ಮೇ 4ರಂದು ಹೊಸಳ್ಳಿ (ಎಚ್) ಗ್ರಾಮದ ಜಾತ್ರಾ ಮಹೋತ್ಸವ

ಕಲಬುರಗಿ:ಏ.24: ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಹೊಸಳ್ಳಿ (ಎಚ್) ಗ್ರಾಮದ ಶ್ರೀ ನಂದಿ ಬಸವೇಶ್ವರ 74ನೇ ಜಾತ್ರಾ ಮಹೋತ್ಸವವನ್ನು ಮೇ 4ರ ಶನಿವಾರದಂದು ಆಯೋಜಿಸಲಾಗಿದೆ ಎಂದು ಗ್ರಾಮದ ಶ್ರೀ ನಂದಿಬಸವೇಶ್ವರ ಸೇವಾ ಸಮಿತಿ ಹಾಗೂ ಸಕಲ ಸದ್ಭಕ್ತಮಂಡಳಿ ವತಿಯಿಂದ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸಳ್ಳಿ (ಎಚ್) ಗ್ರಾಮದ ಸಂಸ್ಥಾನ ಹೀರೆಮಠದ ಶ್ರೀ ಷ. ಬ್ರ. ಸಿದ್ದಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ದಿನಾಂಕ 29.04.2024 ರಿಂದ ದಿನಾಂಕ 02.05.2024ರ ವರೆಗೆ ಪ್ರತಿದಿನ ರಾತ್ರಿ 08ರಿಂದ 11.30ರ ವರೆಗೆ ಪಲ್ಲಕ್ಕಿ ಮಹೋತ್ಸವ ಜರುಗುವುದು. 03.05.2024ರಂದು ಸಾಯಂಕಾಲ 5 ಗಂಟೆಗೆ ಅಗ್ನಿ ಕುಂಡಕ್ಕೆ ನೀರು ಎರೆಯಲಾಗುವುದು. 04.05.2024ರಂದು ಬೆಳಿಗ್ಗೆ 03 ಗಂಟೆಯಿಂದ 06 ಗಂಟೆಯವರೆಗೆ ಪಲ್ಲಕ್ಕಿ ಮಹೋತ್ಸವ ಮತ್ತು ಪುರವಂತರಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತದನಂತರ ಅಗ್ನಿ ಪ್ರವೇಶ ಮಾಡಲಾಗುವುದು.
ಅದೇ ದಿನ ಸಾಯಂಕಾಲ 06ಗಂಟೆಗೆ ಕುಂಭ, ನಂದಿಕೋಲು, ಭಜನೆ ಹಾಗೂ ಮೆರವಣಿಗೆಯೊಂದಿಗೆ ನಂದಿಬಸವೇಶ್ವರರ 74ನೇ ಜಾತ್ರಾಮಹೋತ್ಸವದ ರಥೋತ್ಸವವನ್ನು ವಿಜೃಂಭಣೆಯಿಂದ ಜರುಗುವುದು. ದಿನಾಂಕ 05.05.2024ರಂದು ಬೆಳಿಗ್ಗೆ 08ಗಂಟೆಯಿಂದ ಜಂಗಿ ಪೈಲ್ವಾನರ ಕುಸ್ತಿ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.