ಮೇ10ರಂದು ಸುಗಮ ಮತದಾನಕ್ಕೆ ಸಕಲ ಸಿದ್ಧತೆ :- ಚುನಾವಣಾಧಿಕಾರಿ ಎಸ್. ರವಿ

ಜಗಳೂರು.ಮೇ.೮:- ವಿಧಾನಸಭಾ ಕ್ಷೇತ್ರಕ್ಕೆ ಮೇ. 10 ರಂದು ನಡೆಯಲಿರುವ ಚುನಾವಣೆ ಶಾಂತಿಯುತ ಹಾಗೂ ಸುಗಮವಾಗಿ ನಡೆಯುವ ನಿಟ್ಟಿನಲ್ಲಿ  ಎಲ್ಲಾ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲಾಗದೆ ಎಂದು ಚುನಾವಣಾಧಿಕಾರಿ ಎಸ್.ರವಿ ತಿಳಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ  ಚುನಾವಣಾ ಮತದಾನ ಮತ್ತು ಮತ ಎಣಿಕೆ ಕಾರ್ಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಕ್ಷೇತ್ರದಲ್ಲಿ ಒಟ್ಟು 192,958 ಮತದಾರರಿದ್ದು, 97690 ಪುರುಷರು ಹಾಗೂ  95257 ಮಹಿಳಾ ಮತದಾರರಿದ್ದಾರೆ. ಒಟ್ಟು 262 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  48 ಸೂಕ್ಷ್ಮ  ಮತಗಟ್ಟೆಗಳನ್ನು ಗುರುತಿಸಲಾಗಿದೆ.128 ಮತಗಟ್ಟೆಗಳಲ್ಲಿ ವೆಬ್ ಕ್ಯಾಮರಾ ಅಳವಡಿಸಲಾಗಿದೆ.ಹಿರಿಯ ನಾಗರಿಕರು ಮತ್ತು ಅಂಗವಿಕಲ ಮತದಾರರಿಗೆ  ಮನೆ ಮನೆಗೆ ಭೇಟಿ ನೀಡಿ ಅಂಚೆ ಮತಪತ್ರದ ಮೂಲಕ ಮತ ಚಲಾವಣೆಗೆ ಅವಕಾಶ ನೀಡಲಾಗಿದೆ ಎಂದರು.ಮೇ10 ರಂದು ಮತಗಟ್ಟೆಗಳಲ್ಲಿ ಮತದಾನ ಪ್ರಾರಂಭವಾಗುವುದ ಕ್ಕೂ ಮುನ್ನ ಅಣಕು ಮತದಾನ ನಡೆಯಲಿದೆ.ಮೇ.8 ರಂದು ಬಹಿರಂಗ ಪ್ರಚಾರಕ್ಕೆ ಅಂದು ಕೊನೆಯದಿನ ವಾಗಿ ದ್ದು, ಅಂದು ಸಂಜೆ 6 ಗಂಟೆಗೆ ರಾಜಕೀಯ ಪಕ್ಷಗಳ ಕಾರ್ಯ ಕರ್ತರು ಚುನಾವಣಾ ಕ್ಷೇತ್ರದಿಂದ ತೆರಳಬೇಕು. ನಂತರ ಮನೆ ಮನೆ ಪ್ರಚಾರಕ್ಕೆ ಅವಕಾಶವಿರುತ್ತದೆ.  ಚುನಾವಣಾ ದಿನದಂದು ಅಭ್ಯರ್ಥಿ ಅಥವಾ ಕಾರ್ಯಕರ್ತರು ಕೇವಲ ಮೂರು ವಾಹನಗಳ ನ್ನು ಬಳಸಲು ಅವಕಾಶ ನೀಡಲಾಗಿದೆ ಅದಕ್ಕೂ ಅನುಮತಿ ಕಡ್ಡಾ ಯವಾಗಿರುತ್ತದೆ ಎಂದು ಮಾಹಿತಿ ನೀಡಿದರು.ಚುನಾವಣಾ ಕರ್ತವ್ಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 1 ಡಿಎಸ್‍ಪಿ, 4 ಪಿಐ, 7 ಪಿಎಸ್‍ಐ, 48 ಎಎಸ್‍ಐ, 192 ಎಚ್‍ಸಿ/ಪಿಸಿ,  ಸೇರಿ ಒಟ್ಟು 346 ಜನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಜೊತೆಗೆ 18 ಸಿ.ಆರ್,ಪಿ.ಎಫ್ 18 ಆರ್‍ಪಿಎಫ್,18 ಕೇರಳ ಪೊಲೀಸ್ ಒಳಗೊಂಡಂತೆ ಒಟ್ಟು 54 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಸಿಪಿಐ ಎಂ.ಶ್ರೀನಿವಾಸ್‍ ತಿಳಿಸಿದರು.ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ  ಚಂದ್ರಶೇಖರ್ ಹಾಗೂ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಇದ್ದರು.