ಮೈಲೂರ ವಿಶ್ವ ಶಾಂತಿ ಬುದ್ಧ ವಿಹಾರ ಮಹಾದ್ವಾರದ ಅಡಿಗಲ್ಲು ಸಮಾರಂಭದ ಉಧ್ಘಾಟನೆ

ಬೀದರ:ಮೇ.24:ವಿಶ್ವ ಶಾಂತಿ ಬುದ್ಧ ವಿಹಾರ ಅಭಿವೃದ್ಧಿ ಸಮಿತಿ ಮೈಲೂರ ಬೀದರ ವತಿಯಿಂದ ತಥಾಗತ ಗೌತಮ ಬುಧ್ದರ 2568 ನೇ ಜಯಂತಿ ನಿಮಿತ್ತ ವಿಶ್ವ ಶಾಂತಿ ಬುಧ್ದ ವಿಹಾರದ ಮಹಾದ್ವಾರದ ಅಡಿಗಲ್ಲು ಸಮಾರಂಭದ ಉದ್ಘಾಟನೆಯನ್ನು ಸಮಿತಿಯ ಸಲಹೆಗಾರರಾದ ಶಂಬುಲಿಂಗ ಕುದರೆ, ಜಗನಾಥ ಬಡಿಗೇರ್ ರವರು ತ್ರೀಶರಣ ಪಂಚಶೀಲವನ್ನು ಹೇಳಿ ಚಾಲನೆ ನೀಡಿದರು,ಶಂಬುಲಿಂಗ ಕುದರೆ ರವರು ಮಾತನಾಡಿ ಬುಧ್ದರು ಜಗತ್ತಿಗೆ ಶಾಂತಿ ಮಾರ್ಗವನ್ನು ನೀಡಿ ದುಖಕೆ ಮೂಲವನ್ನು ಕಂಡು ಹಿಡಿದ ಮೊದಲನೆ ವ್ಯಕ್ತಿ ಆಗಿದಾರೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರು ನಡೆಯೋಣ ಎಂದರು.
ಜಗನಾಥ ಬಡಿಗೇರ ರವರು ಮಾತನಾಡಿ “ಬುಧ್ದನೊಬ್ಬನೆ ಸುಜ್ಞಾನ ಸಾಗರ ಅವನ ಬಳಿಯಿದೆ ಎಲ್ಲದಕ್ಕೂ ಉತ್ತರ” ಬುಧ್ದರು ವಿಶ್ವದ ಮಹಾಜ್ಞಾನಿ ಆಗಿದಾರೆ ಅವರಲ್ಲಿ ಪ್ರತಿಯೊಂದಕ್ಕೂ ಸಮಸ್ಯೆಗೆ ಉತ್ತರ ಸಿಗುತ್ತದೆ ಬುದ್ಧರ ಸನ್ನಿಧಿಯಲ್ಲಿ ಪ್ರತಿಯೊಬ್ಬರೂ ಶರಣಾಗಿ ಉತ್ತಮ ಜೀವನ ನಡೆಸಬೇಕು ಎಂದರು.
ಸಮಿತಿಯ ಅಧ್ಯಕ್ಷ ರಾಜಕುಮಾರ ಭಾವಿಕಟ್ಟಿ ರವರು ಮಾತನಾಡಿ ಹಿರಿಯರಾದ ಶಂಭುಲಿಂಗ ಕುದರೆ, ಜಗನಾಥ ಬಡಿಗೇರ, ಜಗದೀಶ ಬಡಿಗೇರ ಮತ್ತು ಗೋಪಾಲರಾವ್ ಬಡಿಗೇರ್ ಹಾಗೂ ಎಲ್ಲಾ ಪದಾಧಿಕಾರಿಗಳ ಹಾಗೂ ಉಪಾಸಕ ಉಪಾಸಕಿಯರ ಸಹಾಯ ಸಹಕಾರದಿಂದ ವಿಶ್ವ ಶಾಂತಿ ಬುಧ್ದ ವಿಹಾರ ಮೈಲೂರ ಮಹಾದ್ವಾರದ ಕೆಲಸ ನಡೆಯುತ್ತಿದೆ ಎಂದರು.
ಸಮಿತಿಯ ಗೌರವಾಧ್ಯಕ್ಷ ಸಂಜುಕುಮಾರ ಮೇತ್ರೆ ಮಾತನಾಡಿ ಬುಧ್ದ ಧಮ್ಮ ಸಂಘದ ಕೆಲಸದ ಜೋತೆಯಲ್ಲಿ ಮೈಲೂರನಲ್ಲಿ ಸಾಮಾಜೀಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಕೆಲಸಗಳು ಕೈಗೆತಿಕೊಂಡು ಎಲ್ಲರ ಸಹಕಾರ ಪಡೆದು ಮುಂದೆ ಸಾಗೋಣ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಖಜಾಂಚಿ ನವನಾಥ ವಂಟೆ ,ಸಹ ಕಾರ್ಯದರ್ಶಿ ಪ್ರಶಾಂತ ಭಾವಿಕಟ್ಟಿ, ಸದಸ್ಯರಾದ ಆಕಾಶ ಕುದರೆ, ಮಹೇಶ ಗೋರನಾಳಕರ್, ಸುನೀಲ್ ನವಲಸಪೂರ, ಗ್ರಾಮದ ಗಣ್ಯರಾದ ಶಿವರಾಜ ಕುದರೆ ಪ್ರಮುಖರಾದ ಗೊರಖನಾಥ ಬಡಿಗೆರ, ಗುರು ಕುದರೆ, ಮಾರುತಿ ಕುದರೆ, ತುಕಾರಾಮ ಕುದರೆ, ಸಂತೋಷ ಬ್ಯಾಗಿ, ರಾಹುಲ ಕುದರೆ, ವಿಷ್ಣುಕಾಂತ ಪೂಜಾರಿ, ಅಮರ ವಂಟೆ, ದೀಪಕ್ ಬೆಂಗಳೂರೆ,ಶಾಲಿವಾನ ಬಡಿಗೇರ, ಶಾಲಿವಾನ ಕುದರೆ,ಶಿವಕುಮಾರ ಪೂಜಾರಿ, ಇನ್ನಿತರರು ಉಪಸ್ಥಿತರಿದ್ದರು ಇದೆ ಸಂದರ್ಭದಲ್ಲಿ ಮಹಾದ್ವಾರ ಕೆಲಸ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿರುವ ಅಂಬರೀಶ್ ಕುದರೆ ರವರಿಗೆ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು