ಮೇ 4ರವರೆಗೆ ನೈಟ್ ಕಫ್ರ್ಯೂ, ವಿಕೆಂಡ್ ಕಫ್ರ್ಯೂ: ನಿಷೇಧಾಜ್ಞೆ ಜಾರಿಗೊಳಿಸಿ ಡಿ.ಸಿ ಆದೇಶ

ಬೀದರ:ಎ.23: ಜಿಲ್ಲೆಯಲ್ಲಿ ಕೊರೋನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮವಾಗಿ ಜಿಲ್ಲಾದ್ಯಂತ ಏಪ್ರೀಲ್ 21ರ ರಾತ್ರಿ 9 ಗಂಟೆಯಿಂದಲೇ ಅನ್ವಯವಾಗುವಂತೆ ಮೇ 4ರ ಬೆಳಗ್ಗೆ 6 ಗಂಟೆಯ ವರೆಗೆ ನೈಟ್ ಕಫ್ರ್ಯು ಹಾಗೂ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯ ವರೆಗೆ ವಿಕೆಂಡ್ ಕಫ್ರ್ಯೂ ಸಂದರ್ಭದಲ್ಲಿ ಆದೇಶ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಸಿ.ಆರ್.ಪಿ.ಸಿ. ಕಾಯ್ದೆ 1973 ರ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಆದೇಶ ಹೊರಡಿಸಿದ್ದಾರೆ.
ಸರಕಾರದ ಮುಖ್ಯ ಕಾರ್ಯದಶಿಗಳು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರು ರಾಜ್ಯದಲ್ಲಿ ಕಳೆದ 2 ವಾರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗುತ್ತಿರುವುದರಿಂದ, ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಪಾಲನೆ ಮಾಡುವ ಸಂಬಂಧ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ 21.04.2021ರ ರಾತ್ರಿ 9 ಗಂಟೆಯಿಂದ ದಿನಾಂಕ 04.05.2021ರ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕಫ್ರ್ಯು ಹಾಗೂ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ವಿಕೆಂಡ್ ಕಫ್ರ್ಯೂ ಜಾರಿ ಮಾಡಿ ಕಟ್ಟು ನಿಟ್ಟಾಗಿ ಅನುಷ್ಠಾನ ಗೊಳಿಸುವಂತೆ ಕೆಲವು ಮಾರ್ಗಸೂಚಿಗಳೊಂದಿಗೆ ಆದೇಶಿಸಿರುತ್ತಾರೆ.
ಅದರಂತೆ ಬೀದರ್ ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಹರಡದಂತೆ ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಜಿಲ್ಲಾಡಳಿತದಿಂದ ಕೈ ಗೊಳ್ಳಲಾಗಿದ್ದು, ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿ ಕೋನದಿಂದ ಜಿಲ್ಲೆಯಾದ್ಯಂತ 21.04.2021ರ ರಾತ್ರಿ 9 ಗಂಟೆಯಿಂದಲೇ ಅನ್ವಯಾಗುವಂತೆ ದಿನಾಂಕ 4.05.2021 ರ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕಫ್ರ್ಯು ಹಾಗೂ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ವಿಕೆಂಡ್ ಕಫ್ರ್ಯೂ ಸಂದರ್ಭದಲ್ಲಿ ಆದೇಶ ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅವಶ್ಯಕವಾಗಿರುವುದರಿಂದ ಸಿ.ಆರ್.ಪಿ.ಸಿ. ಕಾಯ್ದೆ 1973 ರ ಕಲಂ 144 ರನ್ವಯ ನಿಷೇಧಾಜ್ಞೆ ಸಿ.ಆರ್.ಪಿ.ಸಿ. ಕಾಯ್ದೆ 1973 ರ ಕಲಂ 144 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರಕಾರವು ಆದೇಶದಲ್ಲಿ ಹೊರಡಿಸಿರುವ ಮಾರ್ಗಸೂಚಿಗಳಲ್ಲಿನ ಎಲ್ಲಾ ಷರತ್ತುಗಳಿಗೆ ಒಳಪಟ್ಟು ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿದ್ದಾರೆ.
