ಮೇ.7ಕ್ಕೆ ನಗರಕ್ಕೆ ಮೋದಿ

ಮೈಸೂರು: ಮೇ.03:- ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭ ಚುನಾವಣೆಯ ನಿಮಿತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿರವರ ರಾಜ್ಯದ ಕೊನೆ ಚುನಾವಣೆ ಪ್ರಚಾರದ ಭೃಹತ್ ಸಮಾವೇಶ ಮೇ.7ಕ್ಕೆ ಮೈಸೂರಲ್ಲಿ ನಡೆಯಲಿದೆ.
ಅಂದು ಸಂ.5ಕ್ಕೆ ಮೈಸೂರು – ಊಟಿ ರಾಷ್ಟ್ರೀಯ ಹೆದ್ದಾರಿ 766 ರ ಸಮೀಪ ಇರುವ ಎಲಚೆಗೆರೆ ಗೇಟ್ ಬಳಿ ಸಮಾವೇಶ ನಡೆಯಲಿದೆ. ಸಮಾವೇಶ ನಡೆಯುವ ವೇದಿಕೆ , ಹೆಲಿಪಾಡ್ ಹಾಗೂ ಇನ್ನಿತರೆ ವ್ಯವಸ್ಥೆಗಳ ಬಗ್ಗೆ ಮಾಜಿ ಸಚಿವ ಹಾಗೂ ಶಾಸಕ ಎಸ್.ಎ.ರಾಮದಾಸ್ ಮತ್ತು ಸಂಸದ ಪ್ರತಾಪ್ ಸಿಂಹ, ಬಿಹಾರದ ರಾಜ್ಯಸಭಾ ಸದಸ್ಯ ವಿವೇಕ್ ಠಾಕೂರ್, ಎಂ.ಎಲ್.ಸಿ ಕೇಶವಪ್ರಸಾದ್, ಮೈ.ವಿ.ರವಿಶಂಕರ್, ಸುರೇಶ್ ಬಾಬು, ಡಾ.ಶಿವರಾಂ, ಡಾ.ಹರ್ಷವರ್ಧನ್, ಶ್ರೀನಿವಾಸ್ ರೆಡ್ಡಿ, ಸಂಜಯ್ ಶರ್ಮ ಮೊದಲಾದವರೊಂದಿಗೆ ಪೂರ್ವಬಾವಿ ಸಭೆ ನಡೆಯಿತು.
ಕಾರ್ಯಕ್ರಮದ ನಡೆಯುವ ಸ್ಥಳವನ್ನು ಎಸ್.ಪಿ.ಜಿ ಯವರು ಪರಿಶೀಲಿಸಿ ಅಂತಿಮಗೋಳಿಸಿದರು. ವಾಯುಸೇನೆಯ ವಿಂಗ್ ಕಮಾಂಡರ್ ಕೆ.ಪಿ ಸಿಂಗ್ ಮಿಲಿಟರಿ ಹೆಲಿಕಾಪ್ಟರ್ ಮೂಲಕ ಬಂದು ಲ್ಯಾಂಡಿಗ್ ಬಗ್ಗೆ ಅಂತಿಮ ತೀರ್ಮಾನಿಸಲಾಯಿತು.