿಂಹಾಧಾಮಕ್ಕೆ ಹೊಸ ಅತಿಥಿ ಆಗಮನವಾಗಿದೆ! ಮೈಸೂರು ನಗರದ ಜಯಚಾಮರಾಜೇಂದ್ರ ಒಡೆಯರ್ ಮೃಗಾಲಯದಲ್ಲಿದ್ದ, ನೀರು ಕುದುರೆಯನ್ನು ತ್ಯಾವರೆಕೊಪ್ಪ ಸಫಾರಿಗೆ ತರಲಾಗಿದೆ.
‘ದಿವಾ’ ಎಂಬ ಹೆಸರಿರುವ ನೀರು ಕುದುರೆಯನ್ನು ಟ್ರಕ್ ಮೂಲಕ ಸುರಕ್ಷಿತವಾಗಿ ಮೃಗಾಲಯಕ್ಕೆ ತರಲಾಗಿದೆ. ಈ ಮೊದಲು ತ್ಯಾವರೆಕೊಪ್ಪದಲ್ಲಿ ನೀರು ಕುದುರೆ ಪ್ರಾಣಿಯಿರಲಿಲ್ಲ. ಹೊಸ ಅತಿಥಿಯ ವೀಕ್ಷಣೆಗೆ, ಸಫಾರಿಗೆ ಆಗಮಿಸುವ ವನ್ಯಪ್ರೇಮಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಸಫಾರಿಯ ಅಧಿಕಾರಿಗಳದ್ದಾಗಿದೆ.
ಇಷ್ಟರಲ್ಲಿಯೇ ಮತ್ತೊಂದು ನೀರು ಕುದುರೆಯನ್ನು ಸಿಂಹಧಾಮಕ್ಕೆ ತರಲಾಗುವುದು ಎಂದು ಸಫಾರಿಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಡಿ.ಎಫ್.ಓ. ಮುಕುಂದ್ ಚಂದ್ ರವರು ಸುದ್ದಿಗಾರರಿಗೆ ತಿಳಿಸಿದ್ದಾರೆ.