ಮೈಸೂರಿನಲ್ಲಿ ಪುನೀತ್‍ ರಾಜ್‍ ಕುಮಾರ್

ಮೈಸೂರು,ಮಾ.23-ಯುವರತ್ನ’ ಸಿನಿಮಾದ ಪ್ರಚಾರಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ಮೈಸೂರಿಗೆ ಆಗಮಿಸಿದ್ದರು. ನಗರದ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸಿನಿಮಾ ತಂಡ ಪ್ರಚಾರ ಹಮ್ಮಿಕೊಂಡಿತ್ತು. ನೆಚ್ಚಿನ ನಟನನ್ನು ನೋಡಲು ನೂರಾರು ಮಂದಿ ಕಿಕ್ಕಿರಿದು ತುಂಬಿದ್ದರು. ನಗರಕ್ಕೆ ಆಗಮಿಸಿದ ಅಪ್ಪು ಅವರಿಗೆ ಕ್ರೇನ್ ಗಳ ಮೂಲಕ ಪುಷ್ಪಾರ್ಚನೆ ಮಾಡಿ ಬೃಹತ್ ಗಾತ್ರದ ಸೇಬಿನ ಹಾರದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನೂರಾರು ಸಂಖ್ಯೆಯಲ್ಲಿ ನೆರದಿದ್ದ ಅಭಿಮಾನಿಗಳು ಅಪ್ಪು ಅವರನ್ನು ಕಣ್ತುಂಬಿಕೊಂಡು, ಫೆÇೀಟೋಗಳನ್ನು ಕ್ಲಿಕ್ಕಿಸಿಕೊಂಡು ಸಂತಸಪಟ್ಟರು. ಚಪ್ಪಾಳೆ, ಶಿಳ್ಳೆ, ಹರ್ಷೋದ್ಧಾರ ಮುಗಿಲುಮುಟ್ಟಿತ್ತು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್, ನಟ ಡಾಲಿ ಧನಂಜಯ್, ರವಿಶಂಕರ್ ಇತರರು ಉಪಸ್ಥಿತರಿದ್ದರು. ಮೈಸೂರಿನಿಂದ ಮಂಡ್ಯಗೆ ತೆರಳಿರುವ ಸಿನಿತಂಡ ಅಲ್ಲೂ ಪ್ರಚಾರ ಹಮ್ಮಿಕೊಂಡಿದೆ. ಯುವರತ್ನ’ ಸಿನಿಮಾ ಏಪ್ರಿಲ್ 1 ರಂದು ಬಿಡುಗಡೆ ಆಗಲಿದೆ. ಸಿನಿಮಾವನ್ನು ಸಂತೋಷ್ ಆನಂದ್ ರಾಮ್ ನಿರ್ದೇಶಿಸಿದ್ದು, ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಅಪ್ಪುಗೆ ಜೋಡಿಯಾಗಿ ನಟಿ ಸಾಯೆಷಾ ಅಭಿನಯಿಸಿದ್ದಾರೆ. ಡಾಲಿ ಧನಂಜಯ್, ದಿಗಂತ್, ಪ್ರಕಾಶ್ ರೈ, ಅವಿನಾಶ್ ಸೋನು ಗೌಡ, ರಂಗಾಯಣ ರಘು ಇನ್ನೂ ಹಲವರು ಚಿತ್ರದಲ್ಲಿ ನಟಿಸಿದ್ದಾರೆ.