ಮೇ. 25 ರಂದು 130 ವಟುಗಳ ಸಾಮೂಹಿಕ ಉಪನಯನ

ಕಲಬುರಗಿ:ಮೇ.23:ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಜನ್ಮ ಸುವರ್ಣ ಮಹೋತ್ಸವದ ಅಂಗವಾಗಿ ಇಲ್ಲಿನ ಸತ್ಯಾತ್ಮ ಸೇನೆ ವಿವಿಧೋz್ದÉೀಶ ಸೇವಾ ಸಂಸ್ಥೆ ಅಡಿಯಲ್ಲಿ ಮೇ 25 ರ ಗುರುವಾರ ಏಕಕಾಲಕ್ಕೆ 130 ವಟುಗಳ ಉಚಿತ ಸಾಮೂಹಿಕ ಉಪನಯನ, ಬ್ರಹ್ಮೋಪದೇಶ ಸಮಾರಂಭ ನಡೆಯುತ್ತಿದೆ.

ಇಲ್ಲಿನ ಬ್ರಹ್ಮಪೂರ ಬಡಾವಣೆಯಲ್ಲಿರುವ ಲಕ್ಷ್ಮೀ ನರಸಿಂಹ ಮಂದಿರದ ಆವಣದಲ್ಲಿ 130 ವಟುಗಳಿಗೆ ಗಾಯತ್ರಿ ಮಂತ್ರ ಉಪದೇಶ, ಬ್ರಹ್ಮೋಪದೇಶದ ಸಮಾರಂಭ, ಅಕ್ಷತಾರೋಪಣ ನೆರವೇರಲಿದೆ. ನಂತರದಲ್ಲಿ ಇಲ್ಲೇ ವಟುಗಳಿಗೆ ಹೋಮ- ಹವನಾದಿಗಳು ನಡೆಯಲಿವೆ. ಇಲ್ಲಿನ ಯಾಜ್ಞಿಕ ಕೆಲಸಕಾರ್ಯಗಳ ನಂತರ ಪಕ್ಕದಲ್ಲೇ ಇರುವ ರುಕ್ಮಿಣಿ ಪಾಂಡುರಂಗ ಮಂದಿರದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಮಾನವನಿಗೆ ನೀಡುವ ಷೋಡಶ ಸಂಸ್ಕಾರಗಳಲ್ಲಿ ಶ್ರೇಷ್ಠವಾದಂತಹದ್ದು ಉಪನಯನ ಸಂಸ್ಕಾರ, ಉಪ ಎಂದರೆ ಹತ್ತಿರ, ನಯನ ಎಂದರೆ ಕರೆÀದುಕೊಂಡು ಹೋಗುವುದು ಅಂದರೆ ಗುರುಗಳ ಹತ್ತಿರ ವಟುಗಳಿಗೆ ಕರೆದಕೊಂಡು ಹೋಗುವುದು, ವೇದಾಧ್ಯಯನಕ್ಕೆ ವಟುಗಳನ್ನು ಕರೆದೊಯ್ಯುವುದೇ ಆಗಿದೆ.

ಉಪಯನಯನದಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಗಾಯತ್ರಿ ಮಂತ್ರೋಪದೇಶ. ಗಾಯತ್ರಿ ಮಂತ್ರ ಜಪ ಅತ್ಯಂತ ಅವಶ್ಯಕವಾಗಿದೆ. ಇರಿಂದ ತೇಜಸ್ಸು, ಬುದ್ದಿಮತ್ತೆ ಚುರುಕಾಗುತ್ತದೆ. ಇವೆಲ್ಲ ಅಂಶಗಳ ಹಿನ್ನೆಲೆಯಲ್ಲಿ ಉಪನಯನ ಸಂಸ್ಕಾರ ಅತ್ಯಂತ ಮಹತ್ವ ಪಡೆದುಕೊಡಿದೆ. ಇಂತಹ 130 ವಟುಗಳಿಗೆ ಉಪನಯನ ಏಕಕಾಲಕ್ಕೆ ಉಚಿತವಾಗಿ ನೆರವೇರಿಸಲು ಇಲ್ಲಿನ ಸತ್ಯಾತ್ಮ ಸೇನೆಯವರು ಮುಂದಾಗಿದ್ದಾರೆ.

