ಮೈಸೂರಿನಲ್ಲಿ ದೋಸೆ ಸವಿದ ಪ್ರಿಯಾಂಕಾ

ಮೈಸೂರಿನ ಮೈಲಾರಿ ಹೋಟೆಲ್‌ನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಉಪಹಾರ ಸೇವಿಸಿದ ಬಳಿಕ ಮಕ್ಕಳ ಜೊತೆ ಕಾಣಿಸಿಕೊಂಡಿದ್ದು ಹೀಗೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದ್ದಾರೆ.

ಮೈಸೂರು,ಏ.೨೬- ರಾಜ್ಯದಲ್ಲಿ ಚುನಾವಣಾ ಪ್ರವಾಸದಲ್ಲಿರುವ ಪ್ರಿಯಾಂಕಾಗಾಂಧಿ ಅವರು ಇಂದು ಮೈಸೂರಿನಲ್ಲಿ ದೋಸೆ ಸವಿದು ಜನರ ಜತೆ ಬೆರೆತು ಸಂತಸದ ಣಗಳನ್ನು ಕಳೆದರು. ನಿನ್ನೆ ಚಾಮರಾಜನಗರ, ಮೈಸೂರಿನ ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಪ್ರಚಾರ ಸಭೆಗಳಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾಗಾಂಧಿ, ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದರು.
ಇಂದು ಬೆಳಿಗ್ಗೆ ಮೈಸೂರಿನ ಪ್ರಸಿದ್ಧ ಮೈಲಾರಿ ಹೋಟೆಲ್‌ಗೆ ತೆರಳಿ ದೋಸೆ ಸವಿದರು. ಹಾಗೆಯೇ, ಹೋಟೆಲ್‌ನ ಅಡುಗೆ ಮನೆಗೂ ತೆರಳಿ ದೋಸೆಯನ್ನು ಹೆಂಚಿನ ಮೇಲೆ ಹೊಯ್ದಿದ್ದು ವಿಶೇಷವಾಗಿತ್ತು. ಹೋಟೆಲ್‌ಗೆ ಬಂದಿದ್ದ ಗ್ರಾಹಕರ ಜತೆ ಮಾತನಾಡಿದ ಅವರು, ಕೆಲ ಮಕ್ಕಳನ್ನು ಮಾತನಾಡಿಸಿ ಅವರನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಮುದ್ದು ಮಾಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಿಯಾಂಕಾಗಾಂಧಿಯವರ ಜತೆ ಇದ್ದು ದೋಸೆ ಸವಿದರು.