
ಬೀದರ್:ಮೇ.3: ಬುದ್ಧಿಷ್ಟ ಮಹಾವಿಹಾರ ಧಮ್ಮ ದರ್ಶನ ಭೂಮಿ ವೈಶಾಲಿ ನಗರ ಆಣದೂರನಲ್ಲಿ 2567ನೇ ಬುದ್ಧ ಪೂರ್ಣಿಮೆಯ ಮಹಾ ಉತ್ಸವ ದಿನಾಂಕ 05/05/2023 ರಂದು ಜರಗಲಿದೆ. ಬೌದ್ಧ ಅನಿಯಾಯಿಗಳಿಗೆ ತಮಗೆಲ್ಲ ಗೊತ್ತಿರುವ ಹಾಗೆ ಬುದ್ಧ ಪೂರ್ಣಿಮೆ ಬೌದ್ಧರ ಬಹುದೊಡ್ಡ ಹಬ್ಬ ಎಲ್ಲಾ ಬೌದ್ಧ ರಾಷ್ಟ್ರಗಳಲ್ಲಿ ಹಾಗೂ ವಿವಿಧ ದೇಶಗಳಲ್ಲಿರುವ ಬೌದ್ಧರು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ ಹಾಗಾಗಿ ಈ ಮಹಾಪುಣ್ಯದಿನದಂದು ಬುದ್ಧ ವಿಹಾರ ಆಣದೂರಿನಲ್ಲಿ ಪೂಜ್ಯ ಭಂತೆ ದಮಾನಂದ್ ಮಹಾಥೆರೋ ಸಂಸ್ಥಾಪಕರು ಪೂಜ್ಯ ಭಂತೆ ಜ್ಞಾನಸಾಗರ ಥೆರೋ ಹಾಗೂ ಭೀಕ್ಕು ಸಂಘ ವತಿಯಿಂದ ಬುದ್ಧ ಪೂರ್ಣಿಮೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮ ಬೆಳಗ್ಗೆ 11:30 ರಿಂದ 01:00 ವರೆಗೆ ಸಾಮೂಹಿಕ ಬುದ್ಧವಂದನ, ವಿಶ್ವಶಾಂತಿಗಾಗಿ ಮೈತ್ರಿ ಧ್ಯಾನ ಮಧ್ಯಾಹ್ನ 2:00 ಯಿಂದ 4:00 ಗಂಟೆವರೆಗೆ ಭೀಕ್ಕು ಸಂಘದಿಂದ ಧಮ್ಮ ಪ್ರವಚನ ಮಧ್ಯಾಹ್ನ 4:00 ರಿಂದ 6:00 ಗಂಟೆಯವರೆಗೆ ಬುದ್ಧರ ಮೂರ್ತಿಯ ಮೆರವಣಿಗೆ ಕಾರ್ಯಕ್ರಮ ಸಾಯಂಕಾಲ 6:00 ಬುದ್ಧ ಗೀತೆಗಳು ಭೋಜನ ದಾನ ಬೆಳಗ್ಗೆ 11:00 ಗಂಟೆಯಿಂದ ಪ್ರಾರಂಭಗೊಳ್ಳುತ್ತದೆ.
ಹಾಗಾಗಿ ಬೀದರ್ ಜಿಲ್ಲೆಯ ಬೌದ್ಧ ಅನುಯಾಯಿಗಳು ಮತ್ತು ಜಿಲ್ಲೆಯ ಸರ್ವ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪುಣ್ಯ ಸಂಪಾದನೆ ಪಡೆದುಕೊಳ್ಳಬೇಕೆಂದು ಶಿವಾನಂದ ಶಿಂಧೆ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.