ಮೈಸೂರಿನಲ್ಲಿ ಕರ್ತವ್ಯನಿರತ ಚುನಾವಣಾಧಿಕಾರಿ ಸಾವು

ಮೈಸೂರಿನಲ್ಲಿ ಕರ್ತವ್ಯನಿರತ ಚುನಾವಣಾಧಿಕಾರಿ ಸಾವು
ಮೈಸೂರು, ಡಿ30: ಮತ ಎಣಿಕೆ ಕೇಂದ್ರದಲ್ಲೇ ಹೃದಯಘಾತವಾಗಿ ಚುನಾವಣಾಧಿಕಾರಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ನಡೆದಿದೆ.
ಪಿರಿಯಾಪಟ್ಟಣ ತಾಲ್ಲೂಕಿನ ಎನ್. ಶೆಟ್ಟಹಳ್ಳಿ ಗ್ರಾಮ ಪಂಚಾಯತ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿಯೋಜನೆಗೊಂಡಿದ್ದ ಲೋಕೋಪಯೋಗಿ ಇಲಾಖೆ ಅಭಿಯಂತರ ಬೋರೇಗೌಡ (52) ಅವರು ಹೃದಯಾಘಾತದಿಂದ ಇಂದು ಬೆಳಿಗ್ಗೆ ನಿಧನರಾದರು.
ಪಟ್ಟಣದ ಪುಷ್ಪ ವಿದ್ಯಾಸಂಸ್ಥೆಯ ಆವರಣದಲ್ಲಿನ ಮತ ಎಣಿಕೆ ಕೇಂದ್ರಕ್ಕೆ ಬೆಳಿಗ್ಗೆ 7ಗಂಟೆಗೆ ಕರ್ತವ್ಯ ನಿಯೋಜನೆ ಗೆ ಆಗಮಿಸಿದ ಬೋರೇಗೌಡರು ಸಹೋದ್ಯೋಗಿಗಳೊಂದಿಗೆ ತಿಂಡಿ ಮುಗಿಸಿ ಮತ ಎಣಿಕೆ ಕೇಂದ್ರದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಎದೆನೋವು ಕಾಣಿಸಿಕೊಂಡು ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಹುಣಸೂರು ಬಳಿಯ ಮಾರ್ಗಮಧ್ಯೆ ಹೃದಯಾಘಾತದಿಂದ ಬೋರೆಗೌಡ ಕೊನೆಯುಸಿರೆಳೆದಿದ್ದಾರೆ.