
ಕಲಬುರಗಿ,ಮೇ.23- ಪ್ರತಿವರ್ಷದಂತೆ ಈ ವರ್ಷವೂ ಜೇವರ್ಗಿ ತಾಲೂಕಿನ ಕೂಡಿ ಗ್ರಾಮದ ಹಜರತ್ ಬಾಬಾ ಫಕ್ರೋದಿನ್ ಸೊಹರವರ್ದಿ ಕೂಡಿ ದರ್ಗ ಜಾತ್ರಾ ಮಹೋತ್ಸವ ಮೇ.25ರಿಂದ ಮೂರು ದಿನಗಳ ಕಾಲ ಜರುಗಲಿದ್ದು, ಈ ಉತ್ಸವಕ್ಕೆ ಕೂಡಿ, ಕೋಬಾಳ ,ಬಣಮಿ, ಮಂದರವಾಡ, ಹಿಪ್ಪರಗಾ ಕೋನಾ, ಗ್ರಾಮಗಳ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಲಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಬಾಬುರಾವ್ ಕೋಬಾಳ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಜಗನ್ನಾಥ್ ನಿಂಗಬೋ ಕೋಬಾಳ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿನಾಂಕ 25.05.2023 ರಂದು ಗುರುವಾರ ಸಂದಲ್ ಮಾಲಿ (ಗಂಧ) ಜರುಗಲಿದ್ದು ದಿನಾಂಕ 26-05_2023 ರಂದು ಶುಕ್ರವಾರ ದೀಪ ಅಲಂಕಾರ (ಚಿರಾಗಾ) ಹಾಗೂ ಇದೆ ದಿನ ಎಮ್ ಎಸ್ ಕೆ ಮಿಲ್ ಜಿಲಾನಬಾಧ ಗುಲ್ಬರ್ಗಾ ಸದ್ಭಕ್ತರಿಂದ ಸಹಿತ ದಿಪೆÇೀತ್ಸವ ಕಾರ್ಯಕ್ರಮ ಬಹು ವಿಜೃಂಭಣೆಯಿಂದ ನಡೆಸಲಾಗುತ್ತದೆ ಹಾಗೂ ಈ ದಿನ ರಾತ್ರಿ 10 ಗಂಟೆಯಿಂದ ಗೀಗಿ ಪದಗಳು ಹಾಗೂ ಖವಾಲಿ ಕಾರ್ಯಕ್ರಮ ನಡೆಯುತ್ತವೆ ದಿನಾಂಕ್ 27 -5- 2023 ರಂದು ಶನಿವಾರ ಮುಂಜಾನೆ 8 ರಿಂದ 10 ಗಂಟೆಯವರೆಗೆ ಹಾಗೂ ಸಂಜೆ 4 ರಿಂದ 6:00 ವರೆಗೆ ಜಂಗಿ ಪೈಲ್ವಾನರ ಕುಸ್ತಿ ನಡೆಯಲಿವೆ, ವಿಶೇಷ ಸೂಚನೆ: ಜೇವರ್ಗಿ ಹಾಗೂ ಗುಲ್ಬರ್ಗದಿಂದ ಕೂಡಿ ದರ್ಗಾದವರಿಗೆ ಹಾಗೂ ಕೂಡಿವರೆಗೆ ವಿಶೇಷ ಬಸ್ಸಿನ ಸೌಕರ್ಯ ಇರುತ್ತದೆ ಎಂದು ಗ್ರಾಮ ಪಂಚಾಯತ್ ಕೂಡಿ ಅಧ್ಯಕ್ಷರು ಸರ್ವ ಪದಾಧಿಕಾರಿಗಳು ಹಾಗೂ ಸದ್ಭಕ್ತ ಮಂಡಳಿ ದರ್ಗಾ ಕೂಡಿ ಯವರು ಮನವಿ ಮಾಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ನಾಡಿನ ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಿದ್ದಾರೆ.