ಮೇ 28ರಂದು 132ನೇ ಡಾ.ಅಂಬೇಡ್ಕರ್ ಜಯಂತೋತ್ಸವ ವಿಜೃಂಭಣೆಯಿಂದ ಆಚರಣೆ :ಮಹಾವೀರ ಅಳ್ಳೊಳ್ಳಿಕರ್

ಸೇಡಂ, ಮೇ,26: ಸಂವಿಧಾನ ಶಿಲ್ಪಿ ವಿಶ್ವಜ್ಞಾನಿ ಡಾ. ಬಿ.ಆರ್.ಅಂಬೇಡ್ಕರ ರವರ 132ನೇ ಜಯಂತೋತ್ಸವ ಸಮಿತಿ ವತಿಯಿಂದ ಸೇಡಂ ಪಟ್ಟಣದಲ್ಲಿ ಇದೆ 28-05-2023ರಂದು ಬಹಳ ಅದ್ದೂರಿಯಾಗಿಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆಅಯುಷ್ಠಾನದಮ್ಮನಾಗಬಂತಜೀ ಶಾಂತವೀರ ಮುರಘರಾಜೇಂದ್ರ ಸ್ವಾಮಿಜಿ ಗುರುಮಿಠಕಲ್ ಡಾ.ನಂಜುಂಡ ಸ್ವಾಮಿಜಿ, ಜ್ಞಾನ ಪ್ರಕಾರ ಸ್ವಾಮಿಜಿ, ಮಲ್ಲಿಕಾರ್ಜುನ ಮುತ್ಯಾ ಮಹಲ್ ರೋಜಾ ದಿವ್ಯಾ ಸಾನಿದ್ಯಾ ವಹಿಸಲಿದ್ದಾರೆ. ಉದ್ಘಾಟಕರಾಗಿ ಮಾನ್ಯ ಸಚಿವರಾದ ಆಯುಷ್ಠಾನ ಪ್ರಿಯಾಂಕ್ ಎಂ ಖರ್ಗೆ ಜಿ ಉದ್ಘಾಟಿಸಲ್ಲಿದು, ವಿಶೇಷ್ ಆಹ್ವಾನಿತರಾಗಿ ಚಲನಚಿತ್ರ ನಟರಾದ ಚೇತನ ಅಹಿಂಸಾ, ನಂಜರ್ಲಾ ರಾಜೇಶ ರಾಷ್ಟ್ರೀಯ ಅಧ್ಯಕ್ಷರ ಸಮಿತಿ ಸೇನಾದಳ್ ಮತ್ತು ಯುವ ಹೋರಾಟಗಾರರಾದ ಮೇಘರಾಜ್ ಚಂದಪ್ಪ ಹರಿಜನ್ ಆಗಮಿಸಲಿದ್ದಾರೆ. ಪುಷ್ಪಾರ್ಚನೆ ಮತ್ತು ಜ್ಯೋತಿ ಬೆಳಗುಸುವವರು ಮಾನ್ಯ ಶಾಸಕರಾದ ಡಾ.ಶರಣಪ್ರಕಾಶ ಪಾಟೀಲ್ ಊಡಗಿ, ಮಾಜಿ ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ್, ಬಾಲರಾಜಗುತ್ತೇದಾರ ಮತ್ತು ಲಲ್ಲೇಶ ರೇಡಿ ಮಾಡುವ ಮುಖಾಂತರ ಕಾರ್ಯಕ್ರಮ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಮಹಾಂತಪ್ಪ ಸಂಗಾವಿ, ದೊಳಪ್ಪ ದೊಡ್ಡಮನಿ, ರಾಜಕುಮಾರ ಕಪನೂರ, ಶರಣಪ್ಪ ತೇಲ್ಕೂರ, ಶಿವಕುಮಾರ ತೋಟ್ನಳ್ಳಿ, ಮಾರೂತಿ ಕೂಡಂಗಲ್ಕರ್, ಜಗನ್ನಾಥ ಚಿಂತಪಳ್ಳಿ, ಶಂಭುಲಿಂಗ ನಾಟಿಕರ, ಜೈಭೀಮ ಊಡಗಿ, ರೇವಣಸಿದ್ದಪ್ಪ ಸಿಂದೇ, ಮಲಕಪ್ಪ ಕೊಡದೂರ್, ಪ್ರಶಾಂತ ಸೇಡಂಕರ್, ವಿಜಯಕುಮಾರ ಶರ್ಮಾ, ಬಸವರಾಜ ಸಾಗರ ಇನ್ನಿತರೂ ಉಪಸ್ಥಿತಲಿದ್ದಾರೆ ಎಂದು ಜಯಂತೋತ್ಸವ ಸಮಿತಿ ಅಧ್ಯಕ್ಷರಾದ ಮಹಾವೀರ ಅಳ್ಳೊಳ್ಳಿಕರ್ ಹೇಳಿದರು. ಪಟ್ಟಣದಲ್ಲಿರುವ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮವನ್ನು ಬೆಳಿಗ್ಗೆ 10 ಗಂಟೆಗೆ ಮರೆವಣಿಗೆಯನ್ನು ವೃತ್ತ ನೀರಿಕ್ಷಕರಾದ ಸಂದಿಪ ಸಿಂಗ್ ಮತ್ತು ಆರಕ್ಷಕ ಉಪನಿರೀಕ್ಷಕರಾದ ಮಂಜುನಾಥ ರೆಡ್ಡಿ ಅವರು ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. ಮೆರೆವಣಿಗೆಯನ್ನು ಜಗಜ್ಯೋತಿ ಬಸವೇಶ್ವರ ಸರ್ಕಲ್ ಯಿಂದ ತಾಲೂಕ ಕ್ರೀಡಾಂಗಣ ವರೆಗೆ ಮೆರವಣಿಗೆ ಸಾಗಲಿದೆ. ಆದನಂತರ ಉಪಪರ ಸೇವಿಸಿ, ಕ್ರೀಡಾಂಗಣದಲ್ಲಿ ಸಮಯ 5 ಗಂಟೆಗೆ ಸಾಮಾಜಿಕ ಸ್ವಾಭಿಮಾನ ಸಮಾವೇಶಕಾರ್ಯಕ್ರಮವನ್ನು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.ಈ ವೇಳೆಯಲ್ಲಿಪ್ರಚಾರ ಸಮಿತಿ ಅಧ್ಯಕ್ಷರ ವಿಷ್ಣು ಊಡಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ವಾಲಿಕರ್, ಉಪಾಧ್ಯಕ್ಷ ಶಿವಾನಂದ ಭರಮಕರ್ ಖಾಜಾಂಚಿ ಸಿದ್ದಲಿಂಗ ಗೌತಮ ಸೇರಿದಂತೆ ಸಮಿತಿಯ ಸರ್ವ ಸದಸ್ಯರು ಇದ್ದರು.