ಮೈಸೂರಿನಲ್ಲಿ ತೌಕ್ತೆ ಚಂಡಮಾರುತ: ಮಧ್ಯಾಹ್ನವಾದರೂ ನಿಲ್ಲದ ಮಳೆ

ಮೈಸೂರು. ಮೇ.15: ತೌಕ್ತೆ ಚಂಡಮಾರುತದ ಪ್ರಭಾವದಿಂದಾಗಿ ಸಾಂಸ್ಕøತಿಕ ನಗರಿ ಮೈಸೂರು ಜಿಲ್ಲೆಗಳಲ್ಲಿ ಮಳೆರಾಯ ಮುಂಜಾನೆಯಿಂದಲೇ ಅಬ್ಬರಿಸುತ್ತಿದ್ದಾನೆ.
ಮೈಸೂರಿನಲ್ಲಿ ಬೆಳಗಿನ ಜಾವದಿಂದಲೇ ತುಂತುರು ಮಳೆ ಆರಂಭವಾಗಿದ್ದು, ಮಧ್ಯಾಹ್ನವಾದರೂ ನಿಲ್ಲದ ಮಳೆ. ಮ್ಮೊಮ್ಮೆ ಜೋರಾಗಿ ಅಬ್ಬರಿಸುತ್ತ ಮತ್ತೆ ತಣ್ಣಗಾಗುತ್ತಿದೆ. ಇಷ್ಟು ದಿನ ಸೆಕೆಯಿಂದ ಬೆವರಿಳಿಯುತ್ತಿದ್ದ ಜನತೆಗೆ ತಂಪು ನೀಡಿ ಅವರ ಮೊಗದಲ್ಲಿ ಕೊಂಚ ಮಂದಹಾಸ ಮೂಡಿಸಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಿಗ್ಗೆ 10ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಅಂಗಡಿಗಳು ತೆರೆಯುತ್ತಿದ್ದು, ವಾಹನಗಳ ಓಡಾಟಕ್ಕೆ ಸಂಪೂರ್ಣ ನಿರ್ಬಂಧವಿದೆ. ಅಗತ್ಯ ವಸ್ತುಗಳನ್ನು ಒಯ್ಯವ ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಳೆ ಆಗೊಮ್ಮೆ ಈಗೊಮ್ಮೆ ಜೋರಾಗಿ ಅಬ್ಬರಿಸುತ್ತ, ಒಮ್ಮೊಮ್ಮೆ ತುಂತುರು ಬೀಳುತ್ತಿದ್ದು, ಮನೆಯಲ್ಲಿಯೇ ಕುಳಿತು ಕೆಲವರು ಎಂಜಾಯ್ ಮಾಡುತ್ತಿದ್ದಾರೆ.
ಕೇರಳಕ್ಕೆ ನೈರುತ್ಯ ಮುಂಗಾರು ಮಳೆ ಮೇ.31ಕ್ಕೆ ಆಗಮಿಸುವ ಸಾಧ್ಯತೆ ಇದೆ. ಇದು ಸಾಮಾನ್ಯ ದಿನಕ್ಕಿಂತಲೂ ಒಂದು ದಿನ ಮೊದಲು ಮುಂಗಾರು ಪ್ರವೇಶವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತೌಕ್ತೆ ಚಂಡಮಾರುತ ಪರಿಣಾಮ, ಅರಬ್ಬಿಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಹಾಸನ, ಚಿಕ್ಕಮಗಳೂರು,ಉತ್ತರ ಕನ್ನಡ, ಉಡುಪಿ, ಕೊಡಗು ಸೇರಿ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.