ಮೇ7-12 ಸೇನಾ ನೇಮಕಾತಿ ರ್‍ಯಾಲಿ

ಕೋಲಾರ,ಏ.೭: ಮೇ ೦೭ ರಿಂದ ೧೨ರ ವರೆಗೆ ಕೋಲಾರ ಜಿಲ್ಲೆಯ ಕೆ.ಜಿ.ಎಫ್‌ನ ಬಿ.ಇ.ಎಂ.ಎಲ್‌ನ ಕ್ರೀಡಾಂಗಣದಲ್ಲಿ ಬೃಹತ್ ಸೇನಾ ನೇಮಕಾತಿ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು, ಯುವಕ- ಯುವತಿಯರು ಈ ಸುವರ್ಣ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ತಿಳಿಸಿದರು.
ತಮ್ಮ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಸೇನಾ ನೇಮಕಾತಿ ರ್ಯಾಲಿ ಕುರಿತು ಹಮ್ಮಿಕೊಂಡಿದ್ದ, ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೇಮಕಾತಿಯಲ್ಲಿ ಭಾಗವಹಿಸುವವರು ಏಪ್ರಿಲ್ ೨೬ ರೊಳಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಸೇನಾ ನೇಮಕಾತಿಯ ಅಧಿಕಾರಿಯಾದ ಕರ್ನಲ್ ಎನ್.ಬಿ.ಸಿಂಗ್ ಅವರು ಮಾತನಾಡಿ, ಬೃಹತ್ ಮಟ್ಟದಲ್ಲಿ ಸೇನಾ ನೇಮಕಾತಿರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ರ್ಯಾಲಿಗೆ ವಿದ್ಯುತ್ ಸೌಲಭ್ಯ, ಬಿ.ಎಸ್.ಎನ್.ಎಲ್ ಇಂಟರ್‍ನೇಟ್ ಸೌಲಭ್ಯ, ಪೊಲೀಸ್ ಬಂದ್ತೋಸ್ ವ್ಯವಸ್ಥೆ, ಬ್ಯಾರಿಕೇಡ್ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ.ಸ್ನೇಹಾ, ಕೋಲಾರ ನಗರಸಭೆ ಆಯುಕ್ತರಾದ ಶ್ರೀಕಾಂತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುನಾಥ್ ಸೇರಿದಂತೆ ಸೇನಾ ನೇಮಕಾತಿ ಅಧಿಕಾರಿಗಳು ಉಪಸ್ಥಿತರಿದ್ದರು.