ಮೈಸೂರಿಗರ ಗಮನ ಸೆಳೆದ ಗೆಡ್ಡೆ ಗೆಣಸು ಮೇಳ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.11: ಎಲ್ಲಿ ನೋಡಿದರಲ್ಲಿ ಗಡ್ಡೆ ಗೆಣಸುಗಳ ರಾಶಿ, ತುಪ್ಪ ಗೆಣಸು, ಮರ ಗೆಣಸು, ಸಿಹಿ ಗೆಣಸು, ಚೆಂಗೆಣಸು ಹೀಗೆ ಗೆಣಸುಗಳ ರಾಶಿ. ಹೀಗೆ ಬಗೆ ಬಗೆಯ ಗಡ್ಡೆಗಳ ರಾಶೊ ಕಂಡು ಬಂದಿದ್ದು ಗೆಡ್ಡೆ ಗೆಣಸು ಮೇಳದಲ್ಲಿ
ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸಹಜ ಸಮೃದ್ಧ ಸಂಸ್ಥೆಯು ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನದ ಮೇಳದಲ್ಲಿ ವಿವಿಧ ಗೆಡ್ಡೆ ಗೆಣಸುಗಳ ರಾಶಿ ಬಂತು. ವಿವಿಧ ಬಗೆಯ ಕಾಡು ಮತ್ತು ನಾಡಿನ ಗೆಡ್ಡೆ ಗೆಣಸುಗಳು, ವೌಲ್ಯವರ?ತ ಪದಾರ್ಥಗಳು, ಗೆಣಸಿನ ಅಡುಗೆಗಳ ಪ್ರದರ್ಶನ ಮತ್ತು ಮಾರಾಟದಲ್ಲಿದ್ದವು. ರಾಜ್ಯದ ವಿವಿಧ ಭಾಗಗಳಿಂದ ಬರುವ 25ಕ್ಕೂ ಹೆಚ್ಚು ಮಳಿಗೆಗಳು ಗೆಡ್ಡೆ ಗೆಣಸಿನ ವೌಲ್ಯ ಪದಾರ್ಥ ಹಾಗೂ ಬಗೆ ಬಗೆಯ ಅಡುಗೆಗಳನ್ನು ಉಣಬಡಿಸುತ್ತಿದ್ದರು.
ಪರ್ಪಲ್ ಯಾಮ್, ಮಾವಿನ ಶುಂಠಿ, ಕೂವೆ ಗೆಡ್ಡೆ, ಹುತ್ತರಿ ಗೆಡ್ಡೆ, ಹಳದಿ ಮತ್ತು ಕೆಂಪು ಸಿಹಿ ಗೆಣಸು, ಬಳ್ಳಿ ಬಟಾಣಿ, ಕಪ್ಪು ಮತ್ತು ಬಗೆ ಬಗೆಯ ಕೆಸುವಿನ ಬೀಜದ ಗೆಡ್ಡೆಗಳು ಬಿತ್ತನೆಗೂ ನೀಡಲಾಗುತ್ತಿತ್ತು.
ಕಪ್ಪು ಕ್ಯಾರೆಟ್, ಬಣ್ಣದ ಬೀಟ್ ರೂಟ್ ಮತ್ತು ದೇಸಿ ತರಕಾರಿ ಬೀಜಗಳು, ಬಗೆ ಬಗೆಯ ಹಣ್ಣಿನ ಗಿಡಗಳು, ಸಿರಿಧಾನ್ಯ ಬೇಳೆ ಕಾಳು, ಕಪ್ಪು ಹುರುಳಿ ಮೇಳದಲ್ಲಿ ಪ್ರದರ್ಶನದೊಂದಿಗೆ ಖರೀದಿಗೂ ಲಭ್ಯ ಇವೆ.
ರಾಗಿ, ಜೋಳ, ಕೊರಲೆಯ ರೊಟ್ಟಿಯ ಜೊತೆಗೆ ಗೆಣಸಿನ ಪಲ್ಯ ಚಪ್ಪರಿಸಬಹುದು. ಪರ್ಪಲ್ ಯಾಮ್ ಐಸ್ ಕ್ರೀಂ ರುಚಿಯನ್ನು ಸವಿಯಬಹುದು. ಈ ಅವಕಾಶವನ್ನು ಸಾರ್ವಜನಿಕರು ಸದ್ಭಳಕೆ ಮಾಡಿಕೊಂಡು ಆಸಕ್ತಿಯಿಂದ ಗಡ್ಡೆ ಗೆಣಸುಗಳನ್ನು ಖರೀದಿಸಿದರು. ಬಹುತೇಕ ಅಪರೂಪದ ಗಡ್ಡೆ ಗೆಣಸುಗಳನ್ನು ಕಂಡು ಸಾರ್ವಜನಿಕರು ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡರು.