ನೈಟ್ ಕಫ್ರ್ಯೂ ಮಾರ್ಗಸೂಚಿಗಳು : ಪ್ರತಿ ದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವೈಯಕ್ತಿಕವಾಗಿ ಅತ್ಯವಶ್ಯಕ ಚಟುವಟಿಕೆಗಳಿಗೆ ಹೊರತು ಪಡಿಸಿ ಸಂಚಾರ ಮಾಡುವುದನ್ನು ನಿಷೇಧಿಸಿದೆ ರೋಗಿಗಳು ಹಾಗೂ ಅವರ ಸಹಾಯಕರಿಗೆ ತುರ್ತು ಸಂದರ್ಭದಲ್ಲಿ ಸಂಚರಿಸಲು ಅನುಮತಿಸಿದೆ. ಎಲ್ಲಾ ಕೈಗಾರಿಕಾ ಕಂಪನಿಗಳಲ್ಲಿ ರಾತ್ರಿ ಪಾಳೆಯಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ಅನುಮತಿಸಿದೆ. ಕಂಪನಿಯಿಂದ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರುವುದು. ನೌಕರರು, ಟೆಲಿಕಾಂ ಸಂಸ್ಥೆಯ ವಾಹನಗಳು, ಇಂಟರ್ ನೇಟ್ ಸೇವೆ ಒದಗಿಸುವ ನೌಕರರು, ತುರ್ತು ಸೇವೆ ಒದಗಿಸುವ ಐ.ಟಿ.ಕಂಪನಿಯ ನೌಕರರಿಗೆ ಸಂಚರಿಸಲು ಅನುಮತಿಸಿದೆ. ಕೆಲಸ ನಿರ್ವಹಿಸುವ ಸಂಸ್ಥೆಯಿಂದ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರುವುದು. ಆರೋಗ್ಯ ಮತ್ತು ತುರ್ತು ಸೇವೆ ಒದಗಿಸುವ ಔಷಧ ಅಂಗಡಿಗಳು, ಆರೋಗ್ಯ ಕೇಂದ್ರಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸತಕ್ಕದ್ದು ಹಾಗೂ ಇತರೆ ಔದ್ಯಮಿಕ ಚಟುವಟಿಕೆಗಳು ನಿಷೇಧಿಸಿದೆ. ಸರಕು ಸಾಗಾಣಿಕೆಗಳಿಂದ ತುಂಬಿರುವ ವಾಹನಗಳು, ಹೋಮ ಡಿಲೇವರಿ, ಮಾಡುವ ವಾಹನಗಳು, ಇ ಕಾಮರ್ಸ್ ಕಂಪನಿಯ ವಾಹನಗಳು ಸಂಚರಿಸಲು ಅನುಮತಿಸಿದೆ. ರಾತ್ರಿಯಲ್ಲಿ ದೂರ ಪ್ರಯಾಣದ ಬಸ ಸೇವೆ, ರೈಲು ಹಾಗೂ ವಾಯು ಸಂಚಾರಕ್ಕೆ ಅನುಮತಿಸಿದೆ. ಪ್ರಯಾಣಿಕರಿಗೆ ವೈಯಕ್ತಿಕ, ಸಾರ್ವಜನಿಕ ಹಾಗೂ ಟ್ಯಾಕ್ಸಿ ಸಂಚಾರಕ್ಕೆ ಅನುಮತಿಸಿದೆ. ಪ್ರವಾಸದ ಸಂದರ್ಭದಲ್ಲಿ ಪ್ರಯಾಣದ ಟಿಕೇಟ್ ಕಡ್ಡಾಯವಾಗಿ ಹೊಂದಿರುವುದು. ಎಲ್ಲಾ ರೀತಿಯ ಕಟ್ಟಡ ಚಟುವಟಕೆಗಳಿಗೆ ಅನುಮತಿಸಿದೆ.