ಈಗಾಗಲೇ 2012 ರಿಂದ ಇಂತಹ ಸಾಮೂಹಿಕ ಉಪನಯನ ಸಮಾರಂಭಗಳನ್ನು ನೆರವೇರಿಸಿ ಗಮನ ಸೆಳೆದಿರುವ ಸತ್ಯಾತ್ಮ ಸೇನೆಯ ಕಾರ್ಯಕರ್ತರು ಅದಾಗಲೇ 4 ನೇ ತಮ್ ಸಾಮೂಹಿಕ ಉಪನಯನ ಸಮಾರಂಭದ ಯಶಸ್ಸಿಗಾಗಿ ಕಳೆದ 2 ತಿಂಗಳಿಂದಲೇ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸತ್ಯಾತ್ಮ ತೀರ್ಥರ ಸ್ಮರಣೆಯಲ್ಲಿ ಸಾಗಿರುವ ಈ ಉಪನಯನ ಸಮಾರಂಭದಲ್ಲಿ ಮಹಿಳಾ, ಪುರುಷ ಸವಾಕರ್ತರು ಹಗಲು ರಾತ್ರಿ ಪರಿಶ್ರಮವಹಿಸುತ್ತಿದ್ದಾರೆ.

ಮೇ. 25 ರ ಗುರುವಾರ ನಡೆಯಲಿರುವ ಸಾಮೂಹಿಕ ಉಪನಯನ ಸಮಾರಂಭದಲ್ಲಿ ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಪಾದರು ಪಾಲ್ಗೊಳ್ಳುತ್ತಿರುವುದು ವಿಸೇಷ ಹಾಗೂ ಮಂಗಳಮಯವಾದಂತಹ ಸಂದರ್ಭವಾಗಿರಲಿದೆ. ಅಂದು ಬೆಳಗ್ಗೆಯೇ 8. 40 ಕ್ಕೆ ಉಪನಯನವಾದ ವಟುಗಳಿಗೆ ಅಕ್ಷತಾರೋಪಣ ನೆರವೇರಲಿದೆ. ಇದಾದ ನಂತರ ಜಗದ್ಗುರುಗಳಿಂದಲೇ ವಟುಗಳಿಗೆ ಗಾಯತ್ರಿ ಮಂತ್ರೋಪದೇಶ ನಡೆಯಲಿದೆ. ಜೊತೆಗೇ ತಪ್ತ ಮುದ್ರೆ ಧಾರಣೆಯೂ ನಡೆಯಲಿದೆ.

ಸದರಿ ಸಾಮೂಹಿಕ ಉಪನಯನ ಸಮಾರಂಭದ ಸಿದ್ಧತೆಗಾಗಿ ಉತ್ತರಾದಿ ಮಟಾಧಿಕಾರಿ ರಾಮಾಚಾರ್ಯ ಘಂಟಿ, ಆನಂದತೀರ್ಥಾಚಾರ್ಯ ಜೋಷಿ, ಪಂ. ವಿನೋದಾಚಾರ್ಯ ಗಲಗಲಿ, ವಸಂತ ಮಾಧವ ಚೆನ್ನೂರ್, ಜಯತೀರ್ಥ, ನಾರಾಯಣ ಜೋಷಿ, ಕೃಷ್ಣಾ ಜೋಷಿ, ರಘೋತ್ತಮ ಘಂಟಿ, ಲಕ್ಷ್ಮಣಾಚಾರ್ಯ ಸರಡಗಿ, ಪಂ. ಸಮೀರಾಚಾರ್ಯ ಹೋಳಗಿ, ಸಮೀರ ಮೋಗರೆ, ಅಮೀತ್, ಉತ್ತಮ, ಉಡುಪಿ, ಅನಂತರಾಜ್, ವಿಜಯ ಪುರಾಣಿಕ, ಬದರಿ, ನರಹರಿ, ಶ್ರೀಪಾದ, ಅಶೋಕ ಸಾವಳಗಿ, ಅಧೋಕ್ಷಜ ಸೇರಿದಂತೆ ಸತ್ಯಾತ್ಮ ಸೇನೆಯ ಎಲ್ಲ ಕಾರ್ಯಕರ್ತರು ಸಾಮೂಹಿಕ ಉಪನಯನ ಸಮಾರಂಭದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.