ಇಂದು ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆ: ?ಸ್ಟ್?ಡ್ ಹಾಗೂ ರೆಡಿ ಟು ಈಟ್ ಆಹಾರಗಳಿಗೆ ಅಕವಾಗಿ ಮೊರೆ ಹೋಗುತ್ತಿರುವ ಇಂದಿನ ಪೀಳಿಗೆಗೆ ಗೆಡ್ಡೆ ಗೆಣಸಿನ ಅಡುಗೆಗಳನ್ನು ಪೂಚಯಿಸುವ ಉದ್ದೇಶದಿಂದ ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಕಾಡಿನ ಅಥವಾ ಕೃಷಿ ಮೂಲದ ಗೆಡ್ಡೆ ಗೆಣಸುಗಳನ್ನು ಬಳಸಿ ತಯಾರಿಸುವ ಅಡುಗೆಗಳನ್ನು ಸಾಂಪ್ರದಾಯಿಕವಾಗಿರಬಹುದು ಅಥವಾ ಹೊರ ರುಚಿಯಾಗಿರಬಹುದು. ವಿವಿಧ ಜಾತಿಯ ಗೆಡ್ಡೆ ಗೆಣಸುಗಳನ್ನು ಬಳಸಿ ಮಾಡಿದ ಅಡುಗೆಗಳನ್ನು ಮನೆಯಲ್ಲೇ ತಯಾರಿಸಿ, ಗೆಡ್ಡೆ ಗೆಣಸು ಮೇಳಕ್ಕೆ ?.11ರಂದು ಮಧ್ಯಾಹ್ನ 12ಕ್ಕೆ ತರಲಾಗುವುದು. ಅಪರೂಪದ ಅಡುಗೆ ತಯಾರಿಸಿದವರಿಗೆ ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಲಾಗುವುದು. ಆಲೂಗಡ್ಡೆಯ ಹೊರತುಪಡಿಸಿ ಮಾಡಿದ ಕಾಡು ಗೆಡ್ಡೆಯ ಅಡುಗೆಗಳಿಗೆ ವಿಶೇಷ ಮನ್ನಣೆ ನೀಡಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಮೊ.ಸಂ.7090009944, 9164523840 ಸಂಪರ್ಕಿಸಬಹುದು.
ಗಮನ ಸೆಳೆದ 136 ಕೆ.ಜಿ.ಗೆಣಸು: ಹುಣಸೂರು ಚೌಡಿಕಟ್ಟೆಯ ಶಿವಯೋಗಿ ದೇಸೀ ಗೋಶಾಲದ ಪಿ.ಪಿ.ತಮ್ಮಯ್ಯಅವರು ಬೆಳೆದಿರುವ ಬಾರೊಬ್ಬರಿ 136 ಕೆ.ಜಿ.ಯ ಡಯಾಸ್ ಕೋರಿಯಾ ಹೆಸರಿನ ಬೃಹತ್ ಗೆಣಸು ಮೇಳದ ಆಕರ್ಷಣೀಯವಾಗಿತ್ತು. ಪ್ರತಿಯ ಮೇಳದಲ್ಲಿ ತಮ್ಮದೇ ಛಾಪು ಮೂಡಿಸುವ ಇವರು 2019 ರಲ್ಲಿ ಜನವರಿಯಲ್ಲಿ ನಡೆದ ಮೇಳದಲ್ಲಿ 88 ಕೆ.ಜಿ.ಬಂದು ಪ್ರಶಸ್ತಿ ಬಂದಿತ್ತು. ಈಗ ಮತ್ತೊಮ್ಮೆ ದಾಖಲೆ ಬರೆದಿದ್ದಾರೆ.
ಈ ಗೆಣಸು ಕ್ಯಾನ್ಸರ್ ರೋಗಕ್ಕೆ ಔಷಯಾಗುತ್ತಿದ್ದು, ಸಂಶೋಧನೆಗಳು ನಡೆಯುತ್ತಿವೆ. ವಿಶೇಷವಾಗಿ ಕೊಡುಗಿನಲ್ಲಿ ಆಚರಿಸುವ ಸಂಭ್ರಮದ ಹುತ್ತರಿ ಹಬ್ಬಕ್ಕೆ ಗೆಣಸು ಬಳಸಿ ಸಾಂಬರು ಮತ್ತು ಪಲ್ಯದಂತಹ ಆಹಾರ ಪದಾರ್ಥಗಳನ್ನು ತಯಾರಿಸುತ್ತಾರೆ. ಇದನ್ನು ಬೆಳೆಯಲು ಯಾವುದೇ ಗೊಬ್ಬರ ಮತ್ತು ನೀರಿನ ಅವಶ್ಯಕತೆ ಇಲ್ಲ. ಬಳ್ಳಿ ಬೆಳೆಯಲು ಸ್ಥಳಾವಕಾಶ ಕೊಟ್ಟರೇ ಸಾಕು ಎಂದು ರೈತರಾದ ಪಿ.ಪಿ.ತಮ್ಮಯ್ಯ ಹೇಳಿದರು. ಎರಡು ದಿನ ಮೇಳಕ್ಕೆ ಚಾಲನೆ: ಎರಡು ದಿನಗಳ ಗೆಡ್ಡೆ ಗೆಣಸು ಮೇಳಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.