ಮೈಸೂರಿನಲ್ಲಿ ಇವತ್ತು ಸೋಂಕಿತರ ಸಂಖ್ಯೆಯಲ್ಲಿ ಬಾರೀ ಇಳಿಕೆ- ಸಾವಿನ ಪ್ರಮಾಣದಲ್ಲಿ ಕೂಡ ಇಳಿಕೆ

ಮೈಸೂರು,ಅ31- ಮೈಸೂರಿನ ಜನರಿಗೆ ಗುಡ್ ನ್ಯೂಸ್, ಏಕೆಂದರೆ ಮೈಸೂರಿನಲ್ಲಿ ದಿನ ಕಳೆದಂತೆ ಕೊರೊನಾ ಸೋಂಕಿತರು ಕಡಿಮೆಯಾಗಿ, ಕೊರೊನಾದಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕಾರಣ ಮೈಸೂರು ಕೊರೊನಾದಿಂದ ಅತಿ ಶೀಘ್ರದಲ್ಲೇ ಮುಕ್ತವಾಗುತ್ತದೆ ಎಂಬ ವಿಶ್ವಾಸವಿದೆ.

ಮೈಸೂರಿನಲ್ಲಿ ಇಂದು 161 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕೊರೊನಾದಿಂದ ಗುಣಮುಖರಾಗಿ 307 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾದಿಂದ ಸಾವಿಗೀಡಾಗುವರ ಸಂಖ್ಯೆ ಕೂಡ ಕಡಿಮೆಯಾಗಿ ಇಂದು ಇಬ್ಬರು ಮೃತಪಟ್ಟಿದ್ದಾರೆ.