ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ ಅನಸೂಯ ಮನವಿ

ಕನಕಪುರ, ಏ.೧೦- ಜೆಡಿಎಸ್ ಬಿಜೆಪಿ ಹಿರಿಯ ಮುಖಂಡರ ಒತ್ತಾಯದ ಮೇರೆಗೆ ಡಾ. ಸಿ.ಎನ್. ಮಂಜುನಾಥ್ ಮೈತ್ರಿ ಅಭ್ಯರ್ಥಿಯಾಗಿದ್ದಾರೆ ಎಂದು ಅಭ್ಯರ್ಥಿಯ ಪತ್ನಿ ಅನುಸೂಯ ಹೇಳಿದ್ದಾರೆ.
ಹಾರೋಹಳ್ಳಿ ತಾಲೂಕಿನ ಬೆಳಗುಳಿ ಗ್ರಾಮದ ಕಾರ್‍ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಡಾ. ಮಂಜುನಾಥ್‌ರವರ ಸೇವೆಯನ್ನು ಗುರುತಿಸಿ ಎರಡೂ ಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ ಗುರುತಿಸಿ ಚುನಾವಣಾ ಕಣಕ್ಕೆ ನಿಲ್ಲಿಸಿದ್ದಾರೆ ಎಂದರು.
ಚುನಾವಣೆಯನ್ನು ಒಗ್ಗಟ್ಟಿನಿಂದ ಒಳ್ಳೆಯ ರೀತಿಯಲ್ಲಿ ನಡೆಸಿಕೊಡುವಂತೆ ಮನವಿ ಮಾಡಿದರು. ಮನಸ್ಸನ್ನು ಸಂಕುಚಿತಗೊಳಿಸಿಕೊಳ್ಳಬೇಡಿ , ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಒಳ್ಳೆಯ ಫಲ ಸಿಗುವಂತೆ ಮಾಡುವಂತೆ ಕರೆನೀಡಿದರು.
ಹೆಚ್.ಡಿ. ಕುಮಾರಸ್ವಾಮಿ, ಹಾಗೂ ಯಡಿಯೂರಪ್ಪನವರ ಜಯದೇವ ಆಸ್ಪತ್ರಯಲ್ಲಿ ಡಾ. ಮಂಜುನಾಥ್‌ರವರು ಚಿಕಿತ್ಸೆ ಮೊದಲು ಹಣಪಾವತಿ ನಂತರ ಎಂದು ಘೋಷಣೆ ಮಾಡಿ ಕೆಲಸ ಮಾಡಿದರು. ಆದರೆ ನಾನು ನಿಮ್ಮಲ್ಲಿ ವಿನಂತಿ ಮಾಡುವುದೇನೆಂದರೆ ಮತ ಮೊದಲು ಸೇವೆ ನಿರಂತರ ಎಂಬುದನ್ನು ಮನದಲ್ಲಿ ಇಟ್ಟುಕೊಂಡು ಇರುವ ಕಾಲಾವಕಾಶದಲ್ಲಿ ತಮ್ಮ ತಮ್ಮವ್ಯಾಪ್ತಿಯಲ್ಲಿ ಯಾವುದೇ ಅಮಿಷಗಳಿಗೆ ಒಳಗಾಗದೆ ಡಾ. ಮಂಜುನಾಥ್ ರವರಿಗೆ ಹೆಚ್ಚಿನ ಮತಗಳನ್ನು ಹಾಕಿಸುವಂತೆ ಕಾರ್‍ಯಕರ್ತರಲ್ಲಿ ಮನವಿ ಮಾಡಿದರು.
ಈಸಂದರ್ಭದಲ್ಲಿ ಹಾರೋಹಳ್ಳಿ ಹೊಬಳಿ ಅಧ್ಯಕ್ಷ ಮಲಪ್ಪ, ಮರಳವಾಡಿ ಹೋಬಳಿ ಅಧ್ಯಕ್ಷ ತಮ್ಮಯ್ಯಣ್ಣ, ಕೊಟ್ಟಗಾಳು ಗ್ರಾಮ ಪಂಚಾಯತಿ ಅದ್ಯಕ್ಷ ಪಿಚ್ಚನಕೆರೆ ಜಗದೀಶ್, ಮಾಜಿ ಅದ್ಯಕ್ಷ ಗೊಲ್ಲಹಳ್ಳಿ ಸುರೇಶ್, ಬಿ.ಎಂ. ರಾಜಣ್ಣ, ಕೆಂಪರಾಜು, ಕೆಂಪಣ್ಣ, ಗೋವಿಂದಪ್ಪ, ರಂಗಣ್ಣ, ಕಿರಣ್, ನವೀನ್ ಚಂದನ್, ಚರಣ್, ಶ್ರೀಧರ್, ಮುದುವಾಡಿ ಪ್ರಕಾಶ್, ಕೆಂಚಪ್ಪ, ರಾಜಣ್ಣ, ಅಂಗರಹಳ್ಳಿ ವೆಂಕಟರಮಣ, ಅಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.