ಮೇ 20ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ

ಆನೇಕಲ್.ಮೇ.೧೪:ಕನ್ನಡ ಜಾಗೃತಿ ವೇದಿಕೆಯ ಯುವ ಘಟಕದ ರಾಜ್ಯಾಧ್ಯಕ್ಷರು ಮತ್ತು ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸಿಂಗೇನ ಅಗ್ರಹಾರ ಗೌರೀಶ್ ರವರ ಹುಟ್ಟು ಹಬ್ಬ ಅಂಗವಾಗಿ ಮೇ ೨೦ ರಂದು ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗೇನ ಅಗ್ರಹಾರ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಭಿರ ಹಾಗೂ ರಕ್ತದಾನ ಶಿಭಿರ ಆಯೋಜಿಸಲಾಗಿದೆ ಎಂದು ಗೌರೀಶಣ್ಣ ಅಭಿಮಾನಿ ಬಳಗದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇನ್ನು ವಿಶೇಷವಾಗಿ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಬಳಗ ಮತ್ತು ಗೌರೀಶಣ್ಣ ಅಭಿಮಾನಿ ಬಳಗ ಹಾಗೂ ಜಿ.ಕೆ.ವೈ.ಬಾಯ್ಸ್ ಮತ್ತು ನಿಸರ್ಗ ಸೇವಾ ಸಂಸ್ಥೆ ಮತ್ತು ಹಲವು ಪ್ರತಿಷ್ಠಿತ ಆಸ್ಪತ್ತೆಗಳ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಭಿರ ಹಾಗೂ ರಕ್ತದಾನ ಶಿಭಿರ ಆಯೋಜಿಸಲಾಗಿದ್ದು ಸಕಾಲಕ್ಕೆ ತಾಲ್ಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಶಿಭಿರದಲ್ಲಿ ದೊರೆಯುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಗೌರೀಶಣ್ಣ ಅಭಿಮಾನಿ ಬಳಗದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುಡ್ಡಹಟ್ಟಿ ರಾಮಸ್ವಾಮಿ, ದೇವರಾಜ್ ನಾಯಕ್, ಬಳಗಾರನಹಳ್ಳಿ ಕುಮಾರ್, ಸಿಂಗೇನಗ್ರಹಾರ ಹರೀಶ್, ಆನಂದ್,ಸಂತೋಷ್, ಸತ್ಯ, ಮುನಿಯಲ್ಲಪ್ಪ ಬಾಗವಹಿಸಿದ್ದರು.