ಮೇ.3 ರಿಂದ ವಿದ್ಯಾವರ್ಧಕದಲ್ಲಿ ಸಾಂಸ್ಕೃತಿಕ ಉತ್ಸವ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.03:- ನಗರದ ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ (ವಿವಿಸಿಇ) ಸಂಸ್ಥೆಯಲ್ಲಿ ಮೇ.3ರಿಂದ 5ರವರೆಗೆ ಮೂರು ದಿನಗಳ ವಾರ್ಷಿಕ ಸಾಂಸ್ಕೃತಿಕ ಉತ್ಸವ ವಿದ್ವತ್ 2024 ಅನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಾಂಸ್ಕೃತಿಕ ಕಾರ್ಯದರ್ಶಿ ಡಾ.ಬಿ.ಜಗದೀಶ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಈ ವಿದ್ಯುತ್ ಕಾರ್ಯಕ್ರಮಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಎನ್.ಕೆ.ಲೋಕನಾಥ್ ಅವರು ಚಾಲನೆ ನೀಡುವರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ವಿದ್ಯಾವರ್ಧಕ ಸಂಘದ ಖಜಾಂಚಿ ಶ್ರೀಶೈಲ ರಮ್ಮಣ್ಣನವರ್, ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಸದಾಶಿವೇಗೌಡ ಉಪಸ್ಥಿತರಿರುವರು. ಉದ್ಘಾಟನೆಯ ನಂತರ ಮೈಸೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.
ಎಲ್ಲರನ್ನು ಆಕರ್ಷಿಸುವ ಸಾಕಷ್ಟು ಸ್ಪರ್ಧೆಗಳನ್ನು ಒಳಗೊಂಡಿದ್ದು, ಪ್ರಮುಖವಾಗಿ ಡಾಗ್ ಶೋ, ಆಟೋ ಎಕ್ಸ್‍ಪೆÇೀ, ರಂಗೋಲಿ, ಫೀಟ್ ಆನ್ ಫೈರ್, ವಾಯ್ಸ್ ಆಫ್ ವಿವಿಸಿಇ, ಮೆಹೆಂದಿ, ಬೆಂಕಿಯಿಲ್ಲದ ಅಡುಗೆ ಮಾಡುವುದು, ಬಾಕ್ಸ್ ಕ್ರಿಕೆಟ್ ಚಾಂಪಿಯನ್‍ಶಿಪ್, ಫ್ಯಾಶನ್ ಫ್ರಾಂಟಿಯರ್, ಟಗ್ ಆಫ್ ವಾರ್, ಪಿಎಸ್ 4 ಕ್ಲಾಷ್, ಬ್ಯಾಡ್ಮಿಂಟನ್, ಫೆÇೀಟೋಗ್ರಫಿ ಸ್ಪರ್ಧೆ ಮತ್ತು ರೀಲ್ಸ್ ಸ್ಪರ್ಧೆಗಳು ಸೇರಿವೆ. ಮೊದಲ ದಿನದ ಸಂಜೆ ಸ್ಯಾಂಡಲ್‍ವುಡ್ ನೈಟ್ ಮತ್ತು ಲಗೋರಿ ಬ್ಯಾಂಡ್ ಪ್ರೇಕ್ಷಕರನ್ನು ರಂಜಿಸಲಿದೆ. ಎರಡನೇ ದಿನ ಬಾಲಿವುಡ್ ನೈಟ್ ಮತ್ತು ರಾಘವ್ ಚೈತನ್ಯ ಅವರಿಂದ ಗಾಯನ ಕಾರ್ಯಕ್ರಮ ಇರಲಿದೆ. ಮೂರನೇ ನೇ ದಿನದಂದು ಡಿಜೆ ರಾತ್ರಿ ಮತ್ತು ಅಂತರರಾಷ್ಟ್ರೀಯ ಡಿಜೆ ಕ್ಯಾಂಡಿಸ್ ರೆಡ್ಡಿಂಗ್ ತಂಡ ಯುವ ಪ್ರೇಕ್ಷಕರನ್ನು ರಂಜಿಸಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಹಾಯಕ ಪ್ರಾಧ್ಯಾಪಕರಾದ ಪುನೀತ್, ಆಡ್ರಿ ಆರ್ಲೀನ್, ವಿದ್ಯಾರ್ಥಿಗಳಾದ ಪ್ರಜ್ವಲ್ ಕಲಾಲ್, ಧರಣೇಶ್, ಹರ್ಷಿತ್, ಇಂಪನಾ ಉಪಸ್ಥಿತರಿದ್ದರು.