
ಮೈಸೂರು: ಮೇ.22:- ಕಳೆದ ಕೆಲವು ದಿನಗಳಿಂದ ಬಿರು ಬೇಸಿಗೆಯಲ್ಲಿದ್ದ ಸಾಂಸ್ಕೃತಿಕ ನಗರಿ ಮೈಸೂರಿನ ಜನರಿಗೆ ಭಾನುವಾರ ಸಂಜೆ ಸುರಿದ ಭರ್ಜರಿ ಮಳೆ ಎಲ್ಲರ ತಂಪಾಗಿಸಿತು.
ಸಂಜೆ ಜೋರು ಗಾಳಿ ಮಳೆಗೆ ನ್ಯಾಯಾಲಯದ ಎದುರಿನ ಮರವೊಂದು ನೆಲಕ್ಕುರುಳಿತು. ಇದೇ ವೇಳೆ ಕೆಲವು ವಿದ್ಯುತ್ ತಂತಿ ಕಂಬಗಳು ನೆಲಕ್ಕುರುಳಿದವು. ಏಕಾಎಕಿ ಸುರಿದ ಮಳೆಯಿಂದಾಗಿ ಸಂಜೆ ಮನೆ ಸೇರಲು ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು.
ಎಚ್.ಡಿ.ಕೋಟೆ ತಾಲ್ಲೂಕಿನ ವಿವಿಧೆಡೆ ಭಾನುವಾರ ಸಂಜೆ ಸುರಿದ ಗಾಳಿ ಸಹಿತ ಮಳೆಗೆ ವಿವಿಧೆಡೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ.
ಪಟ್ಟಣದ ವಿಶ್ವನಾಥಯ್ಯ ಕಾಲೊನಿಯಲ್ಲಿ ಹಲವು ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಮರ ಬಿದ್ದು ಕಾರು ಜಖಂಗೊಂಡಿದೆ. ಪಟ್ಟಣದ ಪೆÇಲೀಸ್ ಠಾಣೆ ಆವರಣದಲ್ಲಿರುವ ಮರ ಉದ್ಯಮಿ ಮಣಿಕಂಠ ಅವರ ಮನೆ ಮೇಲೆ ಬಿದ್ದಿದೆ. ವಿಶ್ವನಾಥಯ್ಯ ಕಾಲೊನಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮರ ಬಿದ್ದಿದ್ದು, ಮರ ತೆರವುಗೊಳಿಸದೆ ಇದ್ದರೆ ಮನೆಯೂ ಸಂಪೂರ್ಣ ಜಖಂಗೊಳ್ಳುವ ಸಾಧ್ಯತೆ ಇರುವುದರಿಂದ ಕೂಡಲೇ ತೆರವುಗೊಳಿಸಬೇಕು ಎಂದು ಮಣಿಕಂಠ ಒತ್ತಾಯಿಸಿದ್ದಾರೆ.
ಪೆÇಲೀಸ್ ಠಾಣೆಯ ಕಚೇರಿ ಆವರಣದಿಂದ ಬಿದ್ದಿರುವ ಮರದಿಂದ ಭಾರಿ ಅನಾಹುತ ತಪ್ಪಿದೆ. ನಾವೆಲ್ಲರೂ ಮನೆಯಲ್ಲೇ ಇದ್ದೆವು. ಮನೆ ಮುಂಭಾಗದ ಶೆಡ್‍ಗೆ ಮರ ಬಿದ್ದಿರುವುದರಿಂದ ಅಪಾಯದಿಂದ ಪಾರಾಗಿದ್ದೇವೆ ಎಂದು ಅವರು ತಿಳಿಸಿದರು.
ಎಚ್.ಡಿ.ಕೋಟೆ ವಿಶ್ವನಾಥಯ್ಯ ಕಾಲೊನಿಯ ರಮೇಶ್ ಎಂಬವರ ಮನೆಯ ಸಮೀಪ ಕಾರಿನ ಮೇಲೆ ಮರ ಬಿದ್ದು ಕಾರು ಜಖಂಗೊಂಡಿದೆ
ಎಚ್.ಡಿ.ಕೋಟೆ ವಿಶ್ವನಾಥಯ್ಯ ಕಾಲೊನಿಯ ರಮೇಶ್ ಎಂಬವರ ಮನೆಯ ಸಮೀಪ ಕಾರಿನ ಮೇಲೆ ಮರ ಬಿದ್ದು ಕಾರು ಜಖಂಗೊಂಡಿದೆ