ಮೇ 28ಕ್ಕೆ ಮಾನಿನಿ ಭಾವಚಿತ್ತಾರಗಳು ಪುಸ್ತಕ ಲೋಕಾರ್ಪಣೆ

ಬೀದರ ಮೇ 26:ಪುಣ್ಯವತಿ ವಿಸಾಜಿ ಹಾಗೂ ಡಾ. ಸಂಜೀವಕುಮಾರ ಅತಿವಾಳೆ ಸಂಪಾದಿತ ತೇಜಸ್ ಪ್ರಕಾಶನದ ‘ಮಾನಿನಿ ಭಾವಚಿತ್ತಾರಗಳುಟ ಎಂಬ ಪುಸ್ತಕ ಲೋಕಾರ್ಪಣೆ ಸಮಾರಂಭ ಮೇ 28ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಡಾ. ಅಂಬೇಡ್ಕರ್ ವೃತ್ತದ ಬಳಿಯ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕøತಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಬೀದರ್ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪೆÇ್ರ. ಬಿಎಸ್ ಬಿರಾದಾರ ಪುಸ್ತಕ ಬಿಡುಗಡೆ ಮಾಡುವರು. ಬೆಂಗಳೂರಿನ ಹಿರಿಯ ಸಾಹಿತಿ ಪೆÇ್ರ. ಶಶಿಕಲಾ ವಸದ ಪುಸ್ತಕ ಪರಿಚಯ ನೀಡುವರು.

ಕಿತ್ತೂರ ರಾಣಿ ಚೆನ್ನಮ್ಮ ಮಹಿಳಾ ಮಂಡಳದ ಅಧ್ಯಕ್ಷರಾದ ಡಾ. ಗುರಮ್ಮಾ ಸಿದ್ದಾರೆಡ್ಡಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ಜಗನ್ನಾಥ ಹೆಬ್ಬಾಳೆ ಭಾಗವಹಿಸುವರು.

ಗೌರವ ಉಪಸ್ಥಿತಿ ಮಹಿಳಾ ಮಾಂಜರಾ ಪತ್ತಿನ ಸಹಕಾರ ಬ್ಯಾಂಕಿನ್ ಅದ್ಯಕ್ಷರಾದ ಶಕುಂತಲಾ ಬೆಲ್ದಾಳೆ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷರಾದ ಭಾರತಿ ವಸದ, ಹಿರಿಯ ಸಾಹಿತಿ ಸುನೀತಾ ದಾಡಗೆ ಪಾಲ್ಗೋಳ್ಳುವರು.

ಕರ್ನಾಟಕ ಲೇಖಕಿಯರ ಸಂಘದ ಉಪಾಧ್ಯಕ್ಷರು ಹಾಊ ಪುಸ್ತಕದ ಸಂಪಾದಕರಾದ ಪುಣ್ಯವತಿ ವಿಸಾಜಿ ಪ್ರಾಸ್ತಾವಿಕ ಮಾತನಾಡುವರು. ಮಾನಿನಿ ಭಾವಚಿತ್ತಾರಗಳು ಪುಸ್ತಕದ ಸಂಪಾದಕರಾದ ಡಾ. ಸಂಜೀವಕುಮಾರ ಅತಿವಾಳೆ ಆಶಯ ನುಡಿಗಳನ್ನಾಡುವರು. ಡಾ. ಸುನೀತಾ ಕೂಡ್ಲಿಕರ್ ನಿರೂಪಣೆ ಮಾಡುವರು ಡಾ. ಮಹಾನಂದಾ ಮಡಕಿ ವಂದಿಸುವರು.