ಮೇ 21ರಂದು ಗೌತಮ್ ಬುದ್ಧರ ಪವಿತ್ರ ಅಸ್ಥಿಗಳ ದರ್ಶನ

ಕಲಬುರಗಿ,ಮೇ.19: ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಇದೇ ಪ್ರಥಮ ಬಾರಿಗೆ ಮೇ 21ರಂದು ಮಹಾತ್ಮಾ ಗೌತಮ್ ಬುದ್ಧರ ಪವಿತ್ರ ಅಸ್ಥಿಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಬೌದ್ಧ ಭಿಕ್ಕುಣಿ ಆರ್ಯಜಿ ಸುಮನಾ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 84000 ಅಸ್ಥಿಗಳ ಪ್ರದರ್ಶನವನ್ನು ಮಾಡಲಾಗುತ್ತದೆ. ಬಿಹಾರ್ ಗಯಾದಲ್ಲಿ ಗೌತಮ್ ಬುದ್ಧರು 45 ವರ್ಷಗಳ ಕಾಲವರೆಗೆ ದು:ಖ ನಿವಾರಣೆಗಾಗಿ ಧ್ಯಾನದ ಮೂಲಕ ಪ್ರಚಾರ ಮಾಡಿದ್ದಾರೆ. ಇದು ಪವಿತ್ರವಾಗಿದೆ. ಧ್ಯಾನ್ ಪ್ರಾಪ್ತಿಗೊಂಡ ಸುರಕ್ಷಿತ ಅಸ್ಥಿಧಾತುಗಳು ಸುಮಾರು 84000 ಇದ್ದು, ಅವುಗಳು ಅನೇಕ ವಸ್ತು ಸಂಗ್ರಹಾಲಯದಲ್ಲಿ ಇವೆ. ಪ್ರತ್ಯಕ್ಷ, ಪ್ರಾಯೋಗಿಕವಾಗಿ ದರ್ಶನ ಸಿಗದೇ ಇದ್ದುದರಿಂದ ಮುತ್ತುಗಳು, ವಜ್ರಗಳ ರೀತಿ ಇದ್ದು, ಎಲ್ಲರೂ ದರ್ಶನ ಪಡೆಯುವ ಉದ್ದೇಶದಿಂದ ಕೆರಿ ಅಂಬಲಗಾದ ಸಂಕಲ್ಪ ಸಾಮಾಜಿಕ, ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಬುದ್ಧ ಪೂಜೆ, ಮಂಗಳ ಮೈತ್ರಿ, ಅತಿಥಿಗಳ ಸತ್ಕಾರ, ಮಹಾದಾನಿಗಳಿಗೆ ಅನಾಥಪಿಂಡಕ್ ಮತ್ತು ಧಮ್ಮ ಭೂಷಣ್ ಪುರಸ್ಕಾರ ಸಹ ಜರುಗಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮವು ಅಂದು ಬೆಳಿಗ್ಗೆ 10 ಗಂಟೆಗೆ ಬುದ್ಧ- ಭೀಮ್ ಗೀತೆಯಿಂದ ಕಾರ್ಯಕ್ರಮ ಆರಂಭವಾಗಲಿದೆ. ಮುತ್ತು ಮತ್ತು ವಜ್ರದ ಆಕಾರಗಳಲ್ಲಿರುವ ಗೌತಮ್ ಬುದ್ಧರ ಅಸ್ಥಿಗಳ ದರ್ಶನದಿಂದ ಪಾಪ ಪರಿಹಾರವಾಗಲಿದೆ. ಆ ಉದ್ದೇಶದಿಂದ ಔರಂಗಾಬಾದ್‍ನ ಭಂತೆ ಡಾ. ಹರ್ಷ ಬೋಧಿ ಮಹಾಥೇರೋ ಅವರು ಬುದ್ಧ ಅಸ್ಥಿಗಳ ಕುರಿತು ಪ್ರವಚನ ನೀಡುವರು. ಬೋಧ ಗಯಾದ ಭಿಕ್ಕುಣಿ ಸಂಘಮಿತ್ರ ಮಹಾಥೇರಿ, ಸಾಮಣೇರಿ ಖೇವಾ. ಸಾಮಣೇರಿ ಪ್ರಜ್ಞಾ, ಸಾಮಾಣೀರ್ ಅನಿರುದ್ಧ ಮುಂತಾದವರು ಉಪಸ್ಥಿತರಿರುವರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ದೇವಿಂದ್ರ ಬಾಲಕೆ, ಎಂ.ಎನ್. ಖರ್ಗೆ, ಸಿದ್ಧಾರ್ಥ ಚಿಮ್ಮಾಇದ್ಲಾಯಿ ಮುಂತಾದವರು ಉಪಸ್ಥಿತರಿದ್ದರು.