ಮೈಸೂರಿನಲ್ಲಿ ಪೈಲಟ್ ಪ್ರಾಜೆಕ್ಟ್ ಕಾರ್ಯರೂಪಕ್ಕೆ : ಶಾಸಕ ಎಸ್.ಎ.ರಾಮದಾಸ್

ಮೈಸೂರು,ನ.11:- ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ನಮೋದಿವಸ್ ನಮಸ್ಕಾರ್ ಫೆಸ್ಟಿವಲ್ ಆಫ್ ಡೆವಲಪ್ ಮೆಂಟ್ಸ್ ಎಂಬ ರಾಷ್ಟ್ರೀಯ ಮಟ್ಟದ 2ತಿಂಗಳ ಆನ್ಲೈನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, 197 ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಯಾವುದಾದರೂ ಏಳು ಯೋಜನೆಗಳ ಕುರಿತು ಸಲಹೆ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಅವರು ನೀಡಿದ ಸಲಹೆ ಸೂಚನೆಗಳನ್ನು ಮೈಸೂರಿನಲ್ಲಿ ಪೈಲಟ್ ಪ್ರಾಜೆಕ್ಟ್ ಆಗಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ನಮೋ ದಿವಸ್ ನಮಸ್ಕಾರವನ್ನು ರಾಷ್ಟ್ರವ್ಯಾಪಿ ಪಸರಿಸಲಾಗಿದ್ದು ಇನ್ನೂ ಹೆಚ್ಚು ಜನರು ಭಾಗವಹಿಸುವುದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಸಹಕಾರಿಯಾಗಲಿದೆ ಎಂದರು.
ನಮೋ ದಿವಸ್ ನಮಸ್ಕಾರ್ ಫೆಸ್ಟಿವಲ್ ಆಫ್ ಡೆವಲಪ್ ಮೆಂಟ್ಸ್ ಕಾರ್ಯಕ್ರಮವನ್ನು ಕೇವಲ ಸ್ಪರ್ಧೆಯಾಗಿ ನೋಡದೆ ದೇಶದ ಅಭಿವೃದ್ಧಿಗಾಗಿ ನಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡುವುದರಿಂದ ದೇಶ ಸೇವೆಯಲ್ಲಿ ಭಾಗವಹಿಸುವಂತಾಗುತ್ತದೆ. ವಿಜೇತರ ಆಯ್ಕೆಗೆ ಬಿಜೆಪಿ ರಾಷ್ಟ್ರೀಯ ವಕ್ತಾರ ನುಪುರ್ ಶರ್ಮಾ, ದೆಹಲಿ ವಕ್ತಾರ ತಜೀಂದರ್ ಪಾಲ್ ಸಿಂಗ್ ಬಗ್ಗಾ, ನಮೋ ಕ್ಯಾಂಪೇನ್ ವಿಕಾದ್ ಪಾಂಡೆ, ಪಾಲಿಸಿ ಎಕ್ಸಫರ್ಟ್ ದಾವಲ್ ಪಟೇಲ್, ಲೇಖಕ ಹರ್ಷ ಮಧುಸೂದನ್, ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ ಪ್ರಾದೇಶಿಕ ನಿರ್ದೇಶಕ ಡಾ.ಜಿಗರ್ ಇನಾಂದಾರ್, ಎಬಿವಿಪಿ ರಾಷ್ಟ್ರೀಯ ಮಾಧ್ಯಮ ಸಂಚಾಲಕ ರಾಹುಲ್ ಚೌದರಿ, ಟಿಎಫ್ ಐ ಸಂಸ್ಥಾಪಕ ಅತುಲ್ ಮಿಶ್ರಾ, ಸಂಪಾದಕ ಶುಭಾಂಗಿ ಶರ್ಮ, ಸಂಪಾದಕ ಅಜಿತ್ ದತ್ತ ಜ್ಯೂರಿಯಾಗಿರಲಿದ್ದಾರೆ ಎಂದರು. ಸಲಹೆಗಳನ್ನು hಣಣಠಿ://shoಡಿಣuಡಿಟ.ಚಿಣ/ಚಿe267 ದಾಖಲಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಆರ್.ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ಕೇಬಲ್ ನಾಗೇಂದ್ರ, ಉಪಾಧ್ಯಕ್ಷರಾದ ಸಂತೋಷ್ ಶಂಭು, ಕಾರ್ಯದರ್ಶಿಗಳಾದ ಪ್ರಸಾದ್ ಬಾಬು ಉಪಸ್ಥಿತರಿದ್ದರು.