
ಕಲಬುರಗಿ,ಮೇ.4:ನಗರದ ಜೀನಿಯಸ್ ಅಕಾಡೆಮಿ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ವತಿಯಿಂದ ಮೇ 5 ರಂದು ವ್ಯಂಗ್ಯ ಚಿತ್ರಕಾರರ ದಿನಾಚರಣೆಯ ಪ್ರಯುಕ್ತ ಬೆಳಿಗ್ಗೆ 11:30 ನಿಮಿಷಕ್ಕೆ ವ್ಯಂಗ್ಯ ಚಿತ್ರಕಲಾವಿದ ಎಂ. ಸಂಜೀವ್ ಅವರಿಂದ ವ್ಯಂಗ್ಯ ಚಿತ್ರಗಳ ಇತಿಹಾಸ, ಉಗಮ ಕುರಿತು ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಏರ್ಪಡಿಸಿದೆ.
ಕೆಬಿಎನ್ ಟೈಮ್ಸ್ ಪತ್ರಿಕೆಯ ವ್ಯವಸ್ಥಾಪಕ ವಿಠ್ಠಲ್ ಮೇತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜಿನೀಯಸ್ ಅಕಾಡೆಮಿ ಕೇಂದ್ರದ ಮುಖ್ಯಸ್ಥರಾದ ಶಶಿಕಾಂತ್ ಉದನೂರು ಅಧ್ಯಕ್ಷತೆ ವಹಿಸಲಿದ್ದಾರೆ.
ಸ್ಥಳ ಜೀನಿಯಸ್ ಅಕಾಡೆಮಿ, ಸಂಗಮೇಶ್ವರ ಆಸ್ಪತ್ರೆ ಎದರುಗಡೆ, ಎಂ.ಎಸ್.ಕೆ. ಮಿಲ್ ರಸ್ತೆ, ಕಲಬುರ್ಗಿ ಇಲ್ಲಿ ಜರುಗಲಿದೆ ಎಂದು ಹಿರಿಯ ಚಿತ್ರಕಲಾವಿದರಾದ ನಾರಾಯಣ ಎಂ. ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.