ಮೈದುಂಬಿ ಹರಿಯುತ್ತಿದೆ ಕಪಿಲಾ ನದಿ

ನಂಜನಗೂಡು: ಜು.11:- ವೈನಾಡು ಪ್ರದೇಶದಲ್ಲಿ ಭಾರಿ ಮಳೆ ಮುಂದುವರೆದಿದ್ದು ಕಬಿನಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ 39,000 ಕ್ಯೂಸೆಕ್ ನೀರನ್ನು ನದಿಗೆ ಹರಿಸುತ್ತಿರುವುದರಿಂದ ಕಪಿಲಾ ನದಿ ಮೈತುಂಬಿ ಹರಿಯುತ್ತಿದೆ.
ಕಪಿಲಾ ನದಿ ಮಧ್ಯದಲ್ಲಿರುವ ಐತಿಹಾಸಿಕ 16 ಕಾಲು ಮಂಟಪ ಮುಳುಗಡೆಯಾಗುತ್ತಿದೆ ಮತ್ತು ನದಿಯ ಎಲ್ಲಾ ಮೆಟ್ಟಿಲುಗಳು ಮುಳುಗಡೆಯಾಗಿ ನೀರು ಹೊರ ಹರಿಯುತ್ತಿದೆ ನದಿಯ ಪಕ್ಕದಲ್ಲಿರುವ ಚಿಕ್ಕಮ್ಮ ಚಿಕ್ಕದೇವಿ ದೇವಸ್ಥಾನ ಕೂಡ ಮುಳುಗಡೆಯಾಗುತ್ತಿದೆ.
ಜಲಾಶಯದಿಂದ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆ ಇರುವುದರಿಂದ ಕಪಿಲಾ ನದಿ ಆಸುಪಾಸಿನಲ್ಲಿರುವ ನಗರದ ತೋಪಿನ ಬೀದಿ, ಕುರುಬಗೇರಿ, ಗೌರಿಗಟ್ಟ, ಹಳ್ಳದಕೇರಿ, ಸರಸ್ವತಿ ಕಾಲೋನಿ, ರಾಜಾಜಿ ಕಾಲೋನಿ ಬಡಾವಣೆ ಎಂದಿನಂತೆ ಮುಳುಗಡೆ ಯಾಗುವ ಸಂಭವವಿದ್ದು ಇಲ್ಲಿನ ಜನರು ಆತಂಕದಲ್ಲಿದ್ದಾರೆ ನದಿಯಲ್ಲಿ ಪ್ರವಾಹ ಹೆಚ್ಚಾದರೆ ತಗ್ಗು ಪ್ರದೇಶದಲ್ಲಿ ವಾಸವಾಗಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ತಾಲೂಕು ಆಡಳಿತ ಸಜ್ಜಾಗಿದೆ ಈಗಾಗಲೇ ತಾಲೂಕು ಆಡಳಿತ ವತಿಯಿಂದ ಧ್ವನಿವರ್ಧಕದ ಮೂಲಕ ನದಿ ಹಂಚಿನಲ್ಲಿರುವ ಬಡಾವಣೆಗಳ ನಿವಾಸಿಗಳು ಮುನ್ನೆಚ್ಚರಿಕೆ ಕ್ರಮ ಅನುಸರಿಸುವಂತೆ ತಾಸಿಲ್ದಾರ್ ಶಿವಮೂರ್ತಿ ಮನವಿ ಮಾಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಮುಂಚಿತವಾಗಿ ಶಾಸಕ ಹರ್ಷ ವರ್ಧನ್ ತಾಲೂಕು ಆಡಳಿತ ಅಧಿಕಾರಿಗಳ ಸಭೆ ಕರೆದು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಹಲವಾರು ಸೂಚನೆಗಳು ನೀಡಿದ್ದಾರೆ. ನದಿಗೆ ಯಾರು ಇಳಿಯದಂತೆ ದೇವಸ್ಥಾನ ವತಿಯಿಂದ ತಿಳಿಸಲಾಗುತ್ತಿದೆ ಸೆಕ್ಯೂರಿಟಿ ಗಾರ್ಡ್ ನೇಮಿಸಲಾಗಿದೆ ಒಟ್ಟಾರೆ ತಾಲೂಕು ಆಡಳಿತ ಸಜ್ಜಾಗಿದೆ.