ಮೇ.26ರಂದು ವಿಜೃಂಭಣೆಯಿಂದ ಬಸವಜಯಂತಿ ಉತ್ಸವ:ರಾಜಶೇಖರ ನೀಲಂಗಿ

ಸೇಡಂ, ಮೇ,23: ಇಲ್ಲಿನ ಶ್ರೀ ಕೊತ್ತಲಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಇದೇ 26ರಂದು ಹಮ್ಮಿಕೊಳ್ಳಲಾಗಿರುವ ಬಸವಜಯಂತಿ ಉತ್ಸವ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಜರುಗಲಿದ್ದು ತಾಲೂಕಿನ ಸಮಸ್ತ ಜನರು ತನು ಮನದಿಂದ ಭಾಗವಹಿಸುವ ಮೂಲಕ ಇಡೀ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಬಸವ ಜಯಂತಿ ಉತ್ಸವ ಸಮಿತಿ ತಾಲೂಕು ಸಂಚಾಲಕ ರಾಜಶೇಖರ ನೀಲಂಗಿ ತಿಳಿಸಿದ್ದಾರೆ. ಪಟ್ಟಣದ ಹಾಲಪ್ಪಯ್ಯ ವಿರಕ್ತ ಮಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಖಿಲ ಭಾರತ ವೀರಶೈವ ಮಹಾಸಭಾ, ಮಹಾತ್ಮ ಬಸವೇಶ್ವರ ಸೇವಾ ಬಳಗ ಚಾರಿಟೇಬಲ್ ಮತ್ತು ವೆಕ್ಟೇರ್ ಟ್ರಸ್ಟ್, ಬಸವ ಕೇಂದ್ರ ತಾಲೂಕು ಘಟಕ, ಬಸವ ಉತ್ಸವ ಸಮಿತಿ, ವೀರಶೈವ ಲಿಂಗಾಯತ ಸೌಹಾರ್ದ ಪತ್ತಿನ ಸಹಕಾರಿ ಸಂಘ, ವೀರಶೈವ ಮಹಿಳಾ ಫೌಂಡೇಶನ್, ವೀರಶೈವ ಲಿಂಗಾಯತ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಹಾಗೂ ಬಸವ ಗೆಳೆಯರ ಬಳಗ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ಉತ್ಸವ ಕಾರ್ಯಕ್ರಮ ಜರಗಲಿದೆ, ಪಟ್ಟಣದ ಹಾಲಪ್ಪಯ್ಯ ವಿರಕ್ತಮಠದಲ್ಲಿ ಮೇ 23ರಂದು ಮಹಾತ್ಮ ಬಸವೇಶ್ವರ ಮತ್ತು ಆದಿ ಜಗದ್ಗುರು ರೇಣುಕಾಚಾರ್ಯರ ಕುರಿತು ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ ಹಾಗೂ ಇಲ್ಲಿನ ಶಿವಶಂಕರೇಶ್ವರ ಮಠದಲ್ಲಿ ಮೇ 24 ರಿಂದ 26ರ ವರೆಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಊಡಗಿ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಅವರು ಪಾಲ್ಗೊಳ್ಳಲಿದ್ದಾರೆ ಎಂದು ರಾಜಶೇಖರ ನೀಲಂಗಿ ಅವರು ತಿಳಿಸಿದ್ದಾರೆ. ಮೇ 26ರಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಬಸವೇಶ್ವರ ವೃತ್ತದಿಂದ ಕರೋಡಗಿರಿ ಹನುಮಾನ ದೇವಸ್ಥಾನದವರೆಗೆ ಬೃಹತ್ ಕಾರು ಮತ್ತು ಬೈಕ್ ರಾಲಿ ನಡೆಯಲಿದೆ, ಸಂಜೆ 4 ಗಂಟೆಗೆ ಬೃಹತ್ ಶೋಭಾ ಯಾತ್ರೆ ಜರುಗಲಿದ್ದು,ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಊಡಗಿ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಶೋಭಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಪಟ್ಟಣದ ಕರೋಡಗಿರಿ ಹನುಮಾನ ದೇವಸ್ಥಾನದಿಂದ ಶ್ರೀ ಕೊತ್ತಲಬಸವೇಶ್ವರ ದೇವಾಲಯದವರೆಗೆ ಬೃಹತ್