ವಿಕೆಂಡ್ ಕಫ್ರ್ಯೂ ಮಾರ್ಗಸೂಚಿಗಳು: ಕೇಂದ್ರ ಮತ್ತು ರಾಜ್ಯ ಸರಕಾರಿ ವಲಯಗಳಲ್ಲಿ ಹಾಗೂ ಕೋವಿಡ್-9 ತುರ್ತು ಪರಿಸ್ಥಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸಂಚರಿಸಲು ಅನುಮತಿಸಿದೆ. ಎಲ್ಲಾ ಕೈಗಾರಿಕಾ ಕಂಪನಿ, ಸಂಸ್ಥೆ, ತುರ್ತ ಸೇವೆ ಒದಗಿಸುವ ಸಂಸ್ಥೆಗಳಿಗೆ 24 ಗಂಟೆ ಕೆಲಸ ನಿರ್ವಹಿಸಲು ನೌಕರರಿಗೆ ಅನುಮತಿಸಿದೆ. ಕಂಪನಿಯಿಂದ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರುವುದು. ನೌಕರರು, ಟೆಲಿಕಾಂ ಸಂಸ್ಥೆಯ ವಾಹನಗಳು, ಇಂಟರ್‍ನೇಟ್ ಸೇವೆ ಒದಗಿಸುವ ನೌಕರರು, ತುರ್ತು ಸೇವೆ ಒದಗಿಸುವ ಐ.ಟಿ.ಕಂಪನಿಯ ನೌಕರರಿಗೆ ಸಂಚರಿಸಲು ಅನುಮತಿಸಿದೆ.
ಕೆಲಸ ನಿರ್ವಹಿಸುವ ಸಂಸ್ಥೆಯಿಂದ ನೀಡಿರುವ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರುವುದು. ರೋಗಿಗಳು ಹಾಗೂ ಅವರ ಸಹಾಯಕರಿಗೆ ಸಂಬಂಧಿಗಳಿಗೆ ತುರ್ತು ಸಂದರ್ಭದಲ್ಲಿ ಹಾಗೂ ವ್ಯಾಕ್ಸಿನೇಶನ್ ಪಡೆಯಲು ತೆರಳುವ ಸಾರ್ವಜನಿಕರಿಗೆ ಸಂಚರಿಸಲು ಗುರುತಿನ ಚೀಟಿಯೊಂದಿಗೆ ಅನುಮತಿಸಿದೆ. ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಸಾರ್ವಜನಿಕರಿಗೆ ಅವಶ್ಯಕವಾಗಿರುವ ನೆರೆಹೊರೆ ಅಂಗಡಿಗಳಲ್ಲಿ ದಿನಸಿ ಸಾಮಗ್ರಿ, ಹಣ್ಣು, ತರಕಾರಿ, ಹಾಲು, ಮಾಂಸ ಹಾಗೂ ಮೀನು ಮಾರಾಟಕ್ಕೆ ಅನುಮತಿಸಿದೆ. ಅತ್ಯವಶ್ಯಕ ವಸ್ತುಗಳನ್ನು ಮನೆ ವಿತರಣೆ (ಹೋಮ ಡಿಲೆವರಿ) ಮಾಡಲು ಕೋವಿಡ್-19 ನಿಯಮಾವಳಿಯನ್ವಯ ಅನುಮತಿಸಿದೆ.
