
ಜಗಳೂರು.ಮೇ.೨೩:- ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ನೂತನ ಕಾರ್ಯಕಾರಿ ಸಮಿತಿ ರಚನೆ ಕುರಿತುಮೇ. 25 ರಂದು ಸಭೆ ಕರೆಯಲಾಗಿದೆ ಕುಟುಂಬ ಪಿಂಚಣಿ ದಾರರು ಹಾಗೂ ನಿವೃತ್ತ ನೌಕರರ ಸಂಘದ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ.ಪಾಲಯ್ಯ ಕರೆ ನೀಡಿದರು.ಪಟ್ಟಣದ ಪತ್ರಿಕಾಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಿಂದ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.2023-24 ರಿಂದ 2027-28 ನೇ ಸಾಲಿನ ಅವಧಿಗೆ ನೂತನ ಕಾರ್ಯಕಾರಿ ಸಮಿತಿಗೆ ನಿರ್ದೇಶಕರ ಆಯ್ಕೆ ಮತ್ತು ನೂತನ ಕಾರ್ಯಕಾರಿ ಸಮಿತಿ ರಚಿಸಲು ಅಜೀವ ಸದಸ್ಯತ್ವ ಹೊಂದಿದವರು ಸಲಹೆ ಸಹಕಾರ ನೀಡಬೇಕು ಎಂದರು.ಪ್ರತಿ ಪಂಚಾಯಿತಿಯಲ್ಲಿ 5 ಕ್ಕಿಂತ ಅಧಿಕ ನಿವೃತ್ತ ನೌಕರರು ಅಜೀವ ಸದಸ್ಯತ್ವ ಹೊಂದಿದಲ್ಲಿ ಒಬ್ಬ ನಿರ್ದೇಶಕರನ್ನು ಆಯ್ಕೆ ಮಾಡಲಾಗುವುದು.5 ಕ್ಕಿಂತ ಕಡಿಮೆ ಅಜೀವ ಸದಸ್ಯತ್ವ ಹೊಂದಿ ದವರನ್ನು ಪಕ್ಕದ ಪಂಚಾಯಿತಿಗೆ ಸೇರಿಸಲಾಗುವುದು .ತಾಲೂಕು ಕೇಂದ್ರದ ಅಜೀವ ಸದಸ್ಯತ್ವ ಹೊಂದಿದ ಒಬ್ಬ ಮಹಿಳಾ ನಿರ್ದೇಶಕ ರನ್ನು ಆಯ್ಕೆಮಾಡಲಾಗುವುದು.ನಂತರ ಆಯ್ಕೆಯಾದ ನಿರ್ದೇಶಕ ರು ಮುಂದಿನ ಕಾರ್ಯಕಾರಿ ಸಮಿತಿಗೆ ಅಧ್ಯಕ್ಷ ಮತ್ತು ಕಾರ್ಯ ದರ್ಶಿ ಇವರನ್ನು ಆಯ್ಕೆಮಾಡಿಕೊಳ್ಳಲು ಅರ್ಹರಾಗಿರುತ್ತಾರೆ. ಸಂಘದ ಅಭಿವೃದ್ದಿಗೆ ಹೆಚ್ಚಿನ ದೇಣಿಗೆ ಅಜೀವ ಸದಸ್ಯರಿಗೆ ಆದ್ಯತೆ ನೀಡಲಾಗುವುದು.ಈ ಬಗ್ಗೆ ಆಕ್ಷೇಪಣೆ ಸಲ್ಲಿಸುವವರು ಮೇ.25 ಕ್ಕಿಂತ 3 ದಿನಗಳೊಳಗಾಗಿ ಲಿಖಿತವಾಗಿ ಮನವಿ ಸಲ್ಲಸತಕ್ಕದ್ದು ಎಂದು ಮಾಹಿತಿ ನೀಡಿದರು.ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಜೀವ ಸದಸ್ಯತ್ವ ಪಡೆದ ಬಿ.ದೆವೇಂದ್ರಪ್ಪ ನೂತನ ಶಾಸಕರಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.ನಿವೃತ್ತ ಸಂಘದಪರ ವಾಗಿ ಅಭಿನಂದನೆಗಳು ಇನ್ನಷ್ಟು ಸಂಘದ ಅಭಿವೃದ್ದಿಗೆ ಇನ್ನಷ್ಟು ಬಲ ಹೆಚ್ಚಿಸಿದೆ ಎಂದರು.”ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ದ ರಾಜ್ಯ ಪರಿಷತ್ತು ಸದಸ್ಯ ಮಂಜುನಾಥ್ ಶೆಟ್ಟಿ,ತಾಲೂಕು ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ,ತಾಲೂಕು ಉಪಾಧ್ಯಕ್ಷ ನಜೀರ್ ಸಾಹೇಬ್, ಸಹಕಾರ್ಯದರ್ಶಿ ಮಲ್ಲಿಕಾರ್ಜುನ್,ನಿರ್ದೇಶಕರಾದ ಸತ್ಯಪ್ಪ, ಹುಚ್ಚಲಿಂಗಯ್ಯ ಸೇರಿದಂತೆ ಇದ್ದರು.