ಮೇ 5 ರಂದು ಕಸಾಪ 109 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸತ್ಕಾರ

ಕಲಬುರಗಿ, ಮೇ,01: ಕನ್ನಡ ಸಾಹಿತ್ಯ ಪರಿಷತ್ತಿನ 109 ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಸತ್ಕಾರ
ಸಮಾರಂಭವು ಮಹಾಗಾಂವ ಕ್ರಾಸ್ ನಲ್ಲಿರುವ ಮೌಂಟ್ ವೇವ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಹಾಗಾಂವ ಕ್ರಾಸ್, ದಿನಾಂಕ 05;04;2023 ಬೆಳಗ್ಗೆ 10;30 ಗಂಟೆಗೆ ಜರುಗಲಿದೆ ಎಂದು ಕಮಲಾಪುರ ಕಸಾಪ ಅಧ್ಯಕ್ಷ ಸುರೇಶ ಲೇಂಗಟಿ ತಿಳಿಸಿದ್ದಾರೆ. ಮಹಾಗಾಂವ ಕ್ರಾಸ್ ನಲ್ಲಿರುವ ಮೌಂಟ್ ವೇವ್ ಶಿಕ್ಷಣ ಸಂಸ್ಥೆ ಯ ಅಧ್ಯಕ್ಷ
ಶಾಂತಕುಮಾರ ಪುರದಾಳ ಅಧ್ಯಕ್ಷತೆ ವಹಿಸಲಿದ್ದು, ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಸುರೇಶ ಲೇಂಗಟಿ ನೇತೃತ್ವ ವಹಿಸುವರು,
ಕಮಲಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಮಾರುತಿ ಮರ್ಪಳ್ಳಿ ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ
ಪ್ರಕಾಶ ನರೋಣಾ, ಕಮಲಾಪುರ ಕಸಾಪ ನಿಕಟಪೂರ್ವ ಅಧ್ಯಕ್ಷ ದಾಸಿಮಯ್ಯ ವಡ್ಡನಕೇರಿ ಮಹಾಗಾಂವ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರು ಚಂದ್ರಕಾಂತ ಬಿರಾದರ, ಮಹಾಗಾಂವ ಕಸಾಪ ವಲಯದ ಅಧ್ಯಕ್ಷ ಅಂಬಾರಾಯ ಮಡ್ಡೆ, ಕಮಲಾಪುರ ಕಸಾಪ ಗೌರವ ಕಾರ್ಯದರ್ಶಿಗಳಾದ
ರವೀಂದ್ರ ಬಿ ಕೆ ,ಪ್ರಶಾಂತ ಮಾನಕರ
ಕೋಶಾಧ್ಯಕ್ಷ ನಾಗಣ್ಣ ವಿಶ್ವಕರ್ಮ , ಆನಂದ ವಾರಿಕ, ಚೇತನ ಮಹಾಜನ, ಮಲ್ಲಿನಾಥ ಅಂಬಲಗಿ, ಕಸ್ತೂರಿಬಾಯಿ ರಾಜೇಶ್ವರ, ಸಂಜುಕುಮಾರ ನಾಟೀಕರ, ಫಯಾಜ ಕಮಲಾಪುರ ಇತರರು ಭಾಗವಹಿಸಲಿದ್ದಾರೆ.