ಮೇ 27ರವರೆಗೆ ಮಕ್ಕಳಿಗೆ ಜಂತು ಹುಳ ನಿವಾರಣೆ ದಿನ

ಕಲಬುರಗಿ:ಮೇ.14:ಜಿಲ್ಲಾದ್ಯಂತ ನೆಡೆಯುತ್ತಿರುವ ರಾಷ್ಟ್ರೀಯ ಜಂತುಹುಳ ನಿವಾರಣೆ ದಿನದ ಅಂಗವಾಗಿ ಎರಡನೇ ಹಂತದಲ್ಲಿ ಶಾಲಾಪೂರ್ವ ಮಕ್ಕಳು ಮನೆಯಲ್ಲಿ ಇದ್ದಂತ ನಗರ ಮತ್ತು ಗ್ರಾಮ ಪ್ರದೇಶದಲ್ಲಿ ಇರುವ ಮಕ್ಕಳಿಗೆ ತಪ್ಪದೆ ಅಲ್ಬಂಡಝೊಲ್ ಮಾತ್ರೆಯನ್ನು ತೆಗೆದುಕೊಳ್ಳುವಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸಲಹೆ ನೀಡುವ ಕಾರ್ಯಕ್ರಮ ಮೇ 13ರಿಂದ ಆರಂಭಗೊಂಡಿದ್ದು, ಮೇ 27ರವರೆಗೆ ಜರುಗಲಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಆರ್‍ಸಿಎಚ್ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ್ ಅವರು ತಿಳಿಸಿದ್ದಾರೆ.
ನಂತರ ಅವರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್‍ಸಿಹೆಚ್ ಕಾರ್ಯಕ್ರಮದ ಅಡಿಯಲ್ಲಿ ಪ್ರಸ್ತುತ ಶಾಲಾ – ಕಾಲೇಜು ರಜೆ ಇರುವುದರಿಂದ ಆಶಾ ಮತ್ತು ಅಂಗವಾಡಿ ಕಾರ್ಯಕರ್ತೆಯರು 1ರಿಂದ 19 ವರ್ಷ ವಯಸ್ಸಿನ ಎಲ್ಲಾ ಮಕ್ಕಳನ್ನು ಹತ್ತಿರದ ಮನೆ ಮನೆ ಭೇಟಿ ನೀಡಿ 400 ಎಂಜಿ ಅಲ್ಬಂಡಝೊಲ್ ಮಾತ್ರೆಗಳನ್ನು ನೀಡಬೇಕು ಹಾಗೆಯೇ ದಾಖಲೆಯನ್ನು ದತ್ತಾಂಶ ಪಡೆದು ಮಾಹಿತಿಯನ್ನು ಸಂಗ್ರಹಿಸಿ ವರದಿ ನೀಡಬೇಕು ಎಂದು ಅವರು ಸೂಚಿಸಿದ್ದಾರೆ.
ಮಕ್ಕಳಿಗೆ ಕಡ್ಡಾಯವಾಗಿ ಮಾತ್ರೆಯನ್ನು ಕೊಡಿಸಬೇಕು. ಸುರಕ್ಷಿತ ಹಾಗೂ ಪ್ರಯೋಜನಕಾರಿಯಾದ ಜಂತು ಹುಳ ನಾಶಕ ಮಾತ್ರೆಯನ್ನು ಉಚಿತವಾಗಿ ನೀಡಲಾಗುತ್ತದೆ. ಅಲ್ಬಂಡಝೊಲ್ ಮಾತ್ರೆಯನ್ನು ಅಗಿದು ನುಂಗಬೇಕು. ಇದಕ್ಕೆ ಕಾರಣ ಮಕ್ಕಳ ಅರಿವಿನ ಬೆಳವಣಿಗೆ ಮತ್ತು ಕಡಿಮೆ ಶಾಲಾ ಭಾಗವಹಿಸುವಿಕೆಗೆ ಕಾರಣವಾಗಬಹುದು ಎಂದು ಅವರು ತಿಳಿಸಿದ್ದಾರೆ.
ಆರ್‍ಕೆಎಸ್‍ಕೆ ಸಮಾಲೋಚಕರಾದ ರೇವಪ್ಪ ಕಾಂಬಳೆ ಜೇವರ್ಗಿ, ಸುಜಾತಾ ಹಿರೇಮಠ್ ಅಫಜಲಪುರ. ಪ್ರಾಥಮಿಕ ಆರೋಗ್ಯ ಸಂರಕ್ಷಣಾದಧಿಕಾರಿಗಳಾದ ಮಹಾನಂದಾ, ಕವಿತಾ, ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು .ಅರೋಗ್ಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿ ತಮ್ಮ ತಮ್ಮ ಕ್ಷೇತ್ರದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.