ಮೇ 31ಕ್ಕೆ ಜಿಎಂಎಸ್  ಕಾಲೇಜಿನಲ್ಲಿ ಬೃಹತ್‌ ಉದ್ಯೋಗ ಮೇಳ

ದಾವಣಗೆರೆ.ಮೇ.೨೯: ನಗರದ ಜಿಎಂಎಸ್‌ ಅಕಾಡಮಿ ಪ್ರಥಮ ದರ್ಜೆ ಕಾಲೇಜು, ಜಿಎಂಐಟಿ ಆವರಣದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಜಿಎಂಐಟಿ ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಟಿ.ಆರ್.ತೇಜಸ್ವಿ ಕಟ್ಟಿಮನಿ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಟ್ಟು 35 ಕಂಪನಿಗಳಿಂದ 4800 ಉದ್ಯೋಗವಕಾಶಗಳು ವಿವಿಧ ಕಂಪನಿಗಳಲ್ಲಿ ಲಭ್ಯವಿದ್ದು, ಹತ್ತನೇ ಕಾಸ್ ಪಾಸಾದ ವಿದ್ಯಾರ್ಥಿಗಳಿಂದ  ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಉದ್ಯೋಗಾವಕಾಶಗಳು ದೊರೆಯಲಿವೆ ಎಂದು ಮಾಹಿತಿ ನೀಡಿದರು.ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು, ಸೈಡರ್ ಎಲೆಕ್ನಿಕ್, ಬಜಾಜ್ ಅಲಿಯನ್, ಬಿ ಎಫ್ ಡಬ್ಲ್ಯೂ, ಸಾಮಸಂಗ್, ಲೈಟಿಂಗ್ ಟೆಕ್ನಾಲಜೀಸ್, ಸೆವೆಂತ್ ಸೆನ್ ಟೆಕ್ನಾಲಜಿಸ್, ಜಿಎಂ ಸಮೂಹ ಸಂಸ್ಥೆಗಳು, ಫೇಸ್ ಪವರ್ ಸಿಸ್ಟಮ್ಸ್,  ಹೋಂಡಾ ಮೋಟಾರ್ಸ್, ಸಾಸ್ಮೋಸ್  ಟೆಕ್ನಾಲಜೀಸ್ ಮುಂತಾದ ಹಲವು ಪ್ರತಿಷ್ಟಿತ ಕಂಪನಿಗಳು ಭಾಗವಹಿಸಲಿವೆ ಎಂದು ತಿಳಿಸಿದರು.ಈಗಾಗಲೇ 2100 ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದು, ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.ಜಿಎಂಎಸ್ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಶ್ವೇತಾ ಮರಿಗೌಡರ್ ಮಾತನಾಡಿ, 31ನೇ ಬುಧವಾರದಂದು ಬೆಳಗ್ಗೆ 9.30ಕ್ಕೆ, ಕಾರ್ಯಕ್ರಮದ ಉದ್ಘಾಟನೆಯನ್ನು  ಶ್ರೀಶೈಲ ಎಜುಕೇಶನಲ್ ಟ್ರಸ್ಟ್  ಖಜಾಂಚಿ ಜಿ.ಎಸ್. ಅನಿತ್ ಕುಮಾರ್ ನೆರವೇರಿಸಲಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಡಿ ಕುಂಬಾರ್ ಮತ್ತು ವಿವಿಧ ರಾಜಕೀಯ ಗಣ್ಯರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಉದ್ಯೋಗ ಮೇಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಇತ್ತೀಚಿನ ಭಾವಚಿತ್ರದೊಂದಿಗೆ ತಮ್ಮ ಎಲ್ಲಾ ಕಲಿಕ ಅಂಕಪಟ್ಟಿಗಳು ಮತ್ತು ಬಯೋಡೇಟಾದೊಂದಿಗೆ ಕನಿಷ್ಠ 5 ರಿಂದ 10 ಪ್ರತಿಗಳೊಂದಿಗೆ ಬರಬೇಕಾಗಿ ಕೋರಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆವರೆಗೆ ಉದ್ಯೋಗ ಮೇಳವು ನಡೆಯಲಿದೆ. ಭಾಗವಹಿಸುವ ವಿದ್ಯಾರ್ಥಿಗಳು ನೊಂದಣಿ ಮಾಡಿಕೊಳ್ಳಲು https: //tinyurl.com/yne4jm54 ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬೇಕೆಂದು ಕೋರಿದರು.ಸುದ್ದಿಗೋಷ್ಟಿಯಲ್ಲಿ ತರಬೇತಿ ಮತ್ತು ಉದ್ಯೋಗ ತರಬೇತಿ ವಿಭಾಗದ ಸಂಯೋಜಕರಾದ ಅಭಿಷೇಕ್, ಅಭಿಲಾಷ್ ಇದ್ದರು.