ಮೈಸೂರಪ್ಪನ ದೊಡ್ಡಿ ಸರ್ಕಾರಿ ಶಾಲೆ ಹೆಸರು ಕಾನೂನು ಬಾಹಿರವಾಗಿ ತಿದ್ದುಪಡಿ

ಹನೂರು ಏ.14:- ತಾಲೂಕಿನ ಮೈಸೂರಪ್ಪನ ದೊಡ್ಡಿ ಗ್ರಾಮದ ಹೆಸರು ಅಕ್ರಮವಾಗಿ ಕಾನೂನು ಬಾಹಿರವಾಗಿ ಸರ್ಕಾರಿ ಶಾಲೆಯ ನಾಮಫಲಕದಲ್ಲಿ ಹೊಸದೊಡ್ಡಿ 85 ಅರಬಗೆರೆ ಎಂದು ಬರೆದಿರುವ ಬಗ್ಗೆ ನೀಡಿದ್ದರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಅಧಿಕಾರಿಗಳ ನಿರ್ಲಕ್ಷಕ್ಕೆ ನಾವು ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಆರ್.ಟಿ.ಐ ಕಾರ್ಯಕರ್ತ ಎನ್.ಅಪ್ಪಾಜಿ ಆಗ್ರಹಿಸಿದ್ದಾರೆ.
ಹನೂರು ತಾಲೂಕು ಪಿ.ಜಿ. ಪಾಳ್ಯ ಸೆಕ್ಟರ್ ವ್ಯಾಪ್ತಿಯಲ್ಲಿ ಬರುವ ಮೈಸೂರಪ್ಪನ ದೊಡ್ಡಿ ಗ್ರಾಮದ ಹೆಸರು ಅಕ್ರಮವಾಗಿ ಕಾನೂನು ಬಾಹಿರವಾಗಿ ಸರಕಾರಿ ಶಾಲೆಯ ನಾಮಫಲಕದಲ್ಲಿ ಹೊಸದೊಡ್ಡಿ 85 ಅರಬಗೆರೆ ಎಂದು ಬರೆದಿರುವ ಬಗ್ಗೆ ನಾನು ಸುಮಾರು 6-7 ತಿಂಗಳ ಹಿಂದೆಯೇ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಶಿಕ್ಷಣ ಇಲಾಖೆಯ ಬಿಇಒ. ರವರಿಗೂ ದೂರು ಸಲ್ಲಿಸಿದ್ದೆನೆ.
ಹೆಸರು ಬದಲಾವಣೆ ಮಾಡಲು ಇದುವರೆಗೆ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಿ ಮೈಸೂರಪ್ಪನ ದೊಡ್ಡಿ ಎಂದು ನಾಮ ಫಲಕದಲ್ಲಿ ಬರಯಿಸದೆ ಹಾಗೂ ನಾನು ಈಗಾಗಲೇ ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸದೆ ಬೇಜವಾಬ್ದಾರಿ, ಕರ್ತವ್ಯ ಲೋಪ ವೆಸಗಿರುತ್ತಾರೆ.
ಆದ್ದರಿಂದ ತಕ್ಷಣ ಹೊಸದೊಡ್ಡಿ ಎಂದು ಬರೆದಿರುವ ಹೆಸರನ್ನು ತೆಗೆಸಿ ಮೈಸೂರಪ್ಪನ ದೊಡ್ಡಿ ಗ್ರಾಮ ಎಂದು ಬರೆಯಿಸಬೇಕು. ಹಾಗೂ ಸರಕಾರಿ ನಾಮಫಲಕ ದಲ್ಲಿ ಕಾನೂನು ಬಾಹಿರವಾಗಿ ಬರೆದಿರುವ ವ್ಯಕ್ತಿ ಹಾಗೂ ಮೈಸೂರಪ್ಪನ ದೊಡ್ಡಿ ಶಾಲೆಯ ಮುಖ್ಯ ಶಿಕ್ಷಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೇಳಿ ಕೊಳ್ಳುತ್ತೇನೆ.
ಹಿಂದಿನಿಂದಲೂ ಮೈಸೂರಪ್ಪನ ದೊಡ್ಡಿ ಸರ್ಕಾರಿ ಶಾಲೆ ಎಂದು ಬರೆದಿದ್ದು ಚುನಾವಣೆಯ ಬೂತ್ ನಲ್ಲಿ ಎಲ್ಲಾ ದಾಖಲೆಗಳಲ್ಲೂ ಇದೇ ಹೆಸರು ಮುಂದುವರೆದಿದೆ. ಆದರೆ ಶಿಕ್ಷಣ ಇಲಾಖೆ ಯಾವುದೇ ಅನುಮತಿ ಇಲ್ಲದೆ ಏಕಾಏಕಿ ಹೆಸರನ್ನು ಬದಲಾಯಿಸಿ ಹೊಸದೊಡ್ಡಿ ಎಂದು ಬರೆದಿರುತ್ತಾರೆ.
ಸರ್ಕಾರಿ ನಾಮಫಲಕದಲ್ಲಿ ಕಾನೂನು ಬಾಹಿರವಾಗಿ ಬರೆದಿರುವ ವ್ಯಕ್ತಿ ಹಾಗೂ ಮೈಸೂರಪ್ಪನ ದೊಡ್ಡಿ ಶಾಲೆಯ ಮುಖ್ಯ ಶಿಕ್ಷಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು.