ಮೇ 9 ಹಾಗೂ 10 ರಂದು ಬಸ್‍ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ

ಕಲಬುರಗಿ,ಮೇ.8:ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮೇ 10 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣೆ ಕಾರ್ಯಕ್ಕಾಗಿ ಕಲಬುರಗಿ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯಿಂದ ಸುಮಾರು 247 ವಾಹನಗಳನ್ನು ಕರಾರು ಒಪ್ಪಂದದ ಮೇರೆಗೆ ನೀಡಲಾಗಿದೆ.

   ಆದ್ದರಿಂದ ಮೇ 9 ಹಾಗೂ 10 ರಂದು ಎರಡು ದಿನ ಕಾಲ ಬಸ್‍ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಈ ವಿಭಾಗದ ವ್ಯಾಪ್ತಿಯ ಕಲಬುರಗಿ, ಆಳಂದ, ಜೇವರ್ಗಿ, ಯಡ್ರಾಮಿ ಹಾಗೂ ಅಫಜಲಪುರ ತಾಲೂಕುಗಳ ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಎಂದು ಕಲಬುರಗಿ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.