ಮೇ.25 ರಿಂದ ಸ್ವಚ್ಛ ಭಾರತ ಮಿಷನ್ ಅಭಿಯಾನ


ಸಂಜೆವಾಣಿ ವಾರ್ತೆ
ಸಂಡೂರು :ಮೇ: 21 ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಚ ಭಾರತ ಮಿಷನ್ ನಗರ 2.0 ಯೋಜನೆಯೊ ಅಡಿ ರಾಷ್ಟ್ರಮಟ್ಟದಲ್ಲಿ ಪರಿಣಾಮ ಭೀರುವ ಅಭಿಯಾನವನ್ನು ಮೇ 25 ರಿಂದ ಜೂನ್ 5ರ ವರೆಗೂ ಪ್ರಾರಂಭಿಸಿದ್ದು, ಪ್ಲಾಸ್ಟೀಕ್ ಕ್ಯಾರಿಬ್ಯಾಗ್ ಸೇರಿದಂತೆ ಆಟಿಕೆ ವಸ್ತುಗಳು ಬಳಸಿದ ದಿನಪತ್ರಿಕೆಗಳು ಹಳೆ ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಂಥಹ 6 ಬಗೆಯ ನವೀಕರಿಸಿ ಮರು ಬಳಸಬಹುದಾದಂಥಹ ವಸ್ತುಗಳ ಉತ್ಪಾದನೆಯನ್ನು ಕಡಿಮೆ ಗೊಳಿಸಿಲು ಮತ್ತು ಸುಸ್ತಿರ ಜೀವನ ಪದ್ದತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ರಕ್ಷಿಸುವುದು ಲೈಫ್ ಮಿಷಿನ್ ಪ್ರಮುಖ ಉದ್ದೇಶ ಎಂದುಪುರಸಭೆಯ ಮುಖ್ಯಾಧಿಕಾರಿ ಖಾಜಾ ಮೈನುದ್ದೀನ್ ರವರು ತಿಳಿಸಿದರು.
ಅವರು ಪಟ್ಟಣದ ವಿಠೋಬಾ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಚ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅವರು ಮುಂದುವರೆದು ನನ್ನ ಜೀವನ ನನ್ನ ಸ್ವಚ್ಚ ನಗರ ಯೋಜನೆಯ ನನ್ನ ಜೀವನ ನನ್ನ ಸ್ವಚ್ಚ ಕಾರ್ಯಕ್ರಮದಡಿ ರೆಡ್ಯೊಸ್ ಕಡಿಮೆಗೊಳಿಸುವುದ ಮರು ಬಳಕೆ ಪುನರ್ ಬಳಕೆ ಕಾರ್ಯನಿರ್ವಹಿಸುತ್ತಿರುವ ವಣ ತ್ಯಾಜ್ಯ ಸಂಗ್ರಹಣ ಕೆಂದ್ರ ಅಥವಾ ಗುರುತಿಸಿರುವ ವಸ್ತು ಮರುಪಡೆಯುವ ಸೌಲಭ್ಯ ಕೇಂದ್ರಗಳನ್ನು ಬಳಸಿ ನನ್ನ ಜೀವನ ನನ್ನ ನಗರ ಯೋಜನೆಯನ್ನು ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಪರಿಣಮಕಾರಿಯಾಗಿ ಹಮ್ಮಿಕೊಳ್ಳಲು ಕೈಗೊಳ್ಳಬೆಕಾದ 6 ಉತ್ಪನ್ನಗಳ ಪ್ಲಾಸ್ಟಿಕ್ ಚೀಲ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ಗಳು ಎಲೆಕ್ಟರ್ರಾನಿಕ್ ವಸ್ತು ಆರ್. ಆರ್. ಕೇಂದ್ರಗಳು ತ್ಯಾಜ್ಯಗಳ ಆಧಾರದ ಮೇಲೆ 6 ವಿಭಾಗಗಳನ್ನು ಹೊಂದಿರಬೇಕೆಂದು ತಿಳಿಸಿದರು.
