
ಫರತಾಬಾದ:ಮೇ.20: ಸಮೀಪದ ಹೊನ್ನಕಿರಣಗಿ ಶ್ರೀ ಮರಗಮ್ಮ ದೇವಿಯ ರಥೋತ್ಸವವು ಇದೇ ತಿಂಗಳು 23 ರಂದು ಬಹು ವಿಜೃಂಭಣೆಯಿಂದ ನಡೆಯುತ್ತದೆ. ಶುಂಭ ನಿಶುಂಭರು ಸ್ವರ್ಗದಲ್ಲಿ ದೇವತೆಯನ್ನು ಪರಿ ಪರಿಯಾಗಿ ಕಾಡಿದ ಕಾರಣ ದೇವತೆಯು ನೊಂದು ಬೆಂಡಾಗಿ ಶ್ರೀ ದೇವಿಯ ಚರಣದಲ್ಲಿ ಪರಿ ಪರಿಯಿಂದ ಭಜಿಸಲು ದೇವಿಯು ಪ್ರತ್ಯಕ್ಷಳಾಗಿ ಶುಂಭ ನಿಶುಂಭರನ್ನು ಮರ್ದನ ಮಾಡಲು ಈ ಭೂಲೋಕದಲ್ಲಿ ಶ್ರೀ ಮರಗಮ್ಮ ದೇವಿ ಎಂಬ ಅವತಾರ ತಾಳಿ ದುಷ್ಟರನ್ನು ಶಿಕ್ಷಿಸಿ, ಶಿಷ್ಯರನ್ನು ರಕ್ಷಿಸುವ ನಿಮಿತ್ಯ ಈ ಭೂಲೋಕದಲ್ಲಿ
ಜನಿಸಿದಳು. ಈ ಪ್ರಯುಕ್ತ ಪ್ರತಿ ಎರಡು ವರ್ಷಗಳಿಗೊಮ್ಮೆ ಶ್ರೀ ದೇವಿಯ ಜಾತ್ರೆಯು ಗ್ರಾಮದ ಭಕ್ತರು ಹಾಗೂ ಬೇರೆ ಬೇರೆ ರಾಜ್ಯದ ಭಕ್ತರ ಸಮ್ಮುಖದಲ್ಲಿ ನಡೆಸಲಾಗುವುದು. ಇದೇ ಮೇ 22 ರಂದು ಸೋಮವಾರ ಬೆಳಗ್ಗೆ 6 ಗಂಟೆಗೆ ದೇವಿಯ ಗಂಗಸ್ಥಳ ಮತ್ತು ಮೇ 24 ಮಂಗಳವಾರ ಸಾಯಂಕಾಲ 6 ಗಂಟೆಗೆ ದೇವಿಯ ರಥೋತ್ಸವವು ಸಕಲ ವಾದ್ಯ ಕಲಾ ತಂಡದವರೊಂದಿಗೆ ಬಹು ವಿಜೃಂಭಣೆಯಿಂದ ಜರುಗುತ್ತದೆ. ನಂತರ ರಾತ್ರಿ 10 ಗಂಟೆಗೆ ಎರಡು ದಿನಗಳ ಕಾಲ ತಾಯಿಯ ಕರಳ ಮತ್ತು ರತ್ನ ಮಾಂಗಲ್ಯ ಎಂಬ ಸಾಮಾಜಿಕ ನಾಟಕಗಳ ಪ್ರದರ್ಶನ ಇರುತ್ತದೆ. ಮೇ 24 ರಂದು ಬುಧವಾರ ಜಂಗಿ ಪೈಲ್ವಾನರ ಕುಸ್ತಿಗಳು ನಡೆಯುತ್ತವೆ. ವಿಜೇತ ಪೈಲ್ವಾನರಿಗೆ ಬೆಳ್ಳಿಕಡೆ ಕೊಡಲಾಗುವುದು. ಸಾರ್ವಜನಿಕರು ತನು ಮನ ಧನದಿಂದ ಸೇವೆ ಸಲ್ಲಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಮರಗಮ್ಮ ದೇವಿ ಜೀಣೋದ್ಧಾರ ಸಮಿತಿಯು ಭಕ್ತರಲ್ಲಿ ವಿನಂತಿಸಿಕೊಳ್ಳುತ್ತದೆ.