ಮೈಸೂರಿಗೆ ಪಾರಂಪರಿಕ ಇತಿಹಾಸವಿದೆ

ಮೈಸೂರು: ಫೆ.21:- ರಾಮಕೃಷ್ಣನಗರ ಬಡಾವಣೆ ಗಮನಿಸಿದರೆ ಪರಿಸರ ಸ್ವಚ್ಛತೆಯೊಂದಿಗೆ ಆಧ್ಯಾತ್ಮಿಕವಾಗಿ ಆಕರ್ಷಣೀಯವಾಗಿದೆ, ಸಹಸ್ರಾರು ಹಿರಿಯ ನಾಗರೀಕರು ವಾಯುವಿಹಾರಕ್ಕೆ ಬರುತ್ತಾರೆ. ರಾಮಕೃಷ್ಣಪರಮಹಂಸರ ವೃತ್ತ ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿಯೂ ಸಹ ಆಕರ್ಷಿತವಾಗಲಿದೆ ಎಂದು ಮೂಡಾ ಅಧ್ಯಕ್ಷರಾದ ಯಶಸ್ವಿ ಸೋಮಶೇಖರ್ ಹೇಳಿದರು
ಚಾಮುಂಡೇಶ್ವರಿ ಯುವ ಬಳಗ ವತಿಯಿಂದ ರಾಮಕೃಷ್ಣನಗರದ ವೃತ್ತದಲ್ಲಿ (ಆಂದೋಲನ ವೃತ್ತ) ಶ್ರೀರಾಮಕೃಷ್ಣ ಪರಮಹಂಸರ 188ನೇ ಜಯಂತಿ ಅಂಗವಾಗಿ ಆಧ್ಯಾತ್ಮಿಕ ಜಗತ್ತು ಕಾರ್ಯಮಕ್ರಮ ಹಮ್ಮಿಕೊಂಡಿದ್ದು ಪರಮಹಂಸರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಆನಂತರ ಸಿಹಿ ವಿತರಿಸಿ ಮಾತನಾಡಿದ ಅವರು ರಾಮಕೃಷ್ಣನಗರ ಬಡಾವಣೆ ಗಮನಿಸಿದರೆ ಪರಿಸರ ಸ್ವಚ್ಛತೆಯೊಂದಿಗೆ ಆಧ್ಯಾತ್ಮಿಕವಾಗಿ ಆಕರ್ಷಣೀಯವಾಗಿದೆ, ಸಹಸ್ರಾರು ಹಿರಿಯ ನಾಗರೀಕರು ವಾಯುವಿಹಾರಕ್ಕೆ ಬರುತ್ತಾರೆ.
ರಾಮಕೃಷ್ಣಪರಮಹಂಸರ ವೃತ್ತ ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿಯೂ ಸಹ ಆಕರ್ಷಿತವಾಗಲಿದೆ, ಸ್ವಚ್ಛಬಡಾವಣೆ ಎಂದು ಮಾದರಿಯಾಗಿರುವ ರಾಮಕೃಷ್ಣನಗರದಲ್ಲಿ ಸಂಗೀತಾಸಕ್ತರು ಹಿರಿಯನಾಗರೀಕರು ಹೆಚ್ಚಿರುವ ಹಿನ್ನಲೆಯಲ್ಲಿ ರಾಮಕೃಷ್ಣನಗರದಲ್ಲಿ ಮುಂದಿನ ದಿನಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರತಿಭಾವಂತ ಮಕ್ಕಳಿಗೆ ವೇದಿಕೆ ಸೃಷ್ಟಿಸಿಕೊಟ್ಟು ಮುಖ್ಯವಾಹಿನಿಗೆ ತರಲು ಯೋಜನೆ ರೂಪಿಸಲಾಗುವುದು ಎಂದರು.
ಹಿರಿಯ ಸಮಾಜ ಸೇವಕರಾದ ರಘುರಾಮ ವಾಜಪೇಯಿ ರವರು ಮಾತನಾಡಿ “ಇಂದು ಮೈಸೂರಿನಲ್ಲಿ ಪರಮಾಹಂಸರ ನೆನಪು ಮಾಡಿಕೊಳ್ಳಲು ಕಾರಣಕರ್ತರು ಸ್ವಾಮಿ ವಿವೇಕಾನಂದರು, 1892ರಲ್ಲಿ ಬಂದಾಗ ಸುಮಾರು 21 ದಿವಸಗಳ ಕಾಲ ಪ್ರತಿನಿತ್ಯ ರಾಮಕೃಷ್ಣರ ಉಪನ್ಯಾಸವನ್ನು ಮಾಡುತ್ತಿದ್ದರು. ಅದರ ಪ್ರಭಾವದಿಂದಲೇ ಇಂದು ಮೈಸೂರಿನಲ್ಲಿ ರಾಮಕೃಷ್ಣ ಆಶ್ರಮ ಸ್ಥಾಪನೆಯಾಗಿದ್ದು ನಂತರ ಈಗ ರಾಮಕೃಷ್ಣ ವೃತ್ತದಲ್ಲಿ ಭವ್ಯ ರಾಮಕೃಷ್ಣ ಪರಮಹಂಸರ ಪ್ರತಿಮೆ ಗೋಚರಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಪರಮಹಂಸರು ಸರ್ವಧರ್ಮ ಸಮನ್ವಯ ಸಾರಿದರು. ಅದೇ ರೀತಿ ರಾಷ್ಟ್ರಕವಿ ಕುವೆಂಪುರವರ ಮನೆಯಲ್ಲಿ ರಾಮಕೃಷ್ಣರು, ಶಾರದಾ ಮಾತೆ ಹಾಗೂ ವಿವೇಕಾನಂದರ ಚಿತ್ರಗಳು ಮಾತ್ರ ಇದೆ. ಆ ಪ್ರಭಾವವೇ ಕುವೆಂಪು ರವರ ವಿಶ್ವ ಮಾನವ ಪ್ರಜ್ಞೆಗೆ ಆಕರವಾದಂತದ್ದು ನಾವೆಲ್ಲ ಕಂಡಿದ್ದೇವೆ ಎಂದು ತಿಳಿಸಿದರು.
ಮೂಡ ಅಧ್ಯಕ್ಷರಾದ ಯಶಸ್ವಿ ಸೋಮಶೇಖರ್, ಪರಮಪೂಜ್ಯ ಇಳೈಆಳ್ವಾರ್ ಸ್ವಾಮೀಜಿ, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪಾಯಿ, ನಗರ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ,ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಹೇಮಾ ನಂದೀಶ್, ನಗರ ಪಾಲಿಕೆ ನಾಮ ನಿರ್ದೇಶಕರಾದ ಜಗದೀಶ್, ಜೀವದಾರರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಅಜಯ್ ಶಾಸ್ತ್ರಿ, ರಾಕೇಶ್ ಭಟ್, ಮುಳ್ಳೂರು ಗುರುಪ್ರಸಾದ್,ಸಿದ್ದೇಶ್, ವಿನಯ್ ಕನಗಾಲ್, ಸುಚೇಂದ್ರ, ಮೈಲಾ ವಿಜಯ್ ಕುಮಾರ್, ಚಕ್ರಪಾಣಿ, ಎಸ್ ಬಿ ವಾಸದೇವಮೂರ್ತಿ, ಮಿರ್ಲೆ ಪನೀಶ್, ಹಿರಿಯಣ್ಣ, ಪ್ರತಾಪ್, ಕೇಬಲ್ ಮಹೇಶ್, ಜಯರಾಮ್, ಹಾಗೂ ಇನ್ನಿತರರು ಭಾಗವಾಗಿಸಿದರು.