ಮೈಲಾರಲಿಂಗೇಶ್ವರ ಸ್ವಾಮಿಯ ವೈಭವದ ಕಾರ್ತಿಕೋತ್ಸವ


 ಹಿರಿಯೂರು ಡಿ. 6: ನಗರದ ಸುಪ್ರಸಿದ್ಧ ಭಂಡಾರದ ಒಡೆಯ ಏಳುಕೋಟಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಕಡೇ ಕಾರ್ತಿಕೋತ್ಸವ ಪೂಜಾ ಕಾರ್ಯಕ್ರಮ ಭಾನುವಾರ ಸಂಜೆ ಭಕ್ತಿಭಾವದಿಂದ ಜರುಗಿತು. ಸಂಜೆ ಸ್ವಾಮಿಯನ್ನು ಕುದುರೆ ವಾಹನದಲ್ಲಿ ಪ್ರತಿಷ್ಠಾಪಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಸ್ವಾಮಿಗೆ ಅಭಿಷೇಕ ಪುಷ್ಪಾರ್ಚನೆ ಹೂವಿನ ಅಲಂಕಾರ ನಂತರ ದೀಪೋತ್ಸವ, ಹಾಗೂ ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಿತು. ನಗರದ ನೂರಾರು ಜನ ಭಕ್ತರು ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.