ಮೈಸೂರಿನಲ್ಲಿ ಹುತಾತ್ಮರಿಗೆ ಗೌರವ ಸಮರ್ಪಣೆ

ಮೈಸೂರು:ಮಾ:23: ಟೀಂ ಮೈಸೂರು ವತಿಯಿಂದ ಇಂದು ಭಾರತದ ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣಾರ್ಪಣೆ ಮಾಡಿದ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ,ರಾಜ್ ಗುರು, ಸುಖ್ ದೇವ್, ಅವರ ಹುತಾತ್ಮ ದಿನವಾಗಿ ಮೈಸೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿರುವ ಹುತಾತ್ಮರ ಪುತ್ತಳಿಗೆ ಪುಷ್ಪಾರ್ಚನೆ ಮಾಡುವ ಮುಖಾಂತರ ಗೌರವ ಸಲ್ಲಿಸಲಾಯಿತು ,ಅಮರ್ ರಹೇ ಅಮರ್ ರಹೇ, ಭಗತ್ ಸಿಂಗ್ ಅಮರ್ ರಹೇ ,ರಾಜಗುರು ಅಮರ್ ರಹೇ, ಸುಖ್ ದೇವ್ ಅಮರ್ ರಹೇ ಎಂಬ ಘೋಷಣೆಗಳನ್ನು ಕೂಗಿ ಮೂವರು ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು ತಂಡದ ಸಂಚಾಲಕರಾದ ಗೋಕುಲ್ ಗೋವರ್ಧನ್ ಅವರು ಭಗತ್ ಸಿಂಗ್ ರಾಜ್ ಗುರು ಸುಖ್ ದೇವ್ ರವರು ತಮ್ಮ 25ರ ವಯಸ್ಸಿನ ಆಜುಬಾಜಿನಲ್ಲಿ ಈ ಮೂರು ತಮ್ಮ ಪ್ರಾಣವನ್ನು ದೇಶಕ್ಕಾಗಿ ಸಮರ್ಪಿಸಿದ್ದಾರೆ ಇಂತಹ ಕ್ರಾಂತಿಕಾರಿಗಳ ಹೋರಾಟದಿಂದ ಭಾರತಕ್ಕೆ ಸ್ವತಂತ್ರ ಲಭಿಸಿದ್ದು ಇವರ ಬಲಿದಾನವನ್ನು ನಾವೆಷ್ಟು ಸ್ಮರಿಸಿದರು ಕಡಿಮೆಯೆ, ಇಂದಿನ ಯುವಕರಿಗೆ ಇವರೇ ಪ್ರೇರಣಾದಾಯಕರು ಇಂತಹವರ ಜೀವನ ಚರಿತ್ರೆಯು ಮುಂದಿನ ಪೀಳಿಗೆಗಳಿಗೆ ಹೆಚ್ಚು ಹೆಚ್ಚು ತಿಳಿಯಬೇಕು , ಪಠ್ಯಕ್ರಮಗಳಲ್ಲಿ ಸೇರಿಸಿ ಹೆಚ್ಚು ತಿಳಿಸುವ ಮುಖಾಂತರ ಸರ್ಕಾರಗಳು ಕ್ರಮ ವಹಿಸಬೇಕೆಂದು ತಿಳಿಸಿದರು
ಈ ಸಂದರ್ಭದಲ್ಲಿ ತಂಡದ ಹಿರಿಯ ಸದಸ್ಯರಾದ ಹಿರಿಯನಣ್ಣ, ಹರೀಶ್ ಬಾಬು, ಹರೀಶ್, ಆನಂದ್, ಅನಿಲ್ ಜೈನ್, ಸಂತೋಷ್, ರಾಜೇಶ್, ಯತೀಶ್ ಅಮರ್ , ಮಂಜು ಹಾಗೂ ಇನ್ನಿತರರು ಉಪಸ್ಥಿತರಿದ್ದರು