ರೆಸ್ಟಾರೆಂಟ್ ಮತ್ತು ಕೆಟ್ರಿನ್‍ಗಳಲ್ಲಿ ಪಾರ್ಸಲ್ ವ್ಯವಸ್ಥೆ ಹಾಗೂ ಮನೆ ವಿತರಣೆಗೆ (ಹೋಮ ಡಿಲೆವರಿ) ಅನುಮತಿಸಿದೆ. ರಾತ್ರಿಯಲ್ಲಿ ದೂರ ಪ್ರಯಾಣದ ಬಸ ಸೇವೆ, ರೈಲು ಹಾಗೂ ವಾಯು ಸಂಚಾರಕ್ಕೆ ಅನುಮತಿಸಿದೆ. ಪ್ರಯಾಣಿಕರಿಗೆ ವೈಯಕ್ತಿಕ, ಸಾರ್ವಜನಿಕ ಹಾಗೂ ಟ್ಯಾಕ್ಸಿ ಸಂಚಾರಕ್ಕೆ ಕೋವಿಡ್-19 ನಿಯಮಾವಳಿಯನ್ವಯ ಅನುಮತಿಸಿದೆ.
ಪ್ರವಾಸದ ಸಂದರ್ಭದಲ್ಲಿ ಪ್ರಯಾಣದ ಟಿಕೇಟ್ ಕಡ್ಡಾಯವಾಗಿ ಹೊಂದಿರುವುದು. ಮದುವೆ ಸಮಾರಂಭಗಳಿಗೆ 50 ಜನರಿಗೆ ಮೀರದಂತೆ ಕೋವಿಡ್-19 ಮಾರ್ಗಸೂಚಿ ಪಾಲಿಸುವ ಷರತ್ತುಗೊಳಪಟ್ಟು ಅನುಮತಿ ನೀಡುವುದು. ಅಂತ್ಯ ಕ್ರಿಯೆ, ಶವ ಸಂಸ್ಕಾರಕ್ಕೆ 20 ಜನರಿಗೆ ಮೀರದಂತೆ ಕೋವಿಡ್-19 ಮಾರ್ಗಸೂಚಿ ಪಾಲಿಸುವ ಷರತ್ತುಗೊಳಪಟ್ಟು ಅನುಮತಿ ನೀಡುವುದು.
ಜಿಲ್ಲೆಯ ಎಲ್ಲಾ ಚಿತ್ರಮಂದಿರಗಳು, ಶಾಪಿಂಗ್ ಮಾಲ್ಸ್, ಜಿಮ್ ಕೇಂದ್ರಗಳು, ಸ್ಪೋಟ್ರ್ಸ ಕಾಂಪ್ಲೆಕ್ಸ್, ಸ್ವಿಮಿಂಗ್ ಪೂಲ್ಸ್, ಮನೋರಂಜನೆ ಪಾರ್ಕಗಳು, ಥೇಟರ್ಸ್, ಬಾರ್ ಮತ್ತು ಅಡ್ಯುಟೋರಿಯಮ್ಸ್, ಅಸೆಂಬ್ಲಿ ಹಾಲ್ ಗಳು ಮುಚ್ಚುವಂತೆ ಸೂಚಿಸಿದೆ.
ಎಲ್ಲಾ ಸಾಮಾಜಿಕ, ರಾಜ್ಯಕೀಯ, ಕ್ರೀಡೆ, ಮನೋರಂಜನೆ, ಸಾಂಸ್ಕ್ರತಿಕ, ಧಾರ್ಮಿಕ ಹಾಗೂ ಇತರೆ ಜನದಟ್ಟನೆಯಿಂದ ಕೂಡುವ ಕಾರ್ಯಕ್ರಮ ನಿಷೇಧಿಸಿದೆ. ಜಿಲ್ಲೆಯ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕ ಪೂಜೆ ಮಾಡುವುದನ್ನು ನಿಷೇಧಿಸಿದೆ. ದಿನ ನಿತ್ಯದ ಧಾರ್ಮಿಕ ಪೂಜೆ ಕಾರ್ಯಕ್ರಮಗಳನ್ನು ಸಾರ್ವಜನಿಕರು ಇಲ್ಲದೆ ಮುಂದುವರೆಸಲು ಅನುಮತಿಸಿದೆ. ಕಟ್ಟಡ ಚಟುವಟಕೆಗಳನ್ನು ನಿಷೇಧಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.