ಮೇ 31ಕ್ಕೆ‌ ಪಿಡಿಐಟಿ ಕಾಲೇಜ್ ವಾರ್ಷಿಕೋತ್ಸವ


ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ), ಮೇ.27: ವಿವಿ ಸಂಘದ ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಮೇ31ತನ್ನ ವಾರ್ಷಿಕೋತ್ಸವ “ಸಿಂಚನ2024” ನಡೆಯಲಿದೆ ಎಂದು ಮಹಾವಿದ್ಯಾಲಯದ ಅಧ್ಯಕ್ಷ ಕರಿಬಸವ ಬಾದಾಮಿ ತಿಳಿಸಿದರು‌.
ಹೊಸಪೇಟೆಯ ಪತ್ರಿಕಾಭವನದಲ್ಲಿ ಸೋಮವಾರ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೇ 31ರಂದು ಬೆಳಿಗ್ಗೆ ಪದವಿ ದಿನಾಚರಣೆ, ಸಂಜೆ ಕ್ರೀಡಾದಿನಾಚಣೆ ಜೂನ್ 1ರಂದು ಸಂಜೆ ಕಾಲೇಜು ವಾರ್ಷಿಕೋತ್ಸವ ನಡೆಯಲಿದೆ ಎಂದರು. ಪದವಿ ದಿನಾಚರಣೆಯನ್ನು ಕಲಬುರ್ಗಿಯ ಶರಣಬಸವ ವಿಶ್ವ ವಿದ್ಯಾಲಯದ ಕುಲಪತಿ ಪ್ರೋ. ಅನಿಲ್ ಕುಮಾರ ಬಿಡವೆ, ಬಳ್ಳಾರಿ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದ ಕುಲಪತಿ ಪ್ರೋ.ಜೆ.ತಿಪ್ಪೇರುದ್ರಪ್ಪ ಆಗಮಿಸಲಿದ್ದಾರೆ.
ಕ್ರೀಡಾ ದಿನಾಚರಣೆಗೆ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಹರಿಬಾಬು, ಎಂಎಸ್ ಪಿಎಲ್ ನ ಕಂಪನಿ ಕಾರ್ಯದರ್ಶಿ ಅನಿಲ್ ಕವಾಡಿ ಭಾಗವಹಿಸಲಿದ್ದಾರೆ. ಅಂತೆಯೇ ಕಾಲೇಜು ವಾರ್ಷಿಕೋತ್ಸವವನ್ನು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್  ಹಾಗೂ ಜೆಎಸ್ ಡಬ್ಲ್ಯೂ ಉಪಾಧ್ಯಕ್ಷ ಎಸ್.ಸಿ.ವಿಶ್ವನಾಥ , ಸಮುತ್ಕರ್ಷ ಟ್ರಸ್ಟ್ ಮಹಾನಿರ್ದೇಶಕ ಜಿತ್ರೇಂದ್ರ ಪೊ.ನಾಯಕ್ ಭಾಗವಹಿಸುತ್ತಾರೆ ಎಂದರು. ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಪಾಲ್ಗೊಳಲಿದ್ದಾರೆ.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರತಿಭಾ ಪುರಸ್ಕಾರ ಸೇರಿದಂತೆ‌ ವೈವಿದ್ಯಮಯ ಕಾರ್ಯಕ್ರಮ ನಡೆಯಲಿವೆ ಎಂದರು.
ಗೋಷ್ಠಿಯಲ್ಲಿ ಪ್ರಾಚಾರ್ಯ ಡಾ.ರೋಹಿತ ಯು.ಎಂ.ಕಾರ್ಯಕ್ರಮ ಸಂಯೋಜಕಿ ಪ್ರೋ. ಪಾರ್ವತಿ ಕಡ್ಲಿ ಪಾಲ್ಗೊಂಡಿದ್ದರು.

One attachment • Scanned by Gmail