
ಸಂಜೆವಾಣಿ ವಾರ್ತೆ
ಹಿರಿಯೂರು: ಸೆ.11-ಹಿರಿಯೂರಿನ ಭಂಡಾರದೊಡೆಯ ಸರಪಳಿ ಪವಾಡ ಪುರುಷ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಕಡೇ ಶ್ರಾವಣದ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜೆ ನಡೆಯಿತು. ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಮತ್ತು ಶ್ರೀಗಂಗ ಮಾಳಮ್ಮ ದೇವರಿಗೆ ಹೂವಿನ ಅಲಂಕಾರ ಮಾಡಲಾಗಿತ್ತು ನಗರದ ಅನೇಕ ಭಕ್ತರು ದೇವರ ದರ್ಶನ ಭಾಗ್ಯವನ್ನು ಪಡೆದರು. ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.