ಶೋಭಾಯಾತ್ರೆ ಸಂಜೆ 6 ಗಂಟೆಗೆ ಜರಗಲಿದೆ ಎಂದರು.ನಡೆಯಲಿರುವ ಧರ್ಮ ಸಭೆ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಶಿವಶಂಕರೇಶ್ವರ ಮಠದ ಶ್ರೀಗಳಾದ ಷ.ಬ್ರ. ಶ್ರೀ ಶಿವಶಂಕರ ಶಿವಾಚಾರ್ಯ ಮಹಾಸ್ವಾಮೀಜಿಗಳು ವಹಿಸಲಿದ್ದಾರೆ, ಬಾಲಗಾಂವ್ ಶ್ರೀ ಗುರುದೇವಾಶ್ರಮದ ಪೂಜ್ಯಶ್ರೀ ಅಮೃತಾನಂದ ಸ್ವಾಮೀಜಿಗಳು ಅನುಭವಾಮೃತ ನೀಡಲಿದ್ದಾರೆ, ನಾಲವಾರದ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದ ಶ್ರೀಗಳಾದ ಷ.ಬ್ರ.ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯವನ್ನು ವಹಿಸಲಿದ್ದಾರೆ, ನಿಡಗುಂದಾದ ಶ್ರೀಗಳ ಷ.ಬ್ರ. ಶ್ರೀ ಕರುಣೇಶ್ವರ ಶಿವಾಚಾರ್ಯರು, ಹಾಲಪ್ಪಯ್ಯ ವಿರಕ್ತ ಮಠದ ಶ್ರೀಗಳಾದ ಪಂಚಾಕ್ಷರ ಮಹಾಸ್ವಾಮಿಗಳು, ಶ್ರೀ ಸದಾಶಿವ ಸ್ವಾಮೀಜಿ, ತೊಟ್ನಳ್ಳಿಯ ಶ್ರೀ ಮಹಾಂತೇಶ್ವರ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳಾದ ಷ.ಬ್ರ. ಡಾ.ತ್ರಿಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಗಳು, ಮಳಖೇಡ ಭಂಗಿಮಠದ ಷ.ಬ್ರ. ಶ್ರೀ
ಕೊಟ್ಟುರೇಶ್ವರ ಶಿವಾಚಾರ್ಯರು, ರಾಯಕೋಡದ ಶ್ರೀ ರೇವಣಸಿದ್ಧ ಶಿವಾಚಾರ್ಯರು, ಷ.ಬ್ರ. ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು, ಶ್ರೀ ಪಂಪಾಪತಿ ಸ್ವಾಮೀಜಿ, ಜಾಕನಹಳ್ಳಿಯ ಷ.ಬ್ರ. ಶ್ರೀ ಅಭಿನವ ಗವಿಸಿದ್ದಲಿಂಗೇಶ್ವರ ಶಿವಾಚಾರ್ಯರು,ಗುಂಡೇಪಲ್ಲಿಯ ಷ. ಬ್ರ.ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು, ಸುಲೇಪೇಟೆದ ಶ್ರೀಗಳಾದ ಗುರು ಖಠವಾಂಗೇಶ್ವರ ಸ್ವಾಮೀಜಿಗಳು, ಶ್ರೀ ರವಿ ಸ್ವಾಮಿ ಕೊಡ್ಲಾ, ಶ್ರೀ ಕೇದಾರಲಿಂಗಯ್ಯ ಸ್ವಾಮಿ ಬೆಳಕನಹಳ್ಳಿ, ಶ್ರೀ ಶ್ರೀಮಂತ ತಾತನವರು ಕಾರ್ಯಕ್ರಮದಲ್ಲಿ ಸಮ್ಮುಖ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಿಂಗರಾಜ ಅಪ್ಪಾ ಅವರು ವಹಿಸಲಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕಧ್ಯಕ್ಷ ಚಂದ್ರಶೆಟ್ಟಿ ಬಸವಣ್ಣಪ್ಪ ಬಂಗಾರ, ಬಸವ ಕೇಂದ್ರ ತಾಲೂಕಾಧ್ಯಕ್ಷ ಮುರುಗೆಪ್ಪ ಕೊಳಕೂರ ಅವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹಾಲಪ್ಪಯ್ಯ ವಿರಕ್ತ ಮಠದ ಶ್ರೀಗಳಾದ ಪಂಚಾಕ್ಷರ ಮಹಾಸ್ವಾಮಿಜಿ, ಉಮೇಶ ಪಾಟೀಲ ಯಾಕಪುರ, ನೀಲಕಂಠರಾವ ಪಾಟೀಲ ಹೊಸಳ್ಳಿ,ಶ್ರೀಮಂತ
ಅವಂಟಿ,ಶ್ರೀಮತಿ ಸುಲೋಚನಾ ಎಸ್,ಬಿಬ್ಬಳ್ಳಿ ಬಸವರಾಜ ರಾಯಕೋಡ, ಬಸವರಾಜ ಕೂಸ್ಟಿ ಸಿದ್ದಣ್ಣ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.