ಮೇ 4 ರ ಬಳಿಕ ಸಾರಿಗೆ ನೌಕರರ ಬೇಡಿಕೆಗೆ ಅಸ್ತು:ಸವದಿ

ಕಲಬುರಗಿ ಏ 6: ಮೇ ನಾಲ್ಕರ ನಂತರ ಸಾರಿಗೆ ನೌಕರರ ಬೇಡಿಕೆ ಈಡೇರಿಸುವದಾಗಿ ಮನವರಿಕೆ ಮಾಡಿದ್ದೇನೆ.ನೀತಿ ಸಂಹಿತೆ ಜಾರಿ ಇರುವದರಿಂದ ಏನು ಹೇಳಲು ಆಗುವದಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಹೇಳಿದರು. ಕಲಬುರಗಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವೇತನ ಏರಿಕೆ ಘೋಷಣೆ ಮಾಡುವ ಬಗ್ಗೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ.ಇಂದು ಸಾರಿಗೆ ನೌಕರರ ಜೊತೆ ಅಧಿಕಾರಿಗಳು ಸಭೆ ನಡೆಸಲಿದ್ದಾರೆ ಎಂದರು.
ಸಾರಿಗೆ ನೌಕರರ ಎಂಟು ಬೇಡಿಕೆಯನ್ನ ಈಡೇರಿಸಿದ್ದೇವೆ.ಇನ್ನೂ ಒಂದು ಬಾಕಿ ಇದೆ.ಈಗ ನೀತಿ ಸಂಹಿತೆ ಜಾರಿ ಇರುವದರಿಂದ ವೇತನ ಏರಿಕೆ ಬೇಡಿಕೆ ಈಡೇರಿಸೋದಕ್ಕೆ ಆಗ್ತಿಲ್ಲ. ಸಾರಿಗೆ ನೌಕರರು ಮುಷ್ಕರ ನಡೆಸಿದರೆ
ಕೊರೋನಾ ಸಂಧರ್ಭದಲ್ಲಿ ಬಡವರಿಗೆ ಮಧ್ಯಮ ವರ್ಗದವರಿಗೆ ಶಾಲಾ ಮಕ್ಕಳಿಗೆ ಸಾಕಷ್ಟು ತೊಂದರೆ ಆಗುತ್ತದೆ ಪ್ರತಿಭಟನೆ ಕೈಬಿಡಬೇಕು ಅಂತ ಸಾರಿಗೆ ನೌಕರರಿಗೆ ಮನವಿ ಮಾಡಿದ್ದೇವೆ ಎಂದರು.
ಸರ್ಕಾರಕ್ಕೆ ಬುದ್ಧಿ ಇಲ್ಲ ಎನ್ನುವ ಕೋಡಿಹಳ್ಳಿ ಚಂದ್ರಶೇಖರ ಹೇಳಿಕೆಗೆ ಉತ್ತರಿಸಿ
ಕೋಡಿಹಳ್ಳಿ ಚಂದ್ರಶೇಖರ್ ಮೇಧಾವಿ ಬಹಳ ಬುದ್ದಿವಂತರು.ಕೋಡಿಹಳ್ಳಿ ಅವರಷ್ಟು ಬುದ್ಧಿ ನಮ್ಮ ಸರ್ಕಾರಕ್ಕೆ ಇಲ್ಲ ಅಂತಾ ಅಂದುಕೊಳ್ಳುತ್ತೇನೆ.ಅನಾವಶ್ಯಕವಾಗಿ ಸರ್ಕಾರ ಮತ್ತು ನೌಕರರ ಮಧ್ಯೆ ಗೊಂದಲ ಸೃಷ್ಟಿ ಮಾಡೋದಕ್ಕೆ ಮುಂದಾಗಿದ್ದಾರೆ
ಒಂದು ವೇಳೆ ಬಂದ್ ಮಾಡಿರೆ ಅನಿವಾರ್ಯವಾಗಿ ಖಾಸಗಿ ವಾಹನಗಳನ್ನ ತಂದು ಓಡಿಸುತ್ತೇವೆ ಎಂದರು.
ಬಿಜೆಪಿಗೆ ಗೆಲುವು:
ಮಸ್ಕಿ, ಬಸವಕಲ್ಯಾಣ, ಬೆಳಗಾವಿಯಲ್ಲಿ ಪ್ರಚಾರ ಮಾಡುತ್ತಿದ್ದೇವೆ.ಮೂರು ಕ್ಷೇತ್ರದಲ್ಲಿ ದೊಡ್ಡ ಅಂತರದಲ್ಲಿ ಬಿಜೆಪಿ ಗೆಲ್ಲುತ್ತದೆ.ನಮ್ಮಲ್ಲಿ ಸಣ್ಣಪುಟ್ಟ ಗೊಂದಲಗಳು ಇವೆ ವರಿಷ್ಠರು ಸರಿಪಡಿಸುತ್ತಾರೆ.ಆದರೆ ಕಾಂಗ್ರೆಸ್ ನಲ್ಲಿ ಮನೆ ಒಂದು ಮೂರು ಬಾಗಿಲು ಆಗಿದೆ ಎಂದರು.