ಪುರಸಭಾ ಅಧಿಕಾರಿ ಹಗರಿ ಪ್ರಭುರಾಜ ಮಾತನಾಡಿ ರಾಷ್ಟ್ರಮಟ್ಟದಲ್ಲಿ ಪರಿಣಾಮ ಬೀರುವ ಸಾರ್ವಜನಿಕರು / ನಾಗರೀಕರು / ವಿದ್ಯಾಸಂಸ್ಥೆಗಳು  /ವಾಣಿಜ್‍ಯ ಸಂಸ್ಥೆಗಳು, ಔದ್ಯೋಗಿಕ ಉದ್ಯಮದವರು ಬಳಸಿದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಆಟಿಕೆ ವಸ್ತು ಹಳೆ ಬಟ್ಟೆಗಳ ಹಳೆ ಪಠ್ಯಪುಸ್ತಗಳು ದಿನ ಪತ್ರಿಕೆಗಳು ಮಾಸ ಪತ್ರಿಕೆಗಳು ಎಲೆಕ್ಟ್ರಾನಿಕ್ ವಸ್ತುಗಳು ಮುಂತಾದ 6 ವಿವಿಧ ಬಗೆಯ ನವೀಕರಿಸಬಹುದಾದ ಅಥವಾ ಮರುಗೊಳಿಸಲು ಅರ್ಹ ವಸ್ತುಗಳನ್ನು ಕೇಂದ್ರಗಳಿಗೆ ನೀಡುವವರಿಗೆ ತ್ಯಾಜ್ಯಾ ಆಧಾರದ ಮೇಲೆ ಪ್ರೋತ್ಸಾಹವನ್ನು ನೀಡಲಾಗುವುದು. ಪ್ರತಿ ದೇಣಿಗೆದಾರರು ಅಬಿಯಾನದಲ್ಲಿ ಭಾಗವಹಿಸದಲ್ಲಿ ಡಿಜಿಟಲ್ ಪ್ರಮಾಣ ಪತ್ರ ಪಡೆಯಲಾಗುತ್ತದೆ. ಈ ಅಭಿಯಾನ ಕಾರ್ಯಕ್ರಮಗಳು ರಾಮಕೃಷ್ಣ ಶಾಲೆಯ ಹತ್ತಿರ, ಕನ್ನಿಕಾ ಪರಿಮೇಶ್ವರ ದೇವಸ್ಥಾನದ ಎದುರುಗಡೆ ಪುರಸಭಾ ಬಸ್ ನಿಲ್ದಾಣದಲ್ಲಿ 3 ಕಡೆ ನಡೆಯುವವರು. ದೇಣಿಗೆದಾರರಿಂದ ಉದ್ಘಾಟನೆ ಎನ್ನುವ ಶಿರ್ಷಿಕಯಡಿ ಕಾರ್ಯಕರಮಗಳ ಉದ್ಘಾಟನೆಯನ್ನು ಸ್ಥಳೀಯ ಜನ ಪ್ರತಿನಿಧಿಗಳು ಲೋಕಸಭಾ ರಾಜ್ಯಸಭಾ ವಿಧಾನಸಭಾ ವಿಧಾನ ಪರಿಷತ್ ಹಲವಾರು ಮಹಾನೀರಯ ಕಾರ್ಯಕ್ರಮವನನು ಉದ್ಘಾಟಿಸುವರು ಎಂದು ಹಗರಿ ಪ್ರಭುರಾಜರವರು ತಿಳಿಸಿದರು. ಈ ಸಂದರ್ಭದಲ್ಲಿ ಶಿವರಂಜಿನಿ ಅರುಣಾ ಪಾಟಿಳ ಜಗದೀಶ ಶ್ರೀಕುಮಾರ ತಳವಾರ ವೆಂಕಟೇಶ್ ರಫಿಕ್ ಅಂಜಿನಪ್ಪ ಶ್ರೀನಿವಾಸ ಅಲ್ಲದೇ ಪುರಸಭೆಯ ಸಿಬ್ಬಂದಿಯವರು ಉಪಸ್ಥಿತರಿದ್ದದರು.