ಮೈಸೂರಿನಲ್ಲಿ ವೀಕೆಂಡ್ ಕಫ್ರ್ಯೂ ಜಾರಿ

ಫೀಲ್ಡಿಗಿಳಿದ ಖಾಕಿ ಪಡೆ: ಎಲ್ಲ ವ್ಯವಹಾರಗಳಿಗೂ ಬಂದ್
ಮೈಸೂರು: ಏ.24: ಕೋವಿಡ್ ನಿಯಂತ್ರಣಕ್ಕೆ ವಾರಾಂತ್ಯ ಕಫ್ರ್ಯೂ ವಿಧಿಸಲಾಗಿದ್ದು, ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಜನಜೀವನ ಸ್ತಬ್ಧವಾಗಿತ್ತು.
ನಗರದಲ್ಲಿ ಇಂದು ಬೆಳಿಗ್ಗೆ 10 ಗಂಟೆಯ ಜನರು ಹಾಗೂ ವಾಹನಗಳ ಓಡಾಟ ಕ್ಷೀಣಿಸಿರುವ ದೃಶ್ಯ ಕಂಡುಬಂತು. 10 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅನುವು ಮಾಡಿಕೊಡಲಾಗಿತ್ತು. ಬಳಿಕ ಜನರ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕುವ ಕಾರ್ಯಕ್ಕೆ ಪೆÇಲೀಸರು ಮುಂದಾದರು.
ವೀಕೆಂಡ್ ಕಫ್ರ್ಯೂ ಜಾರಿ ಹಿನ್ನೆಲೆಯಲ್ಲಿ ಡಿಸಿಪಿ ಪ್ರಕಾಶ್ ಗೌಡ ನಗರ ಪ್ರದಕ್ಷಿಣೆ ಹಾಕಿ ಪರಿಶೀಲನೆ ನಡೆಸಿದರು. ಮೈಸೂರಿನ ಪ್ರಮುಖ ವೃತ್ತ, ರಸ್ತೆಗಳಲ್ಲಿ ವ್ಯವಸ್ಥೆ ವೀಕ್ಷಣೆ ಮಾಡುತ್ತಿದ್ದು, ಅನಗತ್ಯವಾಗಿ ಓಡಾಡುವವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ.
ನೆನ್ನೆ ಮದುವೆ ಕಾರ್ಯಕ್ರಮವೊಂದರಲ್ಲಿ ಅಗತ್ಯಕ್ಕೂ ಹೆಚ್ಚು ಮಂದಿ ಸೇರಿದ್ದರಿಂದ ಪ್ರಕರಣ ದಾಖಲಿಸಿದ್ದೇವೆ. ಅಗತ್ಯ ವಸ್ತು ಖರೀದಿಗೆ 10ಗಂಟೆಯ ವರಗೆ ಅವಕಾಶ ಮಾಡಿಕೊಡಲಾಗಿತ್ತು. ಈಗ ಅದನ್ನು ಸಹ ನಿಲ್ಲಿಸಲಾಗಿದೆ ಎಂದು ವ್ಯವಸ್ಥೆ ವೀಕ್ಷಣೆ ಬಳಿಕ ಡಿಸಿಪಿ ಪ್ರಕಾಶ್ ಗೌಡ ಹೇಳಿಕೆ ನೀಡಿದರು.


ಬೆಳಿಗ್ಗೆ 10 ಘಂಟೆಯ ನಂತರ ತರಕಾರಿ, ಹಣ್ಣು, ದಿನಸಿ ವ್ಯಾಪಾರ ವಹಿವಾಟು ಅಂತ್ಯವಾಗಿದೆ. ಎಲ್ಲ ವ್ಯವಹಾರಗಳಿಗೂ ಬಂದ್ ಆಗಿದೆ. ಅವಧಿ ಮೀರಿ ವ್ಯಾಪಾರ ನಡೆಸುತ್ತಿದ್ದ ಶೆಟರ್ ಎಳೆದ ವರ್ತಕರು ಫೀಲ್ಡಿಗಿಳಿದ ಖಾಕಿ ಪಡೆಗೆ ಸಹಕರಿಸಿದರು. ಅಂಗಡಿ ಮುಚ್ಚಿ ಮನೆಗಳಿಗೆ ತೆರಳಿದ ವರ್ತಕರು. ದೇವರಾಜ ಮಾರುಕಟ್ಟೆ ಸೇರಿದಂತೆ ಎಲ್ಲಕಡೆಯು ಸಂಪೂರ್ಣ ಸ್ತಬ್ಧವಾಗಿದೆ.
ಮೊದಲ ದಿನದ ವೀಕೆಂಡ್ ಕಫ್ರ್ಯೂ ಇದೀಗ ಪ್ರಾರಂಭವಾಗಿದ್ದು, ಗಂಟುಮೂಟೆ ಸಮೇತ ತಮ್ಮ ನಿವಾಸಗಳತ್ತ ವ್ಯಾಪಾರಸ್ಥರು ತೆರಳಿದರು.
ಸದಾ ವಾಹನಗಳ ಸಂಚಾರದಿಂದ ಗಿಜಿಗುಡುತ್ತಿದ್ದ ಮೈಸೂರಿನಲ್ಲಿ ಬೆರಳೆಣಿಕೆ ವಾಹನಗಳಷ್ಟೇ ರಸ್ತೆಗಿಳಿದಿದ್ದವು. ಮೈಸೂರಿನ ಪ್ರಮುಖ ವಾಣಿಜ್ಯ ಸ್ಥಳಗಳಲ್ಲಿ ನೀರವ ಮೌನ ಆವರಿಸಿತ್ತು. ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಅಶೋಕರಸ್ತೆ ಸೇರಿದಂತೆ ಮೈಸೂರಿನ ಪ್ರಮುಖ ರಸ್ತೆಗಳಲ್ಲಿ 10 ಗಂಟೆ ನಂತರ ಎಲ್ಲಾ ಬಗೆಯ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಳಿಸಲಾಯಿತು.